ತಿರುವನಂತಪುರಂ: ಕಲುಷಿತ ನೀರು ಹಾಗೂ ಆಹಾರದಿಂದ ಮನುಷ್ಯರಿಗೆ ಹರಡುವ ಮಾರಕ ನೋರೋವೈರಸ್‌ನ ಪ್ರಕರಣಗಳು ಕೇರಳದ ವಯನಾಡು ಜಿಲ್ಲೆಯಲ್ಲಿ ದೃಢಪಟ್ಟಿವೆ. ಪ್ರಾಣಿಗಳ ಮೂಲದಿಂದ ಬರುವ ಈ ಕಾಯಿಲೆಯ ಬಗ್ಗೆ ಜನರು ಬಹಳ ಜಾಗೃತರಾಗಿರಬೇಕು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೂಚಿಸಿದ್ದಾರೆ. ಈ ಸಂಬಂಧ ಅವರು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.
ನೋರೋವೈರಸ್ ಕಾಯಿಲೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಹಾಗೂ ಅದನ್ನು ತಡೆಯುವ ಚಟುವಟಿಕೆಗಳನ್ನು ತೀವ್ರಗೊಳಿಸುವುದಕ್ಕೆ ಆದ್ಯತೆ ನೀಡುವಂತೆ ವೀಣಾ ಜಾರ್ಜ್ ನಿರ್ದೇಶನ ನೀಡಿದ್ದಾರೆ. ವಯನಾಡು ಜಿಲ್ಲೆಯ ಜನರು ಹೆಚ್ಚು ಜಾಗರೂಕತೆಯಿಂದ ಇರಬೇಕು ಎಂದು ಸೂಚಿಸಿದ್ದಾರೆ.
ವೀಣಾ ಜಾರ್ಜ್ ಅವರ ನೇತೃತ್ವದಲ್ಲಿ ಕೇರಳ ಆರೋಗ್ಯ ಇಲಾಖೆ ಶನಿವಾರ ಸಭೆ ನಡೆದಿದ್ದು, ವಯನಾಡಿನ ಸ್ಥಿತಿಯನ್ನು ಪರಾಮರ್ಶೆ ನಡೆಸಿದೆ. ವಯನಾಡಿನ ಪೂಕೊಡೆ ಪಶುವೈದ್ಯಕೀಯ ಕಾಲೇಜಿನ 13 ವಿದ್ಯಾರ್ಥಿಗಳಲ್ಲಿ ಈ ವೈರಸ್ ದೃಢಪಟ್ಟಿದೆ.
‘ಪ್ರಸ್ತುತ ಯಾರೂ ಕಳವಳಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆಯಿಂದ ಇರುವುದು ಅಗತ್ಯ. ನೀರನ್ನು ಕ್ಲೋರಿನ್ ಮೂಲಕ ಶುದ್ಧಗೊಳಿಸುವುದು ಸೇರಿದಂತೆ ವಿವಿಧ ಚಟುವಟಿಕೆಗಳು ನಡೆಯುತ್ತಿವೆ. ಕುಡಿಯುವ ನೀರು ಶುದ್ಧವಾಗಿದೆ ಎಂದು ಖಾತರಿಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ’ ಎಂದು ಸಚಿವೆ ತಿಳಿಸಿದ್ದಾರೆ.
‘ಸೂಕ್ತ ಮುನ್ನೆಚ್ಚರಿಕೆ ಕ್ರಮ ಹಾಗೂ ಚಿಕಿತ್ಸೆಯಿಂದ ಈ ಕಾಯಿಲೆಯನ್ನು ಬಹು ಬೇಗನೆ ಗುಣಪಡಿಸಬಹುದು. ಹೀಗಾಗಿ ಎಲ್ಲರೂ ಈ ರೋಗದ ಬಗ್ಗೆ ಅರಿವು ಹೊಂದಿರಬೇಕು ಅಂದರೆ, ಜಾಗರೂಕರಾಗಿರಬೇಕು’ ಎಂದು ಸಲಹೆ ನೀಡಿದ್ದಾರೆ.
ನೋರೋವೈರಸ್ ಲಕ್ಷಣಗಳೇನು?
ನೋರೋವೈರಸ್ ಎನ್ನುವುದು ಜಠರಕರುಳಿನ ಕಾಯಿಲೆಗೆ ಕಾರಣವಾಗುವ ವೈರಸ್‌ಗಳ ಗುಂಪು. ಈ ವೈರಸ್ ಹೊಟ್ಟೆಯ ಭಾಗದಲ್ಲಿ ಮತ್ತು ಕರುಳಿನಲ್ಲಿ ಉರಿಗೆ ಕಾರಣವಾಗುತ್ತದೆ. ಜತೆಗೆ ವಿಪರೀತ ವಾಂತಿ ಮತ್ತು ಅತಿಸಾರ ಉಂಟಾಗುತ್ತದೆ.
ನೋರೋವೈರಸ್ ಆರೋಗ್ಯವಂತ ಜನರಿಗೆ ಹೆಚ್ಚು ಅಪಾಯ ಉಂಟುಮಾಡುವುದಿಲ್ಲ. ಆದರೆ ಚಿಕ್ಕ ಮಕ್ಕಳು, ವೃದ್ಧರಲ್ಲಿ ಹಾಗೂ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರಲ್ಲಿ ಗಂಭೀರ ಸ್ವರೂಪದ ಸಮಸ್ಯೆ ಉಂಟುಮಾಡಬಲ್ಲದು.
ಈ ಪ್ರಾಣಿಜನ್ಯ ಕಾಯಿಲೆಯು ಸೋಂಕು ತಗುಲಿದ ವ್ಯಕ್ತಿಯಿಂದ ನೇರವಾಗಿ ಮತ್ತೊಬ್ಬರಿಗೆ ಹರಡಬಲ್ಲದು. ಸೋಂಕಿತ ವ್ಯಕ್ತಿ ಮಲ ಹಾಗೂ ವಾಂತಿಯಿಂದ ವೈರಸ್ ಹರಡುವುದು ಸಾಧ್ಯ. ಹೀಗಾಗಿ ರೋಗವು ಬಹಳ ವೇಗವಾಗಿ ಹಬ್ಬುವುದರಿಂದ ಅದರ ಬಗ್ಗೆ ಬಹಳ ಎಚ್ಚರಿಕೆ ಹೊಂದುವುದು ಅಗತ್ಯ. ಕಾಯಿಲೆ ಆರಂಭವಾದ ಎರಡು ದಿನಗಳ ಬಳಿಕ ವೈರಸ್ ಇನ್ನೊಬ್ಬರಿಗೆ ಹರಡಬಲ್ಲದು.
ಭೇದಿ, ಹೊಟ್ಟೆ ನೋವು, ವಾಂತಿ, ವಾಕರಿಕೆ, ಜ್ವರ, ತಲೆ ನೋವು ಮತ್ತು ಮೈ ಕೈ ನೋವು ಇದರ ಸಾಮಾನ್ಯ ಲಕ್ಷಣಗಳಾಗಿವೆ. ನಿರಂತರ ವಾಂತಿ ಮತ್ತು ಭೇದಿ ನಿರ್ಜಲೀಕರಣಕ್ಕೆ ಹಾಗೂ ಇತರೆ ಸಮಸ್ಯೆಗಳಿಗೆ ಎಡೆಮಾಡಿಕೊಡಲಿದೆ.
ತೆಗೆದುಕೊಳ್ಳಬೇಕಾದ ಕ್ರಮಗಳೇನು?
ಮಾರ್ಗಸೂಚಿಗಳ ಪ್ರಕಾರ, ನೋರೋವೈರಸ್ ಸೋಂಕಿತರ ಜನರು ಮನೆಯಲ್ಲಿ ವಿಶ್ರಾಂತಿ ಪಡೆಯಬೇಕು. ವೈದ್ಯರ ಅಲಹೆಗೆ ಅನುಗುಣವಾಗಿ ಒಆರ್‌ಎಸ್ ಅನ್ನು ಕುಡಿಯಬೇಕು ಮತ್ತು ಬಿಸಿ ನೀರು ಕುಡಿಯಬೇಕು. ಮುಂಜಾಗ್ರತಾ ಕ್ರಮವಾಗಿ ಸುತ್ತಲಿನ ಪರಿಸರ ಹಾಗೂ ದೈಹಿಕ ಸ್ವಚ್ಛತೆಗೆ ಕೂಡಲೇ ಆದ್ಯತೆ ನೀಡಬೇಕು. ಆಹಾರ ಸೇವನೆಗೂ ಮುನ್ನ ಮತ್ತು ಶೌಚಾಲಯ ಬಳಕೆ ಬಳಿಕ ಕೈಗಳನ್ನು ಸೋಪು ಹಾಗೂ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಪ್ರಾಣಿಗಳ ಜತೆಗೆ ಒಡನಾಟ ಇರುವವರು ಹೆಚ್ಚು ಜಾಗರೂಕತೆ ವಹಿಸಬೇಕು. ಕುಡಿಯುವ ನೀರಿನ ಮೂಲಗಳನ್ನು, ಬಾವಿಗಳು ಹಾಗೂ ನೀರು ಸಂಗ್ರಹಣೆಯ ಸಂಪುಗಳನ್ನು ಬ್ಲೀಚಿಂಗ್ ಪೌಡರ್ ಮೂಲಕ ಸ್ವಚ್ಛಗೊಳಿಸಬೇಕು. ಮನೆ ಬಳಕೆಗೆ ಕ್ಲೋರೋನೈಟ್ ಮಾಡಿದ ನೀರನ್ನು ಉಪಯೋಗಿಸಬೇಕು. ಕುಡಿಯಲು ಕುದಿಸಿದ ನೀರನ್ನೇ ಬಳಸಬೇಕು ಎಂದು ಸೂಚಿಸಲಾಗಿದೆ.
ಹಣ್ಣು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆದ ಬಳಿಕವೇ ಉಪಯೋಗಿಸಬೇಕು. ಸಮುದ್ರ ಮೀನು, ಏಡಿ, ಕಪ್ಪೆ ಚಿಪ್ಪು ಮುಂತಾದ ಚಿಪ್ಪಿನ ಪ್ರಾಣಿಗಳನ್ನು ಚೆನ್ನಾಗಿ ಬೇಯಿಸಿದ ಬಳಿಕವಷ್ಟೇ ಸೇವಿಸಬೇಕು. ಹಳೆಯ ಹಾಗೂ ತೆರೆದಿಟ್ಟ ಆಹಾರಗಳ ಸೇವನೆಯನ್ನು ಆದಷ್ಟು ತಡೆಯಬೇಕು ಎಂದು ಆರೋಗ್ಯ ಸಚಿವಾಲಯ ನಿರ್ದೇಶನ ನೀಡಿದೆ.
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…