ಕೊಂಕಣ್ ರೈಲ್ವೆ ವತಿಯಿಂದ ಉಡುಪಿ ಕ್ಷಯರೋಗ ನಿಯಂತ್ರಣಧಿಕಾರಿ ಕಚೇರಿಗೆ ವಾಹನ ಹಸ್ತಾಂತರ : vishwanews24
ಕೊಂಕಣ್ ರೈಲ್ವೆ ವತಿಯಿಂದ ಉಡುಪಿ ಕ್ಷಯರೋಗ ನಿಯಂತ್ರಣಧಿಕಾರಿ ಕಚೇರಿಗೆ ವಾಹನ ಹಸ್ತಾಂತರ : vishwanews24
ಉಡುಪಿ : ಕೊಂಕಣ ರೈಲ್ವೆ ಸಿಎಸ್ಆರ್ ನಿಧಿಯಿಂದ ಉಡುಪಿ ಜಿಲ್ಲಾ ಕ್ಷಯರೋಗ ನಿಯಂತ್ರಣಧಿಕಾರಿ ಕಚೇರಿಗೆ ಸಾರ್ವಜನಿಕರ ಸೇವೆಗೆ ಬೋಲೇರೋ B 6 ವಾಹನ ಹಸ್ತಾಂತರ ಕಾರ್ಯಕ್ರಮ ಇಂದು ನಡೆಯಿತು.
ಉಡುಪಿ ಜಿಲ್ಲಾಧಿಕಾರಿಯವರಾದ ಸ್ವರೂಪ ಟಿ ಕೆ ಇವರಿಗೆ ಕೊಂಕಣ ರೈಲ್ವೆ ರೀಜನಲ್ ಮ್ಯಾನೇಜರ್ ಆಶಾ ಶೆಟ್ಟಿ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಬಸವರಾಜ್ ಹುಬ್ಬಳ್ಳಿ ,ಸೀನಿಯರ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಗೋಪಾಲಕೃಷ್ಣ ,ಡೆಪ್ಯೂಟಿ ಚೀಫ್ ಮೆಡಿಕಲ್ ಆಫೀಸರ್ ಸ್ಟೀವನ್ ಜಾರ್ಜ್, ಡಿಟಿಓ ಚಿದಾನಂದ ಸಂಜು ಮತ್ತು ಡಿ ಎಂ ಓ ಪ್ರಶಾಂತ್ ಭಟ್ ಉಪಸ್ಥಿತರಿದ್ದರು.

