ಕೈಕೊಟ್ಟ ವೈಪರ್-ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾದ ತೂಫಾನ್:-ಉದ್ಯಾವರದಲ್ಲಿ ಘಟನೆ : vishwanews24
ಕೈಕೊಟ್ಟ ವೈಪರ್-ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾದ ತೂಫಾನ್:-ಉದ್ಯಾವರದಲ್ಲಿ ಘಟನೆ : vishwanews24
ಕಾಪು: ಉತ್ತರ ಕರ್ನಾಟಕ ಭಾಗದಿಂದ ಮಂಗಳೂರು ಕಡೆ ಸಾಗುತ್ತಿದ್ದ ತುಫಾನ್ ಗಾಡಿಯೊಂದರ ಫ್ರಂಟ್ ಗ್ಲಾಸ್ ವೈಪರ್ ಕೈಕೊಟ್ಟ ಪರಿಣಾಮವಾಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕ್ಕೆ ಹತ್ತಿ ವಿದ್ಯುತ್ ಕಂಬಕ್ಕೆ ಹೊಡೆದು ಪಲ್ಟಿಯಾದ ಘಟನೆ ಗುರುವಾರ ಮುಂಜಾನೆ ನಡೆದಿದೆ.
ಗಾಡಿಯಲ್ಲಿ ಸುಮಾರು ಎಂಟಕ್ಕೂ ಅಧಿಕ ಮಂದಿ ಪ್ರಯಾಣಿಕರಿದ್ದು ಪಾರಾಗಿದ್ದು ಚಾಲಕನಿಗೆ ಅಲ್ಪಸ್ವಲ್ಪ ಗಾಯವಾದ ಬಗ್ಗೆ ವರದಿಯಾಗಿದೆ.
ಕೂಡಲೇ ಸ್ಥಳದಲ್ಲಿದ್ದ ಪ್ರಯಾಣಿಕರು ಗಾಡಿಯಲ್ಲಿದ್ದ ಗಾಯಳುವನ್ನು ಆಸ್ಪತ್ರೆಗೆ ಸಾಗಿಸಿದರು.