ಕೊಲ್ಕತ್ತಾ: ಆಕ್ರೊಪೊಲಿಸ್ ಮಾಲ್ನಲ್ಲಿ ಅಗ್ನಿ ಅವಘಡ ; ಕಟ್ಟಡದೊಳಗೆ ಹಲವರು ಸಿಲುಕಿರುವ ಶಂಕೆ – vishwanews24
ಕೊಲ್ಕತ್ತಾ: ಆಕ್ರೊಪೊಲಿಸ್ ಮಾಲ್ನಲ್ಲಿ ಅಗ್ನಿ ಅವಘಡ… ಕಟ್ಟಡದೊಳಗೆ ಹಲವರು ಸಿಲುಕಿರುವ ಶಂಕೆ
ಕೊಲ್ಕತ್ತಾ: ಕೋಲ್ಕತ್ತಾದ ಆಕ್ರೊಪೊಲಿಸ್ ಮಾಲ್ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಶುಕ್ರವಾರ ಸಂಭವಿಸಿದ್ದು ಕಟ್ಟಡದೊಳಗೆ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಬೆಂಕಿ ಅವಘಡ ಸಂಭವಿಸಿದ ಸುದ್ದಿ ತಿಳಿಯುತ್ತಲೇ 10ಕ್ಕೂ ಅಧಿಕ ಅಗ್ನಿಶಾಮಕ ವಾಹನ ದೌಡಾಯಿಸಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ.
ಕಸ್ಬಾ ಪ್ರದೇಶದಲ್ಲಿರುವ ಶಾಪಿಂಗ್ ಮಾಲ್ ನ ಮೂರನೇ ಮಹಡಿಯಲ್ಲಿ ಮಧ್ಯಾಹ್ನ 12:15 ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿರುವುದಾಗಿ ಹೇಳಲಾಗಿದೆ.
ಕಾಂಗ್ರೆಸ್ ಯಾರ ವಿರುದ್ಧವೂ ದ್ವೇಷ ರಾಜಕಾರಣ ಮಾಡುವುದಿಲ್ಲ: ಡಿಕೆಶಿ – vishwanews24
ಮಾಹಿತಿಯ ಪ್ರಕಾರ ಕಟ್ಟಡದೊಳಗೆ ಹಲವು ಕಚೇರಿಗಳಿದ್ದು ಸಾಕಷ್ಟು ಮಂದಿ ಈ ಕಟ್ಟಡದಲ್ಲಿ ಇದ್ದರು ಎನ್ನಲಾಗಿದ್ದು ಅಗ್ನಿ ಅವಘಡ ಸಂಭವಿಸುತಿದ್ದಂತೆ ಕಟ್ಟಡದ ಒಳಗಿದ್ದ ಜನರು ಹೊರಕ್ಕೆ ಓಡಿ ಬಂದಿದ್ದು ಇನ್ನು ಕೆಲವರು ಕಟ್ಟಡದ ಒಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಅಗ್ನಿಶಾಮಕ ಸಿಬಂದಿಗಳು ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದು ಈ ನಡುವೆ ಕಟ್ಟಡದ ಒಳಗೆ ಸಿಲುಕಿರುವವರ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಇದುವರೆಗೂ ಯಾವುದೇ ಸಾವು ನೋವು ಸಂಭವಿಸಿದ ಕುರಿತು ವರದಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕುವೈತ್ ಅಗ್ನಿ ದುರಂತ: ಮೃತಪಟ್ಟ 45 ಭಾರತೀಯರ ಮೃತದೇಹಗಳು ಕೇರಳಕ್ಕೆ – vishwanews24
