Featured

ಕೇರಳ: ಬಿಜೆಪಿ ಅಧಿಕಾರಕ್ಕೆ ಬಂದರೆ ದೇವಸ್ವಂ ಮಂಡಳಿಗಳ ಪುನರ್ ರಚನೆ, ಲವ್ ಜಿಹಾದ್ ವಿರುದ್ಧ ಕಾನೂನು ಜಾರಿ : ಸದಾನಂದ ಗೌಡ -Vishwanews24

ಕೇರಳ: ಬಿಜೆಪಿ ಅಧಿಕಾರಕ್ಕೆ ಬಂದರೆ ದೇವಸ್ವಂ ಮಂಡಳಿಗಳ ಪುನರ್ ರಚನೆ, ಲವ್ ಜಿಹಾದ್ ವಿರುದ್ಧ ಕಾನೂನು ಜಾರಿ : ಸದಾನಂದ ಗೌಡ -Vishwanews24

ತಿರುವನಂತಪುರಂ: ಬಿಜೆಪಿ ನೇತೃತ್ವದ ಎನ್‍ಡಿಎ ಕೇರಳದಲ್ಲಿ ಅಧಿಕಾರಕ್ಕೆ ಬಂದರೆ ದೇವಳಗಳ ಆಡಳಿತ ನಿರ್ವಹಿಸುವ ಉದ್ದೇಶದ ದೇವಸ್ವಂ ಮಂಡಳಿಗಳನ್ನು ಪುನರಚಿಸಲಿದೆ ಹಾಗೂ ಲವ್ ಜಿಹಾದ್ ತಡೆಯಲು ಕಾನೂನು ಜಾರಿಗೆ ತರಲಿದೆ ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.

ಕೇರಳದ ಎಲ್‍ಡಿಎಫ್ ಸರಕಾರದ ವಿರುದ್ಧದ ‘ಚಾರ್ಜ್ ಶೀಟ್’ ಬಿಡುಗಡೆಗೊಳಿಸಲು ತಿರುವನಂತಪುರಂಗೆ ಅವರು ಆಗಮಿಸಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದರೆ ತಾನು ನೀಡಿರುವ ಎಲ್ಲಾ ಆಶ್ವಾಸನೆಗಳನ್ನು ಐದು ವರ್ಷಗಳೊಳಗೆ ಈಡೇರಿಸಲಿದೆ. ಕೇಂದ್ರದಲ್ಲಿಯೂ ಬಿಜೆಪಿ ಸರಕಾರವಿರುವುದರಿಂದ ರಾಜ್ಯದಲ್ಲೂ ಬಿಜೆಪಿ ಸರಕಾರವನ್ನು ಆರಿಸಲು ಇಲ್ಲಿನ ಜನತೆಗೆ ಸುವರ್ಣಾವಕಾಶವಿದೆ ಎಂದು ಅವರು ಹೇಳಿದರು.

ಬೆಳ್ತಂಗಡಿ : ತನ್ನದೇ ಸ್ವಂತ ಕಚೇರಿ ಉದ್ಘಾಟನೆಗೆ ತೆರಳುತ್ತಿದ್ದ ಯುವ ಎಂಜಿನಿಯರ್ ರಸ್ತೆ ಅಪಘಾತಕ್ಕೆ ಬಲಿ -Vishwanews24

ರಾಜ್ಯದ ಎಲ್‍ಡಿಎಫ್ ಸರಕಾರದ ವಿರುದ್ಧ ಎನ್‍ಡಿಎ ಬಿಡುಗಡೆಗೊಳಿಸಿರುವ ಚಾರ್ಜ್ ಶೀಟ್‍ನಲ್ಲಿ ಹಲವು ಆರೋಪಗಳನ್ನು ಹೊರಿಸಲಾಗಿದೆ. ಶಬರಿಮಲೆ ವಿಚಾರ ಹಾಗೂ ಕೋವಿಡ್ ಸಾಂಕ್ರಾಮಿಕವನ್ನು ರಾಜ್ಯ ಸರಕಾರ ನಿಭಾಯಿಸಿದ ರೀತಿಯನ್ನು ಟೀಕಿಸಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸರ್ವಾಧಿಕಾರಿ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ, ರಾಜ್ಯದಲ್ಲಿ ರಾಜಕೀಯ ಕೊಲೆಗಳು ನಡೆಯುತ್ತಿವೆ, ಕಾನೂನು ಸುವ್ಯವಸ್ಥೆ ಮುರಿದು ಬಿದ್ದಿದೆ, ಮಹಿಳೆಯರು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ, ಆರ್ಥಿಕ ಪ್ರಗತಿಯಾಗಿಲ್ಲ ಹಾಗೂ ಕೃಷಿ ಕ್ಷೇತ್ರ ಮತ್ತು ಸಾರ್ವಜನಿಕ ರಂಗದ ಕ್ಷೇತ್ರಗಳು ಪ್ರಗತಿ ಹೊಂದಿಲ್ಲ ಎಂದು ಚಾರ್ಜ್ ಶೀಟ್‍ನಲ್ಲಿ ಆರೋಪಿಸಲಾಗಿದೆ.

ಕೇರಳದ ಜನ ವಿರೋಧಿ ಎಲ್‍ಡಿಎಫ್ ಸರಕಾರವನ್ನು ತಿರಸ್ಕರಿಸಿ ‘ನವ ಕೇರಳ’ ನಿರ್ಮಾಣಕ್ಕಾಗಿ ಬಿಜೆಪಿಯನ್ನು ಬೆಂಬಲಿಸಬೇಕೆಂದೂ ಚಾರ್ಜ್ ಶೀಟ್‍ನಲ್ಲಿ ಜನರಿಗೆ ಕರೆ ನೀಡಲಾಗಿದೆ.

Vishwa News 24

Recent Posts

ಉಡುಪಿ: ವಂಚನೆ ಹಾಗೂ ಬ್ಲ್ಯಾಕ್‌ಮೇಲ್ ಪ್ರಕರಣ ; ಆರೋಪಿ ಝೀನತ್ ವಿರುದ್ಧ ಮತ್ತೆರಡು ಹೊಸ ಪ್ರಕರಣ ದಾಖಲು – vishwanews24

ಉಡುಪಿ: ವಂಚನೆ ಹಾಗೂ ಬ್ಲ್ಯಾಕ್‌ಮೇಲ್ ಪ್ರಕರಣ ; ಆರೋಪಿ ಝೀನತ್ ವಿರುದ್ಧ ಮತ್ತೆರಡು ಹೊಸ ಪ್ರಕರಣ ದಾಖಲು ಉಡುಪಿ:ಬಹುಕೋಟಿ ವಂಚನೆ…

36 seconds ago

ಆಗುಂಬೆ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ – ಮಹತ್ವದ ತೀರ್ಪು ನೀಡಿದ ಶಿವಮೊಗ್ಗ ನ್ಯಾಯಾಲಯ – vishwanews24

ಆಗುಂಬೆ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ - ಮಹತ್ವದ ತೀರ್ಪು ನೀಡಿದ ಶಿವಮೊಗ್ಗ ನ್ಯಾಯಾಲಯ ತೀರ್ಥಹಳ್ಳಿ: ಲೈಂಗಿಕ ದೌರ್ಜನ್ಯಕ್ಕೆ…

39 minutes ago

ಅಯೋಧ್ಯೆ ಪ್ರಕರಣದ ಹಿನ್ನೆಲೆ : ರಾಜ್ಯದ ಎಲ್ಲಾ ಮುಜುರಾಯಿ ದೇಗುಲಗಳಲ್ಲಿ ಕಡ್ಡಾಯ ಸಿಸಿಟಿವಿ ಅಳವಡಿಕೆಗೆ ಸಿಎಂ ಆದೇಶ – vishwanews24

ರಾಮ ಮಂದಿರದಲ್ಲಿ ನಡೆದ ಘಟನೆ ಅವಮಾನಕರ; ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ :ಸಿಎಂ  ಡಿ.ಕೆ. ಶಿ ಬೆಳಗಾವಿ: ಮುಜರಾಯಿ…

45 minutes ago

ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ 10 ಲಕ್ಷ ರೂ.ವಂಚನೆ ಪ್ರಕರಣ: ಮಹಿಳೆ ಬಂಧನ – vishwanews24

ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ 10 ಲಕ್ಷ ರೂ.ವಂಚನೆ ಪ್ರಕರಣ: ಮುಂಬಯಲ್ಲಿ ಉಡುಪಿ ಮೂಲದ ಮಹಿಳೆ ಬಂಧನ ಮುಂಬೈ,: ಷೇರು…

58 minutes ago

ಪುತ್ತೂರು: ಕೋಮು ಪ್ರಚೋದನೆ ಆರೋಪ ;  7 ವೆಬ್ ನ್ಯೂಸ್, ಸಾಮಾಜಿಕ ಜಾಲತಾಣಗಳ ವಿರುದ್ಧ ಪ್ರಕರಣ ದಾಖಲು – vishwanews24

ಪುತ್ತೂರು: ಕೋಮು ಪ್ರಚೋದನೆ ಆರೋಪ ;  7 ವೆಬ್ ನ್ಯೂಸ್, ಸಾಮಾಜಿಕ ಜಾಲತಾಣಗಳ ವಿರುದ್ಧ ಪ್ರಕರಣ ದಾಖಲು ಪುತ್ತೂರು: ಪುರುಷರಕಟ್ಟೆಯಲ್ಲಿ…

1 hour ago

ಮಂಗಳೂರು : ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಬಳಿ ಮೊಬೈಲ್ ಪತ್ತೆ ; ಪ್ರಕರಣ ದಾಖಲು – vishwanews24

ಮಂಗಳೂರು : ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಬಳಿ ಮೊಬೈಲ್ ಪತ್ತೆ  ಮಂಗಳೂರು: ಕೊಡಿಯಾಲಬೈಲಿನ ಜಿಲ್ಲಾ ಕಾರಾಗೃಹದಲ್ಲಿ ಇಬ್ಬರು ವಿಚಾರಣಾಧೀನ ಕೈದಿಗಳ…

2 hours ago