ಕೊಲ್ಲೂರು: ಜೆಡಿಎಸ್ ಕಾರ್ಯಕರ್ತರಿಂದ ನಿಖಿಲ್ ಗೆಲುವಿಗಾಗಿ ಕೊಲ್ಲೂರಿನಲ್ಲಿ ವಿಶೇಷ ಪೂಜೆ – vishwanews24
ಕೊಲ್ಲೂರು: ಜೆಡಿಎಸ್ ಕಾರ್ಯಕರ್ತರಿಂದ ನಿಖಿಲ್ ಗೆಲುವಿಗಾಗಿ ಕೊಲ್ಲೂರಿನಲ್ಲಿ ವಿಶೇಷ ಪೂಜೆ
ಕೊಲ್ಲೂರು: ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಕಣ ರಂಗೇರುತ್ತಿದೆ. ಅದರಲ್ಲೂ ಕೂಡ ಚೆನ್ನಪಟ್ಟಣ ವಿಧಾನಸಭಾ ಉಪಚುನಾವಣೆ ರಾಜ್ಯದ ಗಮನ ಸೆಳೆದಿದೆ. ಈ ಹಿನ್ನೆಲೆಯಲ್ಲಿ ಉಡುಪಿಯ ಜೆಡಿಎಸ್ ಕಾರ್ಯಕರ್ತರು ಚನ್ನಪಟ್ಟಣ ಎನ್.ಡಿ.ಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಕೊಲ್ಲೂರಿನಲ್ಲಿ ವಿಶೇಷ ಪ್ರಾರ್ಥನೆ ನಡೆಸಿದರು.ಜೆ.ಡಿ.ಎಸ್ ಜಿಲ್ಲಾ ಕಾರ್ಯಾದಕ್ಷ ವಾಸುದೇವ ರಾವ್ ನೇತೃತ್ವದಲ್ಲಿ ಪೂಜೆ ನಡೆಯಿತು.
ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಶತಾಯಗತಾಯ ಗೆಲ್ಲಬೇಕು ಎಂದು ಸಾಮೂಹಿಕವಾಗಿ ಕಾರ್ಯಕರ್ತರು ಪ್ರಾರ್ಥಿಸಿದರು. ಈ ಸಂದರ್ಭ ಜೆ.ಡಿ.ಎಸ್ ಮುಖಂಡರಾದ ಶ್ರೀಕಾಂತ್ ಅಡಿಗ ಕೊಲ್ಲೂರು, ಸಂದೇಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
