ಕೊಣಾಜೆ: ಬೋಳಿಯಾರ್ ಸಮೀಪದ ಕುರ್ನಾಡು ಪೆಟ್ರೋಲ್ ಪಂಪ್ ಬಳಿ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಬಂದ ಪಿಕಪ್ ಢಿಕ್ಕಿ ಹೊಡೆದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರ ಗಾಯಗೊಂಡಿದ್ದ ಸಹಸವಾರ ಮೃತಪಟ್ಟ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ಮೃತಪಟ್ಟ ಯುವಕರನ್ನು ಕಿನ್ಯ ಅರೆಬಿನಗರದ ಮಹಮ್ಮದ್ ಅರ್ಫಾಝ್ (22) ಹಾಗೂ ಕಿನ್ಯ ಉಕ್ಕುಡ ನಿವಾಸಿ ಜುನೈದ್ (23) ಎಂದು ಗುರುತಿಸಲಾಗಿದೆ.
ಸೋಮವಾರ ಸಂಜೆ ಬೋಳಿಯಾರ್ ಕಡೆಯಿಂದ ಮುಡಿಪು ಕಡೆಗೆ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬಂದ ಪಿಕಪ್ ವಾಹನವು ಕುರ್ನಾಡು ಪಡೀಲ್ ಪೆಟ್ರೋಲ್ ಪಂಪ್ ಬಳಿ ಢಿಕ್ಕಿ ಹೊಡೆದಿದೆ. ಮೃತ ಜುನೈದ್ ಕಲ್ಲಾಪು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದರೆ, ಅರ್ಫಾಝ್ ಮುಂಬೈಯಲ್ಲಿ ಕೆಲಸದಲ್ಲಿದ್ದು ಇತ್ತೀಚಿಗೆ ಊರಿಗೆ ಬಂದಿದ್ದ ಎನ್ನಲಾಗಿದೆ.
ಅಪಘಾತ ನಡೆದ ತಕ್ಷಣವೇ ಪಿಕಪ್ ಚಾಲಕ ಡೋರ್ ತೆಗೆದು ಪರಾರಿಯಾಗಿದ್ದು, ಘಟನೆಯ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮಂಗಳೂರು: ಯಕ್ಷಗಾನದಲ್ಲಿ ಧಾರ್ಮಿಕ ಸೌಹಾರ್ದದ ಅನಾವರಣ; ಶ್ರೀದೇವಿಯ ವೇಷದಲ್ಲಿ ಕಂಗೊಳಿಸಿದ ಮುಸ್ಲಿಂ ಯುವತಿ ಮಂಗಳೂರು: ಕರಾವಳಿಯ ಗಂಡುಕಲೆ ಯಕ್ಷಗಾನದಲ್ಲಿ ಧಾರ್ಮಿಕ…
ಟೈಗರ್ ಶ್ರಾಫ್ ಕಾರಿನ ಮೇಲೆ ದಾಳಿ ಪ್ರಕರಣ : ಇಬ್ಬರು ಮಹಿಳೆಯರು ಸೇರಿ ಮತ್ತೆ ನಾಲ್ವರ ಬಂಧನ ಮುಂಬೈ: ಬಾಲಿವುಡ್…
ಬೆಂಗಳೂರು – ಮುಂಬೈ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ದಿನಾಂಕ ನಿಗದಿ ..! ಬೆಂಗಳೂರು:ಬೆಂಗಳೂರು ಮತ್ತು ಮುಂಬೈ…
ಮಂಗಳೂರು: ಬೋಳಿಯಾರ್ ಅಪಘಾತ ಪ್ರಕರಣಕ್ಕೆ ತಿರುವು ; ಪಿಕಪ್ ಚಾಲಕನ ವಿರುದ್ಧ ಕೊಲೆ ಪ್ರಕರಣ ದಾಖಲು ಮಂಗಳೂರು: ಸೋಮವಾರ ಬೋಳಿಯಾರ್…
ಬಂಟ್ವಾಳ : ವೇಷ ಧರಿಸಿ ಸಂಗ್ರಹಿಸಿದ ಹಣದಿಂದ ಅಸ್ವಸ್ಥ ಯುವಕನಿಗೆ ನೆರವು ; ಪುಟಾಣಿಗಳ ಮಾನವೀಯ ಕಾರ್ಯಕ್ಕೆ ಭಾರೀ ಮೆಚ್ಚುಗೆ…
ಮಕ್ಕಳ ಕೈಗೆ ಮೋಟಾರು ವಾಹನಗಳನ್ನು ನೀಡುವುದಕ್ಕೆ ಅದು ಆಟಿಕೆಯಲ್ಲ , ಸಾರ್ವಜನಿಕ ರಸ್ತೆಗಳು ಆಟದ ಮೈದಾನವಲ್ಲ : ಕರ್ನಾಟಕ ಹೈಕೋರ್ಟ್…