ಕೊರೋನಾ ವೈರಸ್ ಪೀಡಿತರು ನಮ್ಮ ವೈರಿಗಳಲ್ಲ ಬಂಧುಗಳು – ಕೊರೋನಾ ಸೋಂಕಿತನ ಮನೆಗೆ ಆಹಾರದ ಕಿಟ್ ವಿತರಿಸಿ ಹೇಳಿಕೆ: ಬೆಳಪು ದೇವಿಪ್ರಸಾದ್ ಶೆಟ್ಟಿ

ಉಡುಪಿ

ಕಾರೋನ ವೈರಸ್ ಪೀಡಿತರು ನಮ್ಮ ವೈರಿಗಳಲ್ಲ ಬಂಧುಗಳು : ಬೆಳಪು ದೇವಿಪ್ರಸಾದ್ ಶೆಟ್ಟಿ

ಕಾಪು:   ಉಚ್ಚಿಲ ಪೊಲ್ಯ ರಸ್ತೆಯ ಕೊರೊನ ಪೊಸಿಟಿವ್ ಇಂದ ಸಂಕಷ್ಟಕ್ಕೆ ಒಳಗಾದ ಸೀಲ್ ಡೌನ್ ಪ್ರದೇಶದಲ್ಲಿ ಬೆಳಪು ದೇವಿಪ್ರಸಾದ್ ಶೆಟ್ಟಿ ಯವರು ಅವರಿಗೆ ಬೇಕಾಗುವ ಆಹಾರ ದಿನಸಿ ಸಾಮಗ್ರಿ ನೀಡಿ 24 ಗಂಟೆ ಕಳೆದರು ಪೊಸಿಟಿವ್ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ವಿಫಲರಾದ ಜಿಲ್ಲಾ ಆಡಳಿತದ ಕ್ರಮ ವನ್ನು ತೀವ್ರವಾಗಿ ಖಂಡಿಸಿದರು. ಆ ಪರಿಸರದ ಜನರು ಆತಂಕಕ್ಕೆ ಒಳಗಾಗಿದು ಅವರಿಗೆ ಎಲ್ಲರಿಗೂ ಧೈರ್ಯ ತುಂಬಿ, ಕಾಪು ತಾಸಿಲ್ದಾರರಿಗೆ, ಜಿಲ್ಲಾ ಆರೋಗ್ಯ ಅಧಿಕಾರಿ ಯವರಿಗೆ, ಪಡುಬಿದ್ರಿ ಆರೋಗ್ಯ ಅಧಿಕಾರಿ ಯವರಿಗೆ ಮಾಹಿತಿ ನೀಡಿ ಅಂಬುಲನ್ಸ್ ನ ವ್ಯವಸ್ಥೆ ಮಾಡಿ ಪೊಸಿಟಿವ್ ಪೀಡಿತರಿಗೆ ಆಸ್ಪತ್ರೆಗೆ ಸ್ಥಳಾಂತರಿಸಿದಿರು. ಈ ಸಂದರ್ಭದಲ್ಲಿ ಕರೋನ ಪೊಸಿಟಿವ್ ಲಕ್ಷಣಗಳು ಕಂಡು ಬಂದವರು ನಮ್ಮ ವೈರಿಗಳು ಅಲ್ಲ ಬಂಧುಗಳ ರೀತಿಯಲ್ಲಿ ಆರೈಕೆ ಮಾಡಬೇಕುಯೆಂದು ಸಾರ್ವಜನಿಕರಲ್ಲಿ ವಿನಂತಿಸಿದರು ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ಶೇಕಬ್ಬ, ಉಚ್ಚಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಶರ್ಮಿಳಾ , ಉಫಾದಕ್ಷೆ ಇಂದಿರಾ,ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.