ಕಾಪು: ಪುರಸಭಾ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದಾದರೂ ಕೋಸ್ಟಲ್ ಬಿಜೆಪಿ ಬೆಲ್ಟ್ ಕಳಚಿ ಬಿದ್ದಿದೆ.ಪ್ರತಿ ಚುನಾವಣೆಯಲ್ಲೂ ಬಿಜೆಪಿಗ್ ಲೀಡ್ ಕೊಡುತ್ತಿದ್ದ ಕೈಪುಂಜಾಲು-ಪೊಲಿಪು-ತೊಟ್ಟ0-ದುಗ್ಗನ್‌ತೋಟ ವಾರ್ಡ್ ಈಸಲದ ಮಟ್ಟಿಗೆ ಕಾಂಗ್ರೇಸ್ ವಶ ಪಡಿಸಿಕೊಂಡಿದೆ.
ಬಿಜೆಪಿಯಲ್ಲಿನ ಸ್ಥಳೀಯ ನಾಯಕನ ಮೊಂಡುತನಕ್ಕೆ ಆ ಭಾಗದ ಭಾಜಪ ಮತ್ತು ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ನೇರವಾಗಿ ಅವರವರ ಅಸ್ಥಿತ್ವ ತೋರಿಸುವ ಭರಾಟೆಯಲ್ಲಿ ಬಿಜೆಪಿ ತಕ್ಕ ಶಾಸ್ತಿ ಮಾಡಿದ್ದಾರೆಂಬ ಮಾತು ಕೂಡ ಕೇಳಿ ಬರುತ್ತಿದೆ.ಈ ಚುನಾವಣೆಯ ಸಮಯದಲ್ಲಿ ಆ ಭಾಗಕ್ಕೆ ಮನವೊಲಿಸಲು ಬಂದ ಎಲ್ಲಾ ನಾಯಕರಿಗೂ ಅಲ್ಲಿನ ಕಾರ್ಯಕರ್ತರು ನೀಡಿದ ಉತ್ತರ ” ಈ ಸಲದ ಮಟ್ಟಿಗೆ ನೋಚ್ಯಾನ್ಸ್” ಎಂಬುದಾಗಿತ್ತು.ಇನ್ನು ಕರಾವಳಿ ಹಾಗೂ ಕೊಪ್ಪಲಂಗಡಿ ವಾರ್ಡಿನಲ್ಲಿ ಜಿಲ್ಲಾ ನಾಯಕರ ಮಾಸ್ಟರ್‌ಮೈಂಡ್ ವರ್ಕೌಟ್ ಮಾಡಿದೆ ಇಲ್ಲವಾದಲ್ಲಿ ಅದನ್ನು ಕೂಡ ಕಳೆದುಕೊಳ್ಳುವ ಭೀತಿ ಎದುರಾಗಿತ್ತು.
51 ವರ್ಷದ ಬಳಿಕ ತೊಟ್ಟಂ ವಾರ್ಡಿಗೆ ಲಗ್ಗೆಯಿಟ್ಟ ಕಾಂಗ್ರೇಸ್
ಈ ಸಲದ ಚುನಾವಣೆಯಲ್ಲಿ ತೊಟ್ಟಂ ವಾರ್ಡ್ ಇಲ್ಲಿನ ಶಾಸಕರ ಅತೀ ಮುತುವರ್ಜಿಯ ವಾರ್ಡ್ ಆಗಿತ್ತು, ಎರಡು ಯುವಕರ ತಂಡದ ನಡುವಿನ ಭಿನ್ನಮತ ಬಗೆಹರಿಸದೆ ನೇರವಾಗಿ ಏಕಮುಖವಾಗಿ ಬ್ಯಾಟಿಂಗ್ ಮಾಡಿರುವ ಕಾರಣದಿಂದಾಗಿ ಈ ಸಲ ತೊಟ್ಟಂ ಬಿಜೆಪಿಯ ಹಿಡಿತದಿಂದ ಕೈ ತಪ್ಪಿತಪ್ಪಿದೆ ಈ ವಾರ್ಡಿನಲ್ಲಿ ೫೧ ವರ್ಷದ ಬಳಿಕ ಕಾಂಗ್ರೇಸ್ ತನ್ನ ಅಧಿಪತ್ಯ ಸ್ಥಾಪಿಸಿದೆ ಎಂಬುದು ವಾದ.
ಈ ಸಲದ ಬಿಜೆಪಿ ಅಭ್ಯರ್ಥಿ ಕಳೆದ ಚುನಾವಣೆಯಲ್ಲಿ ತೊಟ್ಟಂ ವಾರ್ಡಿನಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು ಅದೇ ಸಮಯದಲ್ಲೆ ಪಕ್ಷ ಕೂಡ ಸದಸ್ಯತ್ವತನದಿಂದ ಉಚ್ಛಾಟನೆ ಮಾಡಿತ್ತು, ಈ ಬಾರಿಯ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೆಲವೇ ಕೆಲವು ದಿನಗಳ ಹಿಂದೆ ಪಕ್ಷಕ್ಕೆ ಸೇರ್ಪಡಿಸಿ ಟಿಕೆಟ್ ನೀಡಿರುವುದು ಕೂಡ ಒಂದು ಸೈಡಿನ ಯುವಕರ ಬಣಕ್ಕೆ ಬೇಸರವನ್ನುಂಟು ಮಾಡಿತ್ತು
ಇದೇ ಎಫೆಕ್ಟ್ ದುಗ್ಗನ್‌ತೋಟ ವಾರ್ಡಿಗೂ ತಟ್ಟಿದೆಂಬ ಮಾತು ಕೂಡ ಕೇಳಿ ಬಂತು.
ಅ0ತೂ ಬಿಜೆಪಿ ಭದ್ರಮತಬ್ಯಾಂಕ್ ಸ್ಥಳಿಯ ನಾಯಕರ ಮೊಂಡುತನದಿ0ದಾಗಿ ಕಳೆದುಕೊಂಡಿದೆಯೆ ಹೊರತು ಬಿಜಪಿಯ ವಿರುದ್ಧದ ಅಲೆ ಅಲ್ಲಾ ಎಂಬುದನ್ನು ಕೊಪ್ಪಲಂಗಡಿ-ಗರಡಿ-ಜನರಲ್ ಶಾಲೆಯ ವಾರ್ಡಿನಲ್ಲಿ ಕಾರ್ಯಕರ್ತರು ತೋರಿಸಿಕೊಟ್ಟಿದ್ದಾರೆ.
ಬ್ಯೂರೋ ರಿಪೋರ್ಟ್ ವಿಶ್ವನ್ಯೂಸ್೨೪
ಮಲ್ಪೆ : ಸೈಂಟ್‌ಮೇರೀಸ್ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…
ಜೂನ್ 21ರಂದು ನೀಟ್ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್ 21 ರಂದು ನೀಟ್–ಯುಜಿ ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…
ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ : ಪೃಥ್ವಿರಾಜ್…
ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…
ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…
ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…