ಕೊಲ್ಲೂರು ಶ್ರೀ‌ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ‌ ನೀಡಿದ ಕನ್ನಡ ಚಿತ್ರರಂಗದ ಹಿರಿಯ ನಟಿ ಲಕ್ಷ್ಮೀ – Vishwanews24

Featured, ಉಡುಪಿ

ಕುಂದಾಪುರ : ಕೊಲ್ಲೂರು ಶ್ರೀ‌ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ‌ ನೀಡಿದ ಕನ್ನಡ ಚಿತ್ರರಂಗದ ಹಿರಿಯ ನಟಿ ಲಕ್ಷ್ಮೀ – Vishwanews24

ಈ ದೇವಾಲಯಕ್ಕೆ ಬಂದಾಗ ನನ್ನ ತವರು ಮನೆಗೆ ಬಂದ ಹಾಗೆ ಆಗುತ್ತದೆ : ನಟಿ ಲಕ್ಷ್ಮೀ

ಕುಂದಾಪುರ : ಕನ್ನಡ ಚಿತ್ರರಂಗದ ಹಿರಿಯ ನಟಿ ಲಕ್ಷ್ಮೀ ಬುಧವಾರದಂದು ಕೊಲ್ಲೂರು ಶ್ರೀ‌ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ‌ ನೀಡಿದ್ದು, ದೇವಿಯ ದರ್ಶನ ಪಡೆದರು.

ನಂತರ ಮಾತನಾಡಿದ ಅವರು, “ಈ ದೇವಾಲಯಕ್ಕೆ ಬಂದಾಗ ನನ್ನ ತವರು ಮನೆಗೆ ಬಂದ ಹಾಗೆ ಆಗುತ್ತದೆ. ನನ್ನ ತಾಯಿಯನ್ನು ನೋಡಿದೆ. ಈ ದೇವಸ್ಥಾನದ ಶುದ್ದತೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಬೇರೆ ಬೇರೆ ಕಡೆಗಳಿಂದ ಬರುವ ಭಕ್ತರಿಗೆ ಕಿಂಚಿತ್ತೂ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಿರುವುದು ಬಹಳ ಸಂತಸವಾಗಿದೆ” ಎಂದು ಹೇಳಿದರು.

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಕಲಾವಿದೆಯರಲ್ಲೊಬ್ಬರಾದ ಲಕ್ಷ್ಮೀ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಚಿತ್ರರಂಗದ ಅನೇಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಕಾರಣದಿಂದಾಗಿ ಪಂಚಭಾಷಾ ತಾರೆ ಎಂದೂ ಕರೆಯಿಸಿಕೊಳ್ಳುತ್ತಾರೆ.

ನಳಿನ್‌ ಕುಮಾರ್‌ ರಾಹುಲ್‌ ಗಾಂಧಿ ಡ್ರಗ್‌ ಪೆಡ್ಲರ್‌ ಎಂದು ಹೇಳಿರುವುದು ಸರಿಯಲ್ಲ :  ಬಿಎಸ್‌ವೈ – Vishwanews24