Featured

ರೈಲುಗಳಲ್ಲಿ ರಾತ್ರಿ ಮೊಬೈಲ್ ಚಾರ್ಜಿಂಗ್ ನಿಷೇಧ: ರೈಲ್ವೆ ಮಂಡಳಿ ಆದೇಶ – vishwanews24

ರೈಲುಗಳಲ್ಲಿ ರಾತ್ರಿ ಮೊಬೈಲ್ ಚಾರ್ಜಿಂಗ್ ನಿಷೇಧ: ಕಟ್ಟುನಿಟ್ಟಿನ ಜಾರಿಗೆ ರೈಲ್ವೆ ಮಂಡಳಿ ಆದೇಶ

ನವದೆಹಲಿ: ದಕ್ಷಿಣ ಪೂರ್ವ ರೈಲ್ವೆಯ ಮುಂಬೈ ಲೋಕಲ್ ರೈಲಿನಲ್ಲಿ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್‌ ಚಾರ್ಜ್‌ ಆಗುತ್ತಿದ್ದಾಗ ಸ್ಫೋಟಗೊಂಡು ಸಂಪೂರ್ಣ ಜೋಗಿ ಹೊಗೆಯಿಂದ ಅವೃತವಾದ ಘಟನೆ ಬೆನ್ನಲ್ಲೇ, ರೈಲ್ವೆ ಮಂಡಳಿಯು ಮಹತ್ವದ ನಿರ್ಧಾರ ಕೈಗೊಂಡಿದೆ.

ರಾತ್ರಿ 11.00 ಗಂಟೆಯಿಂದ ಬೆಳಗ್ಗೆ 5.00 ಗಂಟೆಯವರೆಗೆ ರೈಲುಗಳಲ್ಲಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಕಡ್ಡಾಯವಾಗಿ ಬಂದ್ ಮಾಡುವಂತೆ ಎಲ್ಲಾ ವಲಯಗಳಿಗೆ ಸೂಚನೆ ನೀಡಿದೆ.

ಅ. 26 ರಂದು ಹೊರಡಿಸಲಾದ ಸುತ್ತೋಲೆಯಲ್ಲಿ, ನಿಗದಿಪಡಿಸಿದ ಅವಧಿಯಲ್ಲಿ ಸಿಬ್ಬಂದಿಗಳು ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ವಿಚ್ ಆಫ್ ಮಾಡಲು
ವಿಫಲವಾಗಿರುವುದನ್ನು ಉಲ್ಲೇಖಿಸಿರುವ ಮಂಡಳಿಯು ಈ ನಿಯಮದಲ್ಲಿ ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಆಕಸ್ಮಿಕ ತಪಾಸಣೆಗೆ ಸೂಚನೆ
ರಾತ್ರಿ ವೇಳೆ ಚಾರ್ಜಿಂಗ್ ಪಾಯಿಂಟ್‌ಗಳನ್ನು ಬಂದ್ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಮತ್ತು ಮೇಲ್ವಿಚಾರಕರು ಸಿದ್ಧತೆ ನಡೆಸಿದ್ದು, ಆಕಸ್ಮಿಕ ತಪಾಸಣೆ  ನಡೆಸಲು ನಿರ್ದೇಶಿಸಲಾಗಿದೆ. ಸಿಬ್ಬಂದಿಗೆ ಸೂಕ್ತ ತರಬೇತಿ ಹಾಗೂ ಆಪ್ತಸಮಾಲೋಚನೆ ನಡೆಸಲು ಮಂಡಳಿಯು ತಿಳಿಸಿದ್ದು, ಈ ಸುರಕ್ಷತಾ ಕ್ರಮದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸದಂತೆ ಎಚ್ಚರಿಕೆ ನೀಡಿದೆ.

ರೈಲುಗಳಲ್ಲಿ ರಾತ್ರಿ ವೇಳೆ ಚಾರ್ಜಿಂಗ್ ನಿಷೇಧಿಸುವ ಈ ನಿಯಮ ಹೊಸದೇನಲ್ಲ. ಜೂನ್ 19, 2014 ರಂದು ಬೆಂಗಳೂರು – ಹರ್ ಸಾಹಿಬ್ ನಾಂದೇಡ್‌ ಎಕ್ಸ್‌ಪ್ರೆಸ್‌ನಲ್ಲಿ ಸಂಭವಿಸಿದ ಅಗ್ನಿ ಅನಾಹುತದ ನಂತರ ರೈಲ್ವೆ ಸುರಕ್ಷತಾ ಆಯುಕ್ತರ ಶಿಫಾರಸಿನಂತೆ ನಿಯಮವನ್ನು ಜಾರಿಗೆ ತರಲಾಗಿತ್ತು. ತದನಂತರ ಮಾರ್ಚ್ 2021 ರಲ್ಲಿಯೂ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿತ್ತು.

ಇತ್ತೀಚಿನ ಪವರ್ ಬ್ಯಾಂಕ್ ಸ್ಫೋಟದ ಘಟನೆಯಿಂದಾಗಿ ನಿಯಮವನ್ನು ಮತ್ತೊಮ್ಮೆ ನೆನಪಿಸಲಾಗಿದ್ದು, ರಾತ್ರಿ 11.00 ರಿಂದ ಬೆಳಗ್ಗೆ 5.00 ರವರೆಗೆ ಚಾರ್ಜಿಂಗ್‌ ಸೌಲಭ್ಯ ಲಭ್ಯವಿರುವುದಿಲ್ಲ. ಆದ್ದರಿಂದ ಪ್ರಯಾಣಿಕರು ರಾತ್ರಿ ಪ್ರಯಾಣ ಬೆಳೆಸುವ ಮೊದಲು ತಮ್ಮ ಮೊಬೈಲ್ ಹಾಗೂ ಇತರ ವಿದ್ಯುನ್ಮಾನ ಸಾಧನಗಳನ್ನು ಚಾರ್ಜ್ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ.

Vishwa News 24

Recent Posts

ಪುತ್ತೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ – vishwanews24

ಪುತ್ತೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಪುತ್ತೂರು: ಅಪ್ರಾಪ್ತ ಬಾಲಕಿಯನ್ನು…

11 minutes ago

ಅ.31ರಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದಿಂದ ಸ್ನೇಹ ಸಮಾವೇಶ : ಪ್ರಶಸ್ತಿ ಪ್ರದಾನ ಸಮಾರಂಭ – vishwanews24

ಅ.31ರಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದಿಂದ ಸ್ನೇಹ ಸಮಾವೇಶ; ಪ್ರಶಸ್ತಿ ಪ್ರದಾನ ಸಮಾರಂಭ ಉಡುಪಿ : ಉಡುಪಿ ಜಿಲ್ಲಾ ಮುಸ್ಲಿಮ್…

18 minutes ago

ಆಡಳಿತ ಬದಲಾವಣೆ ಉದ್ದೇಶದಿಂದ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗುವವರಿಗೆ ಸರಕಾರಿ ಉದ್ಯೋಗ ನಿರಾಕರಣೆ: ಉತ್ತರ ಪ್ರದೇಶ ಸರಕಾರದಿಂದ ನಿರ್ಧಾರ – vishwanews24

ಆಡಳಿತ ಬದಲಾವಣೆ ಉದ್ದೇಶದಿಂದ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗುವವರಿಗೆ ಸರಕಾರಿ ಉದ್ಯೋಗ ನಿರಾಕರಣೆ: ಉತ್ತರ ಪ್ರದೇಶ ಸರಕಾರದಿಂದ ನಿರ್ಧಾರ ಲಖನೌ: ಆಡಳಿತ…

2 hours ago

ಕಾಸರಗೋಡು : ಲಾಡ್ಜ್‌ನಲ್ಲಿ ಎಂಡಿಎಂಎ ಪತ್ತೆ: ಇಬ್ಬರ ಬಂಧನ – vishwanews24

ಕಾಸರಗೋಡು : ಲಾಡ್ಜ್‌ನಲ್ಲಿ ಎಂಡಿಎಂಎ ಪತ್ತೆ: ಇಬ್ಬರ ಬಂಧನ ಕಾಸರಗೋಡು: ಲಾಡ್ಜ್ ನಲ್ಲಿ ಎಂಡಿಎಂಎ ಮಾದಕ ದ್ರವ್ಯದೊಂದಿಗೆ ಯುವತಿ ಮತ್ತು…

2 hours ago

ಕೊಂಕಣ ರೈಲ್ವೆ ವಿಲೀನ: ಮಹಾರಾಷ್ಟ್ರ ಸಿಎಂ ಭೇಟಿಯಾದ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ – vishwanews24

ಕೊಂಕಣ ರೈಲ್ವೆ ವಿಲೀನ: ಮಹಾರಾಷ್ಟ್ರ ಸಿಎಂ ಭೇಟಿಯಾದ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಉಡುಪಿ: ಕೊಂಕಣ ರೈಲ್ವೆಯನ್ನು ಭಾರತೀಯ…

2 hours ago

ಕಾರ್ಕಳ: ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ : ನ. 1ರಂದು ಅಟ್ಟಳಿಗೆ ಮುಹೂರ್ತ – vishwanews24 https://wp.me/p9KQap-v49

ಕಾರ್ಕಳ: ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ : ನ. 1ರಂದು ಅಟ್ಟಳಿಗೆ ಮುಹೂರ್ತ ಸ್ವಾಮಿಯ ಸನ್ನಿಧಿಯಲ್ಲಿ ಬೆಳಗ್ಗೆ 7.30ರಿಂದ ಪಾದಾಭಿಷೇಕ..…

3 hours ago