Featured

ಕೊಂಕಣ ರೈಲ್ವೆ ವಿಲೀನ: ಮಹಾರಾಷ್ಟ್ರ ಸಿಎಂ ಭೇಟಿಯಾದ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ – vishwanews24

ಕೊಂಕಣ ರೈಲ್ವೆ ವಿಲೀನ: ಮಹಾರಾಷ್ಟ್ರ ಸಿಎಂ ಭೇಟಿಯಾದ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ರನ್ನು ಮುಂಬಯಿ ಮಂತ್ರಾಲಯದಲ್ಲಿ ಭೇಟಿ ಮಾಡಿ ಭೇಟಿ ಮಾಡಿ ಚರ್ಚಿಸಿದರು.

ಮಾತುಕತೆಯ ವೇಳೆ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಬೇಕಾದ ಅನಿವಾರ್ಯತೆ ಕುರಿತಂತೆ ವಿವರಿಸಿ ಅವರ ಸಹಕಾರ ಕೋರಿದರು. ದಿ.ಜಾರ್ಜ್ ಫೆನಾರ್ಂಡಿಸ್ ಮೂಲಕ ಕರಾವಳಿ ಪ್ರಯಾಣಿಕರ ಜೀವನಾಡಿಯಾಗಿ ರೂಪುಗೊಂಡ ಕೊಂಕಣ ರೈಲ್ವೆ ಆರ್ಥಿಕ ಮುಗ್ಗಟ್ಟಿನ ಸಂಕಷ್ಟದಲ್ಲಿದೆ. ಸುಮಾರು 750 ಕಿ.ುೀ ಉದ್ದದ ಕೊಂಕಣ ರೈಲ್ವೆ ಮಾರ್ಗವನ್ನು ಅಭಿವೃದ್ಧಿಪಡಿಸಲು ಹಾಗೂ ಭವಿಷ್ಯದ ಸಂಚಾರ ಬೆಳವಣಿಗೆಯ ಸಾಮರ್ಥ್ಯ ಹೆಚ್ಚಿಸಲು ಇಡೀ ಮಾರ್ಗವನ್ನು ದ್ವಿಗುಣಗೊಳಿಸುವುದು ಅನಿವಾರ್ಯ ಎಂದು ಕೋಟ ವಿವರಿಸಿದರು.

ಇದನ್ನೂ ಓದಿ :

ಒಂದು ಅಂದಾಜಿನ ಪ್ರಕಾರ ಕೊಂಕಣ ಮಾರ್ಗದ ಹಳಿಗಳನ್ನು ದ್ವಿಗುಣ ಗೊಳಿಸುವುದು ಮತ್ತು ತುಂಬಾ ಅವ್ಯವಸ್ಥೆ ಯಲ್ಲಿರುವ ರೈಲ್ವೆ ನಿಲ್ದಾಣಗಳನ್ನು ಉತ್ತಮವಾಗಿ ನಿರ್ಮಾಣ ಮಾಡಲು 40,000 ಕೋಟಿ ರೂ. ಅಗತ್ಯವಿದೆ. ಇಷ್ಟೊಂದು ಹಣ ಭರಿಸಲು ಕೊಂಕಣ ರೈಲ್ವೆಯ ಆರ್ಥಿಕ ಸ್ಥಿತಿ ಸಹಕಾರಿ ಯಾಗಿಲ್ಲ. ಕೊಂಕಣ ರೈಲ್ವೆ ಹಾದು ಹೋಗುವ ರಾಜ್ಯ ಸರಕಾರಗಳು ತಮ್ಮ ಪಾಲಿನ ಶೇರ್‌ಗಳನ್ನು ಬಿಟ್ಟುಕೊಟ್ಟರೆ ವಿಲೀನಗೊಳಿಸಬಹುದು ಎಂದು ಕೇಂದ್ರ ಸಚಿವರು ಲೋಕಸಭೆಯಲ್ಲಿ ಉಲ್ಲೇಖಿಸಿದ್ದನ್ನು ಸಂಸದ ಕೋಟ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಈ ಕುರಿತಂತೆ ಗೋವಾ ಮತ್ತು ಕೇರಳ ಸರಕಾರಗಳು ವಿಲೀನಕ್ಕೆ ಸಹಮತ ವ್ಯಕ್ತಪಡಿಸಿದ್ದು, ಕರ್ನಾಟಕ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರೈಲ್ವೆ ಅಭಿವೃದ್ಧಿ ದೃಷ್ಟಿಯಿಂದ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಮಹಾರಾಷ್ಟ್ರ ಸರಕಾರವೂ ವಿಲೀನಕ್ಕೆ ಸಹಮತ ವ್ಯಕ್ತಪಡಿಸಿದರೆ ಮುಂದಿನ ದಿನಗಳಲ್ಲಿ ಕೊಂಕಣ ಮಾರ್ಗವು ದ್ವಿಪಥವಾಗುವುದಲ್ಲದೆ, ಇತರ ಅಭಿವೃದ್ಧಿಗಾಗಿ ಕರಾವಳಿ ರಾಜ್ಯಗಳ ಜನಪ್ರತಿನಿಧಿಗಳು ಕೇಂದ್ರಕ್ಕೆ ಮನವಿ ಮಾಡಬಹುದಾಗಿದೆ ಎಂದು ಕೋಟ ವಿವರಿಸಿದರು.

ಇದನ್ನೂ ಓದಿ :

ಸಂಸದ ಕೋಟ ಅವರ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಇದೊಂದು ಬಹು ಮುಖ್ಯ ವಿಚಾರವಾಗಿದ್ದು, ಕೊಂಕಣ ರೈಲ್ವೆ ಮಾರ್ಗದ ಪ್ರಯಾಣಿಕರ ಹಿತದೃಷ್ಟಿಯಿಂದ ಸಹಮತದ ಬಗ್ಗೆ ಕೂಡಲೇ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು ಎಂದು ಕೋಟ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಭೇಟಿಯ ಸಂದರ್ಭದಲ್ಲಿ ಕೋಟ ಅವರ ಜೊತೆ ಚಂದಗಡ್‌ನ ಶಾಸಕ ಶಿವಾಜಿ ಪಾಟೀಲ್, ನ್ಯೂ ಮುಂಬೈ ಮಹಾನಗರ ಪಾಲಿಕೆ ಸದಸ್ಯ ಸಂತೋಷ್ ಶೆಟ್ಟಿ, ಕುಂದಾಪುರ ರೈಲ್ವೆ ಬಳಕೆದಾರರ ಸಂಘದ ಗೌತಮ್ ಶೆಟ್ಟಿ, ಮತ್ತು ಸುನಿಲ್ ಪೂಜಾರಿ ಉಪಸ್ಥಿತರಿದ್ದರು.

Vishwa News 24

Recent Posts

ಅ.31ರಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದಿಂದ ಸ್ನೇಹ ಸಮಾವೇಶ : ಪ್ರಶಸ್ತಿ ಪ್ರದಾನ ಸಮಾರಂಭ – vishwanews24

ಅ.31ರಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದಿಂದ ಸ್ನೇಹ ಸಮಾವೇಶ; ಪ್ರಶಸ್ತಿ ಪ್ರದಾನ ಸಮಾರಂಭ ಉಡುಪಿ : ಉಡುಪಿ ಜಿಲ್ಲಾ ಮುಸ್ಲಿಮ್…

3 minutes ago

ರೈಲುಗಳಲ್ಲಿ ರಾತ್ರಿ ಮೊಬೈಲ್ ಚಾರ್ಜಿಂಗ್ ನಿಷೇಧ: ರೈಲ್ವೆ ಮಂಡಳಿ ಆದೇಶ – vishwanews24

ರೈಲುಗಳಲ್ಲಿ ರಾತ್ರಿ ಮೊಬೈಲ್ ಚಾರ್ಜಿಂಗ್ ನಿಷೇಧ: ಕಟ್ಟುನಿಟ್ಟಿನ ಜಾರಿಗೆ ರೈಲ್ವೆ ಮಂಡಳಿ ಆದೇಶ ನವದೆಹಲಿ: ದಕ್ಷಿಣ ಪೂರ್ವ ರೈಲ್ವೆಯ ಮುಂಬೈ…

1 hour ago

ಆಡಳಿತ ಬದಲಾವಣೆ ಉದ್ದೇಶದಿಂದ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗುವವರಿಗೆ ಸರಕಾರಿ ಉದ್ಯೋಗ ನಿರಾಕರಣೆ: ಉತ್ತರ ಪ್ರದೇಶ ಸರಕಾರದಿಂದ ನಿರ್ಧಾರ – vishwanews24

ಆಡಳಿತ ಬದಲಾವಣೆ ಉದ್ದೇಶದಿಂದ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗುವವರಿಗೆ ಸರಕಾರಿ ಉದ್ಯೋಗ ನಿರಾಕರಣೆ: ಉತ್ತರ ಪ್ರದೇಶ ಸರಕಾರದಿಂದ ನಿರ್ಧಾರ ಲಖನೌ: ಆಡಳಿತ…

2 hours ago

ಕಾಸರಗೋಡು : ಲಾಡ್ಜ್‌ನಲ್ಲಿ ಎಂಡಿಎಂಎ ಪತ್ತೆ: ಇಬ್ಬರ ಬಂಧನ – vishwanews24

ಕಾಸರಗೋಡು : ಲಾಡ್ಜ್‌ನಲ್ಲಿ ಎಂಡಿಎಂಎ ಪತ್ತೆ: ಇಬ್ಬರ ಬಂಧನ ಕಾಸರಗೋಡು: ಲಾಡ್ಜ್ ನಲ್ಲಿ ಎಂಡಿಎಂಎ ಮಾದಕ ದ್ರವ್ಯದೊಂದಿಗೆ ಯುವತಿ ಮತ್ತು…

2 hours ago

ಕಾರ್ಕಳ: ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ : ನ. 1ರಂದು ಅಟ್ಟಳಿಗೆ ಮುಹೂರ್ತ – vishwanews24 https://wp.me/p9KQap-v49

ಕಾರ್ಕಳ: ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ : ನ. 1ರಂದು ಅಟ್ಟಳಿಗೆ ಮುಹೂರ್ತ ಸ್ವಾಮಿಯ ಸನ್ನಿಧಿಯಲ್ಲಿ ಬೆಳಗ್ಗೆ 7.30ರಿಂದ ಪಾದಾಭಿಷೇಕ..…

3 hours ago

ಇಂದಿನಿಂದ 13 ದಿನ ಹಾಸನಾಂಬೆ ಜಾತ್ರೆ: ಲಕ್ಷಾಂತರ ಭಕ್ತರ ಆಗಮನ ನಿರೀಕ್ಷೆ – vishwanews24

ಇಂದಿನಿಂದ 13 ದಿನ ಹಾಸನಾಂಬೆ ಜಾತ್ರೆ: ಲಕ್ಷಾಂತರ ಭಕ್ತರ ಆಗಮನ ನಿರೀಕ್ಷೆ ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ…

3 hours ago