Featured

ಕೇಸರಿ ಧ್ವಜ ಸುಟ್ಟ ಪ್ರಕರಣ-ಬೆಳ್ತಂಗಡಿಯಲ್ಲಿ ಹಿಂದೂ ಜಾಗೃತಿ ಸಭೆ ; ಹಿಂದುಗಳ ಪರ ಶಾಸಕನಾಗಿ ನಾನಿದ್ದೇನೆ: ಶಾಸಕ ಹರೀಶ್ ಪೂಂಜ

ಮಂಗಳೂರು :ಆಗಸ್ಟ್ 28 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಅವರಣದಲ್ಲಿ ದಲಿತ ಸಂಘರ್ಷ ಸಮಿತಿಯವರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಕೇಸರಿ ಧ್ವಜ ಸುಟ್ಟ ಪ್ರಕರಣವನ್ನು ಖಂಡಿಸಿ ಬೆಳ್ತಂಗಡಿಯಲ್ಲಿ, ಸೆ. 6 ರ ಗುರುವಾರ ಹಿಂದೂ ಜಾಗೃತಿ ಸಭೆ ನಡೆಯಿತು. ಈ ಸಂದರ್ಭ ಮಾತನಾಡಿದ ಶಾಸಕ ಹರೀಶ್ ಪೂಂಜ, ಇಲ್ಲಿ ಕೆಲ ದಿನಗಳ ಹಿಂದೆ ನಡೆದ ಕೇಸರಿ ಧ್ವಜಕ್ಕೆ ಬೆಂಕಿ ಹಚ್ಚಿದ ಕಾರ್ಯ ಹಿಂದೆ ಕಾಂಗ್ರೇಸ್‌ ಇದೆ ಎಂಬುದು ಸಾಬೀತಾಗಿದೆ. ಅಷ್ಟೇ ಅಲ್ಲದೆ ಮಾಜಿ ಶಾಸಕರು, ಜಿ.ಪಂ.ಸದಸ್ಯರೂ ಇದರ ಹಿಂದೆ ಇರುವುದು ತಿಳಿದುಬಂದಿದೆ. ಲೋಕಸಭೆ ಹಾಗೂ ಪಟ್ಟಣ ಪಂಚಾಯತ್ ಚುನಾವಣೆಗಳು ಬರುತ್ತಿರುವ ಹಿನ್ನಲೆಯಲ್ಲಿ ಹಿಂದು ಭಾವನೆಗಳಿಗೆ ಧಕ್ಕೆ ತಂದು ತಮ್ಮ ಓಟಿನ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಈ ರೀತಿಯ ಕೆಲಸ ಇನ್ನು ಮುಂದೆ ನಡೆಯದು. ಹಿಂದುಗಳ ಪರವಾಗಿ ಶಾಸಕನಾಗಿ ಬೆಳ್ತಂಗಡಿಯಲ್ಲಿ ನಾನು ಇದ್ದೇನೆ ಎಂದು ಗುಡುಗಿದರು.

ಕೆಲ ಹಿಂದೆ ಯಾರು ಇಲ್ಲಿ ಪ್ರತಿಭಟನೆ ಮಾಡಿದ್ದಾರೋ ಅಂಥವರು ಓಟು ಬಂದಾಗ ಕಾಂಗ್ರೇಸ್‌ನ ಹಿಂದೆ ಹೋಗಿದ್ದಾರೆ. ಅಂಥವರ ಅಗತ್ಯ ನಮಗಿಲ್ಲ. ಚುನಾವಣೆ ಬಂದಾಗ ಕಾಂಗ್ರೇಸ್, ಚಂದಾ ಕೇಳುವಾಗ ಹಿಂದುತ್ವ, ಕೇಸರಿ ನೆನಪಾಗುತ್ತದೆ. ನಾಚಿಕೆಯಾಗಬೇಕು ಅವರಿಗೆ. ದ.ಕ. ಜಿಲ್ಲೆಯ ಜನತೆಗೆ ಹಿಂದುತ್ವ ಕಲಿಸಲು ಯಾರೂ ಬರಬೇಕಾಗಿಲ್ಲ. ಕಾಂಗ್ರೇಸ್‌ನ್ನು ಬೆಂಬಲಿಸುವ ಹಿಂದುಗಳ ಅಗತ್ಯವೇ ನಮಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದೇ ಸಂದರ್ಭ ಮಾತನಾಡಿದ, ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ| ಚಿ.ನಾ. ರಾಮು ಅಂಬೇಡ್ಕರ್ ಹೆಸರಲ್ಲಿ ರೋಲ್‌ಕಾಲ್‌ ಗೂಂಡಾಗಿರಿಯನ್ನು ಬೆಳೆಸುತ್ತಾ ಹಿಂದೂ ಸಮಾಜದಲ್ಲಿ ಅರಾಜಕತೆ, ಕಂದಕ ಸೃಷ್ಟಿಸುವುದನ್ನು ನಿಲ್ಲಿಸಿ ಎಂದು ಎಚ್ಚರಿಸಿದರು. ಅಖಂಡತೆಯ ಪರಿಕಲ್ಪನೆಯನ್ನು ನಾಶ ಮಾಡಿರುವ ಕಾಂಗ್ರೆಸ್ ಪಕ್ಷವು ಓಟ್ ಬ್ಯಾಂಕ್‌ ರಾಜಕಾರಣವನ್ನು ಈಗಲೂ ಮುಂದುವರಿಸುತ್ತಿರುವುದು ದುರಾದೃಷ್ಟಕರ. ದೇಶ ಮಾರಾಟವಾದರೂ ಸರಿ, ಜಾತಿಯ ಹೆಸರಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ.ಅಂಬೇಡ್ಕರ್ ಹೆಸರಲ್ಲಿ ಅಮಾಯಕ ಸಮಾಜವನ್ನುಎತ್ತಿಕಟ್ಟುವ ಕಾರ್ಯ ನಿರಂತರ ಮಾಡುತ್ತಾ ಬರುತ್ತಿದ್ದಾರೆ. ಸಂವಿಧಾನವನ್ನು ಆರ್‌ಎಸ್‌ಎಸ್‌ನವರು ಸುಟ್ಟರು ಎಂದು ಅಪಪ್ರಚಾರ ಮಾಡುತ್ತಾ ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ನಾಲ್ಕೂವರೆ ವರ್ಷಗಳಿಂದ ಮೋದಿ ಸರಕಾರ ಅಸಮಾನತೆಯನ್ನು ಹೋಗಲಾಡಿಸಲು ಶ್ರಮ ವಹಿಸಿದೆ. ಮುಸಲ್ಮಾನ ಹೆಣ್ಣು ಮಕ್ಕಳಿಗೆ ನ್ಯಾಯಕೊಡಿಸುವ ಕಾರ್ಯ ಬಿಜೆಪಿ ಮಾಡಿದೆ. ಭಾರತಕ್ಕಾಗಿ ಮುಸ್ಲಿಂರೂ ತ್ಯಾಗ ಮಾಡಿದ್ದಾರೆ. ಅವರ ಮಧ್ಯೆ ಮೀರ್‌ಸಾದಿಕ್‌ನಂತ ದ್ರೋಹಿಗಳೂ ಇರುವುದು ದುರಂತ ಎಂದು ವಿಷಾದಿಸಿದರು.ಬಿಜೆಪಿ ಮುಖಂಡ ಫಟಾಪಟ್ ಶ್ರೀನಿವಾಸ್‌ ಅವರು, ಕಾಂಗ್ರೇಸ್‌ ಇತಿಹಾಸದಲ್ಲಿ ಅಂಬೇಡ್ಕರ್‌ಗೆ ಅನೇಕ ಬಾರಿ ಅನ್ಯಾಯ ಮಾಡಿದೆ. ಅದೇ ರೀತಿ ಕಾಂಗ್ರೇಸ್‌ ಇಂದೂ ಕೂಡ ದಲಿತರನ್ನು ಬಳಸಿ ಬಿಸಾಕುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ ಎಂದರು.

ಈ ಸಂದರ್ಭ ಬಜರಂಗದಳ ಮುಖಂಡ ಮುರಳಿಕೃಷ್ಣ ಹಸಂತ್ತಡ್ಕ, ವಿ.ಹಿಂ.ಪ. ಜಿಲ್ಲಾಧ್ಯಕ್ಷ ಡಾ| ಕೃಷ್ಣ ಪ್ರಸನ್ನ, ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ಧರ್ಮಸ್ಥಳ ಉಪಸ್ಥಿತರಿದ್ದರು. ವಿ.ಹಿಂ.ಪದ ಬೆಳ್ತಂಗಡಿ ಪ್ರಖಂಡ ಅಧ್ಯಕ್ಷ ಸುಬ್ರಹ್ಮಣಕುಮಾರ್‌ ಅಗರ್ತ ಸ್ವಾಗತಿಸಿ, ಪ್ರಸ್ತಾವಿಸಿದರು. ಕಾರ್ಯದರ್ಶಿ ನವೀನ್ ನೆರಿಯ ಕಾರ್ಯಕ್ರಮ ನಿರ್ವಹಿಸಿದರು. ವೇಣೂರು ಪ್ರಖಂಡ ಅಧ್ಯಕ್ಷ ಶಶಾಂಕ ಭಟ್ ಮನವಿ ವಾಚಿಸಿದರು. ಬಳಿಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago