Featured

ಕೈಪುಂಜಾಲು ಸಯ್ಯಿದ್ ಅರಬಿ ವಲಿಯುಲ್ಲಾ ಧರ್ಮ ಸಾಮರಸ್ಯ ದರ್ಗಾ:21 ಅಕ್ಟೋಬರ್ ಸಫರ್ ಝಿಯಾರತ್ ಸಮಾರಂಭ ಹಿಂದು ಮುಸ್ಲಿಮ್ ಭೇದ ಭಾವ ಇಲ್ಲದೆ ಆಚರಿಸುವ ಝಿಯಾರತ್ ಸಮಾರಂಭ – Vishwanews24

ಕೈಪುಂಜಾಲು ಸಯ್ಯಿದ್ ಅರಬಿ ವಲಿಯುಲ್ಲಾ ಧರ್ಮ ಸಾಮರಸ್ಯ ದರ್ಗಾ:21 ಅಕ್ಟೋಬರ್ ಸಫರ್ ಝಿಯಾರತ್ ಸಮಾರಂಭ
ಹಿಂದು ಮುಸ್ಲಿಮ್ ಭೇದ ಭಾವ ಇಲ್ಲದೆ ಆಚರಿಸುವ ಝಿಯಾರತ್ ಸಮಾರಂಭ

ಕಾಪು: ಕೈಪುಂಜಾಲು ಸಮುದ್ರ ಕಿನಾರೆಯಲ್ಲಿ ಅಂತ್ಯ ವಿಶ್ರಾಂತಿ ಹೊಂದಿರುವ ಸಯ್ಯಿದ್ ಅರಭಿ ವಲಿಯುಲ್ಲಾರವರ ದರ್ಗಾದಲ್ಲಿ ವರ್ಷಂಪ್ರತಿ ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಸಫರ್ ತಿಂಗಳ ಕೊನೆಯ ಬುಧವಾರದಂದು ನಡೆಸುತ್ತಾ ಬಂದಿರುವ ಸಪರ್‌ ಝಿಯಾರತ್ ಸಮಾರಂಭವು ಇದೇ ಬರುವ ತಾ, 21,09,2022 ಬುಧವಾರ ದಂದು ವಿಜಂಭಣೆಯಿಂದ ದರ್ಗಾದಲ್ಲಿ ನಡೆಯಲಿದೆ ಎಂದು ಕಾಪುವಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪೊಲಿಪು ಮಸೀದಿಯ ಜಾಗೃತ ಸಮಿತಿ ಸದಸ್ಯ ಅಮೀರ್ ಹಂಝಾ ತಿಳಿಸಿದರು.

ಕಾಪು-ಪೊಲಿಪುಜಾಮಿಯಾ ಮಸೀದಿಯ ಆಡಳಿತಕ್ಕೆ ಒಳಪಟ್ಟ ಕೈಪುಂಜಾಲ್ ಸಯ್ಯಿದ್ ಅರಬಿ ವಲಿಯುಲ್ಲಾರವರ ದರ್ಗಾದಲ್ಲಿ ವಿಜೃಂಭಣೆಯಿಂದ ನಡೆಯುತ್ತಾ ಬಂದಿರುವ ಸಫರ್ ಝಿಯಾರದ ಸಮಾರಂಭವು, ಕಳೆದ ಎರಡು ವರ್ಷ ಕೊರೋನಾದ ಕಾರಣದಿಂದಾಗಿ ಸಾಂಕೇತಿಕವಾಗಿ ನಡೆಸಿರುತ್ತೇವೆ, ಆದರೆ ಈ ಬಾರಿ ಈ ಮೊದಲಿನಂತೆ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಿದ್ದು, ಬೆಳಗ್ಗೆ 6.00 ಗಂಟೆಗೆ ಪ್ರಾರಂಭವಾದರೆ ಸಂಜೆ 7.00 ಗಂಟೆ ತನಕ ಝಿಯಾರತ್ ಸಮಾರಂಭ ನಡೆಯಲಿದೆ. ಬೆಳಿಗ್ಗೆ 5 ಗಂಟೆಗೆ ಕಾಪು ಖಾಝಿ ಅಲ್ ಹಾಜ್ ಪಿ.ಬಿ.ಅಹ್ಮದ್‌ ಮುಸ್ಲಿಯಾರ್ ರವರು ದುಆ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ, ಈ ಕಾರ್ಯಕ್ರಮವನ್ನು ಪೊಲಿಪು ಜಾಮಿಯಾ ಮಸೀದಿಯ ಖತೀಬರಾದ ಮುಹಮ್ಮದ್ ಇರ್ಷಾದ್ ಸಅದಿಯವರು ಉದ್ಘಾಟಿಸಲಿದ್ದಾರೆ. ಈ ಸಮಾರಂಭವು ಪೊಲಿಪು ಜಾಮಿಯಾ ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷರಾದ H.ಅಬುಲ್ಲ ಸೂಪರ್ ಸ್ಟಾರ್’, ‘ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ, ದಿ. H.ಮಹಮ್ಮದ್ ರವರ ಮಗ ಸಫ್ರ್ರಾಝ್ ರವರ ಉಸ್ತುವಾರಿಯಲ್ಲಿ ಈ ಬಾರಿ ಸಯೀದ್ ಅರಭಿ ವಲಿಯುಲ್ಲಾ ರವರ ದರ್ಗಾದಲ್ಲಿ ಆಂತರಿಕ ಜೀರ್ಣೋ ದ್ಧಾರ ಕೂಡ ನಡೆದಿರುತ್ತದೆ. ಇದಕ್ಕೆ ನರೇಂದ್ರ ಶ್ರೀಯಾನ್ ಮತ್ತು ಗುಣವಂತ ಶ್ರೀಯಾನ್ ಹಾಗೂ ಕುಟುಂಬದವರು ತುಂಬು ಸಹಕಾರ ನೀಡಿರುತ್ತಾರೆ.

ಈ ವಾರ್ಷಿಕ ಝಿಯಾರತ್ ಸಮಾರಂಭ ಅಲ್ಲದೇ ಬೇರೆ ದಿನಗಳಲ್ಲಿ ಅಲ್ಲಿಗೆ ಝಿಯಾರತ್ ಗೆ ಬರುವವರಿಗೆ ಸಂಜೆ 6ಗಂಟೆ ತನಕ ಅವಕಾಶ ಮಾತ್ರ ಇರುತ್ತದೆ. ಈ ಸಮಾರಂಭಕ್ಕೆ ಎಲ್ಲರನ್ನೂ ಕೂಡ ಈ ಸಂಧರ್ಭದಲ್ಲಿ ಆಹ್ವಾನಿಸುತ್ತಿದ್ದೇವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ‌ ಸಂಧರ್ಭದಲ್ಲಿ ಅಧ್ಯಕ್ಷ ಎಚ್ ಅಬ್ದುಲ್ ಸ್ಟಾರ್ , ಇಂತಿಯಾಜ್ ಅಹಮ್ಮದ್,ಸರ್ಫರಾಜ್, ಇಲಿಯಾಸ್ , ಮೊದಲಾದವರು ಉಪಸ್ಥಿತರಿದ್ದರು.

Vishwa News 24

Recent Posts

ಪಡುಬಿದ್ರಿ: ಹೆಜಮಾಡಿ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ; ಟೋಲ್ ಗೇಟನ್ನು ತಕ್ಷಣ ತೆರವುಗೊಳಿಸಬೇಕೆಂದು ಆಗ್ರಹ – vishwanews24

ಪಡುಬಿದ್ರಿ: ಹೆಜಮಾಡಿ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ .. ಟೋಲ್ ಗೇಟ ನ್ನು ತಕ್ಷಣ ತೆರವುಗೊಳಿಸಬೇಕು ಎಂದು ಆಗ್ರಹ 15…

7 hours ago

ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ: ಹಿಜಾಬ್ ಧರಿಸಲು ಅವಕಾಶ ಇಲ್ಲ : ಧಾರ್ಮಿಕ ಉಡುಪುಗಳ ಗೊಂದಲ ಬಗ್ಗೆ ಪ್ರಿಯಾಂಕ ಖರ್ಗೆ ಸ್ಪಷ್ಟನೆ – vishwanews24

ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ: ಹಿಜಾಬ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ : ಪ್ರಿಯಾಂಕ ಖರ್ಗೆ ಸ್ಪಷ್ಟನೆ ಬೆಂಗಳೂರು: ಕರ್ನಾಟಕದ ಪೊಲೀಸ್…

8 hours ago

ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿ – vishwanews24

ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿ ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ವಿಶೇಷ ಸೇನಾ…

9 hours ago

ಕಡಬ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ – vishwanews24

ಕಡಬ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ :ಭಕ್ತರಿಗೆ ಡ್ರಮ್‌ಗಳಲ್ಲಿ ಪರ್ಯಾಯ ಸ್ನಾನ ವ್ಯವಸ್ಥೆ ಕಡಬ:ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿರಂತರ ಸುರಿಯುತ್ತಿರುವ…

9 hours ago

ಮೀನುಗಾರಿಕಾ ಋತು ಆರಂಭ ಹಿನ್ನೆಲೆ : ಮಲ್ಪೆ ಬಂದರಿಗೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ – vishwanews24

ಮೀನುಗಾರಿಕಾ ಋತು ಆರಂಭ ಹಿನ್ನೆಲೆ : ಮಲ್ಪೆ ಬಂದರಿಗೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ ಉಡುಪಿ: ಜೂನ್ ಮತ್ತು ಜುಲೈ…

9 hours ago

ಕುಂದಾಪುರ ರಿಚರ್ಡ್‌ ಹತ್ಯೆ ಪ್ರಕರಣ : ಆರೋಪಿ ಭಟ್ಕಳದಲ್ಲಿ ಬಂಧನ – vishwanews24

ಕುಂದಾಪುರ ರಿಚರ್ಡ್‌ ಹತ್ಯೆ ಪ್ರಕರಣ : ಆರೋಪಿ ಭಟ್ಕಳದಲ್ಲಿ ಬಂಧನ ಕುಂದಾಪುರ: ಇಲ್ಲಿನ ಚರ್ಚ್ ರಸ್ತೆಯ ಸಮೀಪ ಗುರುವಾರ ತಡರಾತ್ರಿ…

9 hours ago