Featured

ಮೋದಿ ಸರಕಾರದ ಬೆನ್ನಿಗೆ ನಿಂತು ಭದ್ರತಾ ಸಂವಹನ ಒಪ್ಪಂದಕ್ಕೆ ಸಹಿ ಹಾಕಿದ ಅಮೇರಿಕಾ ; ಪಾಕಿಸ್ತಾನಕ್ಕೆ ಬಿಗ್ ಶಾಕ್ ನೀಡಿದ ಭಾರತ ಹಾಗೂ ಯುಸ್ಎ

ನವದೆಹಲಿ: ಪಾಕಿಸ್ತಾನವು ತಾವು ಅಫಘಾನಿಸ್ತಾನದಲ್ಲಿ ಹೊಡೆದುರುಳಿಸುತ್ತಿರುವ ಉಗ್ರರಿಗೆ ಆಶ್ರಯ ನೀಡುತ್ತಾ ಇದೆ ಎಂಬ ಆರೋಪದಲ್ಲಿ ಅದಕ್ಕೆ ನೀಡುತ್ತಿದ್ದ 300 ಮಿಲಿಯನ್ ಡಾಲರ್ ಧನ ಸಹಾಯವನ್ನು ಹಿಂಪಡೆದಿದೆ. ದಿನೇ ದಿನೇ ಸಂಬಂಧವು ಹಳಸುತ್ತಾ ಇದ್ದರೂ ಕೂಡಾ ಬುಧವಾರ ಭೇಟಿಗಾಗಿ ಸೆಕ್ರೆಟರಿ ಮೈಕ್ ಪಾಂಪ್ ಅವರು ತೆರಳಿದ್ದರು.

ಭಾರತ ಮತ್ತು ಅಮೆರಿಕ ಇದೇ ಮೊದಲ ಬಾರಿಗೆ ನಡೆಸಿದ 2+2 ಮಾತುಕತೆಯಲ್ಲಿ ಪಾಕಿಸ್ತಾನಕ್ಕೆ ಉಗ್ರರನ್ನು ಮಟ್ಟಹಾಕುವಂತೆ ಎಚ್ಚರಿಕೆ ನೀಡಲಾಗಿದೆ. 2008ರ ಮುಂಬೈ ದಾಳಿ ನಡೆದು 10 ವರ್ಷಗಳಾಗಿರುವ ಹಿನ್ನೆಲೆಯಲ್ಲಿ, ಪಠಾಣ್‍ಕೋಟ್, ಉರಿಯಲ್ಲಿ ಆತ್ಮಹತ್ಯಾ ದಾಳಿ ಹಾಗೂ ಇತರ ಗಡಿಯಾಚೆಗಿನ ಉಗ್ರ ದಾಳಿಯ ಸಂಚುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಲಾಗಿದೆ. ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿರುವ ಪಾಕಿಸ್ತಾನಕ್ಕೆ ಭಾರತ, ಅಮೆರಿಕ ಚಾಟಿ ಬೀಸಿದೆ!! ಇತರ ದೇಶಗಳ ಮೇಲೆ ದಾಳಿ ನಡೆಸುತ್ತಿರುವ ಉಗ್ರರಿಗೆ ಪಾಕಿಸ್ತಾನ ತನ್ನ ನೆಲದಲ್ಲಿ ಅವಕಾಶ ನೀಡಬಾರದು ಎಂದು ಉಭಯ ದೇಶಗಳು ಆಗ್ರಹಿಸಿವೆ. ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಉಗ್ರ ದಾವೂದ್ ಇಬ್ರಾಹಿಂನ ಡಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಈ ಸಂದರ್ಭದಲ್ಲಿ ಅಮೆರಿಕ ಭರವಸೆ ನೀಡಿದೆ. ದಾವೂದ್ ವಿವಿಧ ದೇಶಗಳಲ್ಲಿ ಜಾಲ ಹೊಂದಿದ್ದಾನೆ. ಇದನ್ನು ಪಾಕಿಸ್ತಾನದಿಂದ ನಿಯಂತ್ರಿಸುತ್ತಿದ್ದಾನೆ. ಡಿ ಕಂಪನಿ ಹಾಗೂ ಆತನ ಸಹಚರರ ವಿರುದ್ಧ ಕ್ರಮ ಜರುಗಿಸುವುದಾಗಿ ಸಭೆ ವೇಳೆ ಅಮೆರಿಕ ಭಾರತಕ್ಕೆ ಆಶ್ವಾಸನೆ ನೀಡಿದೆ..

ಇದರಂತೆ ಅಮೇರಿಕಾದ ವಿಶೇಷ ಸೇನಾ ಮಾಹಿತಿಗಳನ್ನು ಭಾರತ ಪಡೆದುಕೊಂಡಿದೆ, ಮಾತ್ರವಲ್ಲದೆ  ಸೇನಾ ತಂತ್ರಜ್ಞಾನವನ್ನು ಕೂಡಾ ಅದು ಪಡೆದುಕೊಳ್ಳಲು ಅನುಮತಿ ಸಿಕ್ಕಿದೆ. ಭಾರತ ಮತ್ತು ಅಮೇರಿಕಾವು ಹಲವಾರು ಸೂಕ್ಷ್ಮ ವಿಷಯಗಳಲ್ಲಿ ಒಟ್ಟಿಗೆ ಕೆಲಸ ಮಾಡಲು ಒಪ್ಪಂದ ಮಾಡಿಕೊಂಡಿವೆ. ಚೀನಾದ ಸಮಸ್ಯೆ, ಇಂಡೋ-ಪ್ಯಾಸಿಫಿಕ್, ಉಗ್ರವಾದ ಸೇರಿದಂತೆ ಹಲವಾರು ವಿಷಯಗಳಲ್ಲಿ ಒಪ್ಪಂದ ಮಾಡಿಕೊಂಡಿವೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಮೇರಿಕಾದ ಕಾರ್ಯದರ್ಶಿ ಮೈಕ್ ಪಾಂಪ್ ಹಾಗು ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಅವರನ್ನು ಬುಧವಾರ ವಿಮಾನ ನಿಲ್ದಾಣದಲ್ಲಿ ಕುದ್ದು ಸ್ವಾಗತಿಸಿದ್ದರು. ನಾಲ್ಕು ನಾಯಕರು ತಮ್ಮ ಮಾತುಕತೆಯನ್ನು ಸಕಾರಾತ್ಮಕವಾಗಿತ್ತು ಎಂದು ಹೇಳಿದರು.

ಅದಲ್ಲದೆ ಭದ್ರತೆ ಮತ್ತು ಸಂವಹನ ಹೊಂದಾಣಿಕೆ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿದ್ದು ಇದರಿಂದ ಅಮೆರಿಕದ ಅತ್ಯಾಧುನಿಕ ಭದ್ರತಾ ತಂತ್ರಜ್ಞಾನ ಭಾರತಕ್ಕೆ ಸಿಗಲಿದೆ. ಭಾರತ ಹಾಗೂ ಅಮೆರಿಕ ನಡುವಿನ ರಕ್ಷಣಾ ಒಪ್ಪಂದದಿಂದ ಚೀನಾ ಮೇಲೆ ನಿಗಾ ಇಡಬಹುದಾಗಿದೆ. ಅಣ್ವಸ್ತ್ರ ಪೂರೈಕೆದಾರರ ಗುಂಪು (ಎನ್‍ಎಸ್‍ಜಿ)ಗೆ ಭಾರತ ಸೇರ್ಪಡೆಯಾಗುವ ನಿಟ್ಟಿನಲ್ಲಿ ಕೆಲಸ ಮಾಡಲು ಅಮೆರಿಕ ಒಪ್ಪಿಗೆ ನೀಡಿದೆ ಎಂದು ಸಭೆಯ ಬಳಿಕ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್ ತಿಳಿಸಿದ್ದಾರೆ. ಮತ್ತೊಂದು ವಿಚಾರವೆಂದರೆ ಭಾರತೀಯ ತಂತ್ರಜ್ಞರ ಎಚ್ 1ಬಿ ವೀಸಾ ನೀತಿ ವಿಚಾರದಲ್ಲಿ ಭಾರತದ ಹಿತಾಸಕ್ತಿಯ ವಿರುದ್ಧ ಅಮೆರಿಕ ನಡೆದುಕೊಳ್ಳುವುದಿಲ್ಲ ಎಂಬ ನಂಬಿಕೆ ನಮಗಿದೆ ಎಂದು ಸಚಿವೆ ಸುಷ್ಮಾ ಸ್ವರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago