Featured

ಕೈಪುಂಜಾಲು-ಪೊಲಿಪು-ತೊಟ್ಟ0-ದುಗ್ಗನ್‌ತೋಟ-ಕೊ0ಬಗುಡ್ಡೆ ವಾರ್ಡಿನಲ್ಲಿ ಬಿಜೆಪಿ ಸೆಲ್ಫ್ ಸುಸೈಡ್..? vishwanews24

ಕೈಪುಂಜಾಲು-ಪೊಲಿಪು-ತೊಟ್ಟ0-ದುಗ್ಗನ್‌ತೋಟ-ಕೊ0ಬಗುಡ್ಡೆ ವಾರ್ಡಿನಲ್ಲಿ ಬಿಜೆಪಿ ಸೆಲ್ಫ್ ಸುಸೈಡ್..?

ಕಾಪು: ಪುರಸಭಾ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದಾದರೂ ಕೋಸ್ಟಲ್ ಬಿಜೆಪಿ ಬೆಲ್ಟ್ ಕಳಚಿ ಬಿದ್ದಿದೆ.ಪ್ರತಿ ಚುನಾವಣೆಯಲ್ಲೂ ಬಿಜೆಪಿಗ್ ಲೀಡ್ ಕೊಡುತ್ತಿದ್ದ ಕೈಪುಂಜಾಲು-ಪೊಲಿಪು-ತೊಟ್ಟ0-ದುಗ್ಗನ್‌ತೋಟ ವಾರ್ಡ್ ಈಸಲದ ಮಟ್ಟಿಗೆ ಕಾಂಗ್ರೇಸ್ ವಶ ಪಡಿಸಿಕೊಂಡಿದೆ.


ಬಿಜೆಪಿಯಲ್ಲಿನ ಸ್ಥಳೀಯ ನಾಯಕನ ಮೊಂಡುತನಕ್ಕೆ ಆ ಭಾಗದ ಭಾಜಪ ಮತ್ತು ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ನೇರವಾಗಿ ಅವರವರ ಅಸ್ಥಿತ್ವ ತೋರಿಸುವ ಭರಾಟೆಯಲ್ಲಿ ಬಿಜೆಪಿ ತಕ್ಕ ಶಾಸ್ತಿ ಮಾಡಿದ್ದಾರೆಂಬ ಮಾತು ಕೂಡ ಕೇಳಿ ಬರುತ್ತಿದೆ.ಈ ಚುನಾವಣೆಯ ಸಮಯದಲ್ಲಿ ಆ ಭಾಗಕ್ಕೆ ಮನವೊಲಿಸಲು ಬಂದ ಎಲ್ಲಾ ನಾಯಕರಿಗೂ ಅಲ್ಲಿನ ಕಾರ್ಯಕರ್ತರು ನೀಡಿದ ಉತ್ತರ ” ಈ ಸಲದ ಮಟ್ಟಿಗೆ ನೋಚ್ಯಾನ್ಸ್” ಎಂಬುದಾಗಿತ್ತು.ಇನ್ನು ಕರಾವಳಿ ಹಾಗೂ ಕೊಪ್ಪಲಂಗಡಿ ವಾರ್ಡಿನಲ್ಲಿ ಜಿಲ್ಲಾ ನಾಯಕರ ಮಾಸ್ಟರ್‌ಮೈಂಡ್ ವರ್ಕೌಟ್ ಮಾಡಿದೆ ಇಲ್ಲವಾದಲ್ಲಿ ಅದನ್ನು ಕೂಡ ಕಳೆದುಕೊಳ್ಳುವ ಭೀತಿ ಎದುರಾಗಿತ್ತು.


51 ವರ್ಷದ ಬಳಿಕ ತೊಟ್ಟಂ ವಾರ್ಡಿಗೆ ಲಗ್ಗೆಯಿಟ್ಟ ಕಾಂಗ್ರೇಸ್
ಈ ಸಲದ ಚುನಾವಣೆಯಲ್ಲಿ ತೊಟ್ಟಂ ವಾರ್ಡ್ ಇಲ್ಲಿನ ಶಾಸಕರ ಅತೀ ಮುತುವರ್ಜಿಯ ವಾರ್ಡ್ ಆಗಿತ್ತು, ಎರಡು ಯುವಕರ ತಂಡದ ನಡುವಿನ ಭಿನ್ನಮತ ಬಗೆಹರಿಸದೆ ನೇರವಾಗಿ ಏಕಮುಖವಾಗಿ ಬ್ಯಾಟಿಂಗ್ ಮಾಡಿರುವ ಕಾರಣದಿಂದಾಗಿ ಈ ಸಲ ತೊಟ್ಟಂ ಬಿಜೆಪಿಯ ಹಿಡಿತದಿಂದ ಕೈ ತಪ್ಪಿತಪ್ಪಿದೆ ಈ ವಾರ್ಡಿನಲ್ಲಿ ೫೧ ವರ್ಷದ ಬಳಿಕ ಕಾಂಗ್ರೇಸ್ ತನ್ನ ಅಧಿಪತ್ಯ ಸ್ಥಾಪಿಸಿದೆ ಎಂಬುದು ವಾದ.


ಮಾಜಿ ಪುರಸಭಾ ಸದಸ್ಯೆ ಶಾಂಭಾವಿ ಕುಲಾಲ್ ಸೈಲೆಂಟ್
ಕಳೆದ ಪುರಸಭಾ ಚುನಾವಣೆಯಲ್ಲಿ ತೊಟ್ಟಂ ವಾರ್ಡಿಗೆ ಬೆಜೆಪಿ ಅಭ್ಯರ್ಥಿಯಾಗಿ ಕಣಕಿಳಿದಿದ್ದ ಶಾಂಭವಿ ಕುಲಾಲ್ ೧೨೬ ಮತಗಳ ಅಂತರದಿAದ ಗೆಲುವು ಸಾಧಿಸಿದ್ದರು ಮಾತ್ರವಲ್ಲದೆ ಹಲವಾರು ಬಾರಿ ಗ್ರಾಮಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಕೂಡ ಗೆಲುವು ಸಾಧಿಸಿಕೊಂಡವರು ಮತ್ತು ಈ ಭಾಗದ ಕಾರ್ಯಕರ್ತರ ಹಾಗೂ ಮತದಾರರ ನಾಡಿಮಿಡಿತವನ್ನು ಬಹುಸುಲಭವಾಗಿ ಅರ್ಥೈಸಿ ಕೊಂಡು ಹೋಗುವಷ್ಟರ ಮಟ್ಟಿಗೆ ಪರಿಣಿತರು ಆದರೇ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಾರ್ಟಿಯ ಪರ ಮತಯಾಚನೆ ಮಾಡದಿರುವುದು ಕೂಡ ಆ ಭಾಗದ ಸೋಲಿಗೆ ಕಾರಣವಾಗಿದೆಂಬ ಮಾತು ಕೂಡ ಕೇಳಿ ಬರುತ್ತಿದೆ.

ಈ ಸಲದ ಬಿಜೆಪಿ ಅಭ್ಯರ್ಥಿ ಕಳೆದ ಚುನಾವಣೆಯಲ್ಲಿ ತೊಟ್ಟಂ ವಾರ್ಡಿನಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು ಅದೇ ಸಮಯದಲ್ಲೆ ಪಕ್ಷ ಕೂಡ ಸದಸ್ಯತ್ವತನದಿಂದ ಉಚ್ಛಾಟನೆ ಮಾಡಿತ್ತು, ಈ ಬಾರಿಯ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೆಲವೇ ಕೆಲವು ದಿನಗಳ ಹಿಂದೆ ಪಕ್ಷಕ್ಕೆ ಸೇರ್ಪಡಿಸಿ ಟಿಕೆಟ್ ನೀಡಿರುವುದು ಕೂಡ ಒಂದು ಸೈಡಿನ ಯುವಕರ ಬಣಕ್ಕೆ ಬೇಸರವನ್ನುಂಟು ಮಾಡಿತ್ತು
ಇದೇ ಎಫೆಕ್ಟ್ ದುಗ್ಗನ್‌ತೋಟ ವಾರ್ಡಿಗೂ ತಟ್ಟಿದೆಂಬ ಮಾತು ಕೂಡ ಕೇಳಿ ಬಂತು.


ಅ0ತೂ ಬಿಜೆಪಿ ಭದ್ರಮತಬ್ಯಾಂಕ್ ಸ್ಥಳಿಯ ನಾಯಕರ ಮೊಂಡುತನದಿ0ದಾಗಿ ಕಳೆದುಕೊಂಡಿದೆಯೆ ಹೊರತು ಬಿಜಪಿಯ ವಿರುದ್ಧದ ಅಲೆ ಅಲ್ಲಾ ಎಂಬುದನ್ನು ಕೊಪ್ಪಲಂಗಡಿ-ಗರಡಿ-ಜನರಲ್ ಶಾಲೆಯ ವಾರ್ಡಿನಲ್ಲಿ ಕಾರ್ಯಕರ್ತರು ತೋರಿಸಿಕೊಟ್ಟಿದ್ದಾರೆ.

ಬ್ಯೂರೋ ರಿಪೋರ್ಟ್ ವಿಶ್ವನ್ಯೂಸ್೨೪

Vishwa News 24

Recent Posts

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ – vishwanews24

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ…

18 hours ago

ಮಂಗಳೂರು: ದಸರಾ ರಜೆ ವೇಳೆ ಸೆಮಿಸ್ಟರ್ ಪರೀಕ್ಷೆ: ಖಾಸಗಿ ಕಾಲೇಜು ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ – vishwanews24

ಮಂಗಳೂರು: ದಸರಾ ರಜೆ ವೇಳೆ ಸೆಮಿಸ್ಟರ್ ಪರೀಕ್ಷೆ: ಖಾಸಗಿ ಕಾಲೇಜು ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಮಂಗಳೂರು: ದಸರಾ  ಸಂಭ್ರಮದ ನಡುವೆಯೇ…

18 hours ago

ಮಂಗಳೂರು : ದಸರಾ ಉದ್ಘಾಟನೆಗೆ ಸಿಎಂ ಗೈರು ; ಕರಾವಳಿ ತೀವ್ರ ಜನರಲ್ಲಿ ಅಸಮಾಧಾನ  : ಅಕ್ಷಿತ್ ಸುವರ್ಣ  – vishwanews24

ಮಂಗಳೂರು : ದಸರಾ ಉದ್ಘಾಟನೆಗೆ ಸಿಎಂ ಗೈರು ; ಕರಾವಳಿ ತೀವ್ರ ಜನರಲ್ಲಿ ಅಸಮಾಧಾನ  : ಅಕ್ಷಿತ್ ಸುವರ್ಣ   ಮಂಗಳೂರು:…

18 hours ago

ಮಂಗಳೂರು: ಅಕ್ರಮ ಸಂಬಂಧದ ಶಂಕೆ ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ – vishwanews24

ಮಂಗಳೂರು: ಅಕ್ರಮ ಸಂಬಂಧದ ಶಂಕೆ ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ ಮಂಗಳೂರು: ಅಕ್ರಮ ಸಂಬಂಧದ ಶಂಕೆಯ ಹಿನ್ನೆಲೆ…

18 hours ago

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ – vishwanews24

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…

3 days ago

ಉಡುಪಿ ನಗರಸಭೆ ಬಾಕಿ ಕಾಮಗಾರಿ ಶೀಘ್ರ ಆರಂಭಕ್ಕೆ ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ – vishwanews24

ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…

3 days ago