ಮಂಗಳೂರು :ಆಗಸ್ಟ್ 28 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಅವರಣದಲ್ಲಿ ದಲಿತ ಸಂಘರ್ಷ ಸಮಿತಿಯವರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಕೇಸರಿ ಧ್ವಜ ಸುಟ್ಟ ಪ್ರಕರಣವನ್ನು ಖಂಡಿಸಿ ಬೆಳ್ತಂಗಡಿಯಲ್ಲಿ, ಸೆ. 6 ರ ಗುರುವಾರ ಹಿಂದೂ ಜಾಗೃತಿ ಸಭೆ ನಡೆಯಿತು. ಈ ಸಂದರ್ಭ ಮಾತನಾಡಿದ ಶಾಸಕ ಹರೀಶ್ ಪೂಂಜ, ಇಲ್ಲಿ ಕೆಲ ದಿನಗಳ ಹಿಂದೆ ನಡೆದ ಕೇಸರಿ ಧ್ವಜಕ್ಕೆ ಬೆಂಕಿ ಹಚ್ಚಿದ ಕಾರ್ಯ ಹಿಂದೆ ಕಾಂಗ್ರೇಸ್ ಇದೆ ಎಂಬುದು ಸಾಬೀತಾಗಿದೆ. ಅಷ್ಟೇ ಅಲ್ಲದೆ ಮಾಜಿ ಶಾಸಕರು, ಜಿ.ಪಂ.ಸದಸ್ಯರೂ ಇದರ ಹಿಂದೆ ಇರುವುದು ತಿಳಿದುಬಂದಿದೆ. ಲೋಕಸಭೆ ಹಾಗೂ ಪಟ್ಟಣ ಪಂಚಾಯತ್ ಚುನಾವಣೆಗಳು ಬರುತ್ತಿರುವ ಹಿನ್ನಲೆಯಲ್ಲಿ ಹಿಂದು ಭಾವನೆಗಳಿಗೆ ಧಕ್ಕೆ ತಂದು ತಮ್ಮ ಓಟಿನ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಈ ರೀತಿಯ ಕೆಲಸ ಇನ್ನು ಮುಂದೆ ನಡೆಯದು. ಹಿಂದುಗಳ ಪರವಾಗಿ ಶಾಸಕನಾಗಿ ಬೆಳ್ತಂಗಡಿಯಲ್ಲಿ ನಾನು ಇದ್ದೇನೆ ಎಂದು ಗುಡುಗಿದರು.
ಕೆಲ ಹಿಂದೆ ಯಾರು ಇಲ್ಲಿ ಪ್ರತಿಭಟನೆ ಮಾಡಿದ್ದಾರೋ ಅಂಥವರು ಓಟು ಬಂದಾಗ ಕಾಂಗ್ರೇಸ್‌ನ ಹಿಂದೆ ಹೋಗಿದ್ದಾರೆ. ಅಂಥವರ ಅಗತ್ಯ ನಮಗಿಲ್ಲ. ಚುನಾವಣೆ ಬಂದಾಗ ಕಾಂಗ್ರೇಸ್, ಚಂದಾ ಕೇಳುವಾಗ ಹಿಂದುತ್ವ, ಕೇಸರಿ ನೆನಪಾಗುತ್ತದೆ. ನಾಚಿಕೆಯಾಗಬೇಕು ಅವರಿಗೆ. ದ.ಕ. ಜಿಲ್ಲೆಯ ಜನತೆಗೆ ಹಿಂದುತ್ವ ಕಲಿಸಲು ಯಾರೂ ಬರಬೇಕಾಗಿಲ್ಲ. ಕಾಂಗ್ರೇಸ್‌ನ್ನು ಬೆಂಬಲಿಸುವ ಹಿಂದುಗಳ ಅಗತ್ಯವೇ ನಮಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದೇ ಸಂದರ್ಭ ಮಾತನಾಡಿದ, ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ| ಚಿ.ನಾ. ರಾಮು ಅಂಬೇಡ್ಕರ್ ಹೆಸರಲ್ಲಿ ರೋಲ್‌ಕಾಲ್ ಗೂಂಡಾಗಿರಿಯನ್ನು ಬೆಳೆಸುತ್ತಾ ಹಿಂದೂ ಸಮಾಜದಲ್ಲಿ ಅರಾಜಕತೆ, ಕಂದಕ ಸೃಷ್ಟಿಸುವುದನ್ನು ನಿಲ್ಲಿಸಿ ಎಂದು ಎಚ್ಚರಿಸಿದರು. ಅಖಂಡತೆಯ ಪರಿಕಲ್ಪನೆಯನ್ನು ನಾಶ ಮಾಡಿರುವ ಕಾಂಗ್ರೆಸ್ ಪಕ್ಷವು ಓಟ್ ಬ್ಯಾಂಕ್ ರಾಜಕಾರಣವನ್ನು ಈಗಲೂ ಮುಂದುವರಿಸುತ್ತಿರುವುದು ದುರಾದೃಷ್ಟಕರ. ದೇಶ ಮಾರಾಟವಾದರೂ ಸರಿ, ಜಾತಿಯ ಹೆಸರಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ.ಅಂಬೇಡ್ಕರ್ ಹೆಸರಲ್ಲಿ ಅಮಾಯಕ ಸಮಾಜವನ್ನುಎತ್ತಿಕಟ್ಟುವ ಕಾರ್ಯ ನಿರಂತರ ಮಾಡುತ್ತಾ ಬರುತ್ತಿದ್ದಾರೆ. ಸಂವಿಧಾನವನ್ನು ಆರ್‌ಎಸ್‌ಎಸ್‌ನವರು ಸುಟ್ಟರು ಎಂದು ಅಪಪ್ರಚಾರ ಮಾಡುತ್ತಾ ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ನಾಲ್ಕೂವರೆ ವರ್ಷಗಳಿಂದ ಮೋದಿ ಸರಕಾರ ಅಸಮಾನತೆಯನ್ನು ಹೋಗಲಾಡಿಸಲು ಶ್ರಮ ವಹಿಸಿದೆ. ಮುಸಲ್ಮಾನ ಹೆಣ್ಣು ಮಕ್ಕಳಿಗೆ ನ್ಯಾಯಕೊಡಿಸುವ ಕಾರ್ಯ ಬಿಜೆಪಿ ಮಾಡಿದೆ. ಭಾರತಕ್ಕಾಗಿ ಮುಸ್ಲಿಂರೂ ತ್ಯಾಗ ಮಾಡಿದ್ದಾರೆ. ಅವರ ಮಧ್ಯೆ ಮೀರ್‌ಸಾದಿಕ್‌ನಂತ ದ್ರೋಹಿಗಳೂ ಇರುವುದು ದುರಂತ ಎಂದು ವಿಷಾದಿಸಿದರು.ಬಿಜೆಪಿ ಮುಖಂಡ ಫಟಾಪಟ್ ಶ್ರೀನಿವಾಸ್ ಅವರು, ಕಾಂಗ್ರೇಸ್ ಇತಿಹಾಸದಲ್ಲಿ ಅಂಬೇಡ್ಕರ್‌ಗೆ ಅನೇಕ ಬಾರಿ ಅನ್ಯಾಯ ಮಾಡಿದೆ. ಅದೇ ರೀತಿ ಕಾಂಗ್ರೇಸ್ ಇಂದೂ ಕೂಡ ದಲಿತರನ್ನು ಬಳಸಿ ಬಿಸಾಕುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ ಎಂದರು.
ಈ ಸಂದರ್ಭ ಬಜರಂಗದಳ ಮುಖಂಡ ಮುರಳಿಕೃಷ್ಣ ಹಸಂತ್ತಡ್ಕ, ವಿ.ಹಿಂ.ಪ. ಜಿಲ್ಲಾಧ್ಯಕ್ಷ ಡಾ| ಕೃಷ್ಣ ಪ್ರಸನ್ನ, ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ಧರ್ಮಸ್ಥಳ ಉಪಸ್ಥಿತರಿದ್ದರು. ವಿ.ಹಿಂ.ಪದ ಬೆಳ್ತಂಗಡಿ ಪ್ರಖಂಡ ಅಧ್ಯಕ್ಷ ಸುಬ್ರಹ್ಮಣಕುಮಾರ್ ಅಗರ್ತ ಸ್ವಾಗತಿಸಿ, ಪ್ರಸ್ತಾವಿಸಿದರು. ಕಾರ್ಯದರ್ಶಿ ನವೀನ್ ನೆರಿಯ ಕಾರ್ಯಕ್ರಮ ನಿರ್ವಹಿಸಿದರು. ವೇಣೂರು ಪ್ರಖಂಡ ಅಧ್ಯಕ್ಷ ಶಶಾಂಕ ಭಟ್ ಮನವಿ ವಾಚಿಸಿದರು. ಬಳಿಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…
ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…
ಬೆಳ್ತಂಗಡಿ: ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…
ಕಾಸರಗೋಡು : ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…
ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…