ಕೇರಳದ ಸಾಕ್ಷರತಾ ಪರೀಕ್ಷೆಯಲ್ಲಿ100 ಕ್ಕೆ 98 ಅಂಕ ಪಡೆದ 96 ವರ್ಷದ ವೃದ್ದೆ…!
ತಿರುವನಂತಪುರಂ: ಕೇರಳದ ಸಾಕ್ಷರತಾ ಕಾರ್ಯಕ್ರಮದ ಅಡಿಯಲ್ಲಿ ನಡೆದ ಪರೀಕ್ಷೆಯಲ್ಲಿ 96 ವಯಸ್ಸಿನ ವಯೋವೃದ್ಧೆಯೊಬ್ಬರು 98 ಅಂಕಗಳನ್ನು ಗಳಿಸಿದ್ದಾರೆ.
ಅಲಪುಝಾ ಜಿಲ್ಲೆಯ ಕಾರ್ತಿಯಾಣಿ ಅಮ್ಮ, ಕೇರಳ ರಾಜ್ಯ ಸಾಕ್ಷರತಾ ಮಿಷನ್ ನ ‘ಅಕ್ಷರಲಕ್ಷಂ’ ಸಾಕ್ಷರತಾ ಪರೀಕ್ಷೆಯಲ್ಲಿ 100 ಅಂಕಗಳಲ್ಲಿ 98 ಅಂಕಗಳನ್ನು ಗಳಿಸಿದ್ದಾರೆ. ಪರೀಕ್ಷೆಯಲ್ಲಿ ಅವರ ಓದುವಿಕೆ, ಬರಹ ಮತ್ತು ಗಣಿತ ಕೌಶಲಗಳನ್ನು ಪರೀಕ್ಷಿಸಲಾಗಿದೆ.
ದೇಶದಲ್ಲೇ ಅತಿ ಹೆಚ್ಚು ಸಾಕ್ಷರತಾ ಪ್ರಮಾಣ ಇರುವ ಕೇರಳದಲ್ಲಿ ಅನಕ್ಷರತೆ ಹೋಗಲಾಡಿಸಲು ಕೈಗೆತ್ತಿಕೊಂಡಿರುವ ಕಾರ್ಯಕ್ರಮ ಇದಾಗಿದ್ದು ಅಲಪ್ಪುಳದ ಕಾರ್ತಿಯಾನಿ ಅಮ್ಮ ‘ಅಕ್ಷರಲಕ್ಷಮ್’ ಸಾಕ್ಷರತೆ ಕಾರ್ಯಕ್ರಮದಡಿ ಕೈಗೊಂಡಿರುವ ಈ ಪರೀಕ್ಷೆಯಲ್ಲಿ 100ಕ್ಕೆ 98 ಅಂಕಗಳನ್ನು ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ..
Kerala:At 96 yrs,Karthiyani Amma of Alappuzha Dist.scores 98/100 marks in 'Aksharalaksham' literacy program of Kerala State Literacy Mission.She was the oldest student appearing for the exam. Approx 42933 ppl cleared the exam who were tested on skills incl. reading, writing&maths pic.twitter.com/edvcKywmf4
— ANI (@ANI) October 31, 2018
ಬುಡಕಟ್ಟು ಜನಾಂಗ, ಮೀನುಗಾರರು ಮತ್ತು ಸ್ಲಂ-ನಿವಾಸಿಗಳಂತಹ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಅನಕ್ಷರತೆಯನ್ನು ನಿರ್ಮೂಲನೆ ಮಾಡುವ ಗುರಿಯನ್ನು ಈ ಕಾರ್ಯಕ್ರಮದ ಅಡಿ ಹಾಕಲಾಗಿದೆ..
ಅಲಪುಝಾ ಜಿಲ್ಲೆಯ ಮುಟ್ಟಂ ಗ್ರಾಮದ ಈ ಸಾಧಕಿಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿರುವ ಸಾಕ್ಷರತಾ ಆಂದೋಲನದ ಅಧಿಕಾರಿಗಳು, ಕಾತ್ಯಾಯಿನಿ ಅಮ್ಮ ಈ ಪರೀಕ್ಷೆಗೆ ಹಾಜರಾಗಿ, ಪಾಸಾದ ಅತ್ಯಂತ ಹಿರಿಯ ಅಭ್ಯರ್ಥಿ ಎಂದು ತಿಳಿಸಿದ್ದಾರೆ.
ತನ್ನ ಈ ಸಾಧನೆ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಕಾತ್ಯಾಯಿನಿ ಅಮ್ಮ, ಕೊನೆಗೂ ನಾನು ಓದುವುದು, ಬರೆಯುವುದು ಮತ್ತು ಲೆಕ್ಕ ಮಾಡುವುದು ಹೇಗೆ ಎಂಬುದನ್ನು ಕಲಿತುಕೊಂಡೆ ಎಂಬುದಾಗಿ ತಿಳಿಸಿದ್ದಾರೆ. ಮಹೀಂದ್ರ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆನಂದ್ ಮಹೀಂದ್ರ, ಕೇಂದ್ರ ಸಚಿವ ಅಲ್ಫೋನ್ಸ್ ಕನ್ನಂಥಾನಮ್ ಸೇರಿದಂತೆ ಅನೇಕರು ಈ ಅಪೂರ್ವ ಸಾಧನೆಗೆ ಸೋಶಿಯನ್ ಮೀಡಿಯಾಗಳಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈಗ 2011ರ ಜನಗಣತಿಯ ಪ್ರಕಾರ, ರಾಜ್ಯದ ಸಾಕ್ಷರತೆ ಪ್ರಮಾಣವು 2001ರಲ್ಲಿ 90.86% ರಷ್ಟು ಇದ್ದರೆ ಈಗ 94% ಆಗಿದೆ.
ಜಾಹೀರಾತುಗಳು


