ಕೊಲೆ ಕೇಸ್ ನಲ್ಲಿ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಡಲ್ ವುಡ್ ನ ಸಿನಿಮಾ‌ ನಿರ್ದೇಶಕ ಅರೆಸ್ಟ್ – vishwanews24

Featured, ರಾಜ್ಯ ನ್ಯೂಸ್

ಕೊಲೆ ಕೇಸ್ ನಲ್ಲಿ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಡಲ್ ವುಡ್ ನ ಸಿನಿಮಾ‌ ನಿರ್ದೇಶಕ ಅರೆಸ್ಟ್

ಬೆಂಗಳೂರು: ಕೊಲೆ ಕೇಸ್‌ನಲ್ಲಿ 20 ವರ್ಷಗಳಿಂದ ತಲೆ ಮರೆಸಿಕೊಂಡು, ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ  ಸಿನಿಮಾ ನಿರ್ದೇಶಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಿಸಿಬಿ ಪೊಲೀಸರು ಗಜೇಂದ್ರ ಅಲಿಯಾಸ್ ಗಜನನ್ನು ಅರೆಸ್ಟ್‌ ಮಾಡಿದ್ದಾರೆ. ಗಜೇಂದ್ರ ಕನ್ನಡ ಚಿತ್ರರಂಗದಲ್ಲಿ  ಮಾತ್ರವಲ್ಲದೆ ಕಾಲಿವುಡ್ ಇಂಡಸ್ಟ್ರಿಯಲ್ಲೂ ಒಂದೆರಡು ಸಿನಿಮಾ ಮಾಡಿದ್ದ. 2004ರಲ್ಲಿ ಬೆಂಗಳೂರಿನ ವಿಲ್ಸನ್ ಗಾರ್ಡನ್​ನಲ್ಲಿ ರೌಡಿ ಶೀಟರ್ ಕೊತ್ತರವಿ ಕೊಲೆಯಾಗಿತ್ತು. ಈ ಕೊಲೆ ಕೇಸ್​​ನಲ್ಲಿ ಚಂದ್ರಪ್ಪ, ಅಲ್ಯೂಮಿನಿಯಂ ಬಾಬು ಜೊತೆಗೆ ನಿರ್ದೇಶಕ ಗಜೇಂದ್ರ ಎಂಟನೇ ಆರೋಪಿಯಾಗಿದ್ದ.

ಕುಣಿತ ಕೆಂಡದಲ್ಲಿ ಬಿದ್ದು ವ್ಯಕ್ತಿ ಸಾವು – vishwanews24

2004ರಲ್ಲಿ ಬೆಂಗಳೂರಿನ ವಿಲ್ಸನ್ ಗಾರ್ಡನ್​ನಲ್ಲಿ ರೌಡಿ ಶೀಟರ್ ಕೊತ್ತರವಿ ಕೊಲೆಯಾಗಿತ್ತು. ಕೊಲೆ ಕೇಸ್​ನಲ್ಲಿ ಬಂಧಿತನಾಗಿದ್ದ ಗಜೇಂದ್ರಗೆ ಕೋರ್ಟ್ 1 ವರ್ಷ ಶಿಕ್ಷೆ ಕೂಡ ವಿಧಿಸಿತ್ತು. ಒಂದು ವರ್ಷ ಜೈಲುವಾಸ ಅನುಭವಿಸಿದ ಗಜೇಂದ್ರ ಬಳಿಕ ಜಾಮೀನು ಪಡೆದು ಹೊರಬಂದಿದ್ದ.

ಜಾಮೀನು ಪಡೆದ ಬಳಿಕ ಹಲವು ವರ್ಷಗಳಿಂದ ಕೋರ್ಟ್​ಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. 20 ವರ್ಷಗಳಿಂದ ಪೊಲೀಸರ ಕೈಗೆ ಸಿಕ್ಕಿಲ್ಲ. ಈ ಹಿಂದೆ ಪುಟಾಣಿ ಪವರ್ ಹಾಗೂ ರುದ್ರ ಎಂಬ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ. ಅಷ್ಟೇ ಅಲ್ಲದೇ ತಮಿಳಿನಲ್ಲಿ ಒಂದೆರಡು ಸಿನಿಮಾ ಮಾಡಿರೋದಾಗಿ ಹೇಳಿಕೊಂಡಿದ್ದಾನೆ. ಸದ್ಯ ಸಿಸಿಬಿ ಪೊಲೀಸರು ಇದೀಗ ಗಜೇಂದ್ರನನ್ನು ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ.

ಮಂಗಳೂರು: ಜುಲೈ 22ರಿಂದ ಅಬುಧಾಬಿಗೆ ಹೆಚ್ಚುವರಿ ವಿಮಾನಗಳ ಹಾರಾಟ ಆರಂಭ – vishwanews24

Leave a Reply