ಕೋಟ : ಲ್ಯಾಪ್ಟಾಪ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ ಸಿಡಿಲು ಬಡಿದು ಸಾಫ್ಟವೇರ್ ಇಂಜಿನಿಯರ್ ದುರ್ಮರಣ -Vishwanews24
ಕೋಟ : ಲ್ಯಾಪ್ಟಾಪ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ ಸಿಡಿಲು ಬಡಿದು ಸಾಫ್ಟವೇರ್ ಇಂಜಿನಿಯರ್ ದುರ್ಮರಣ
ಉಡುಪಿ : ನಿನ್ನೆ ರಾತ್ರಿ ಸಿಡಿಲು ಬಡಿದು ಸಾಫ್ಟವೇರ್ ಇಂಜಿನಿಯರ್ ಒಬ್ಬ ಸಾವನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕೋಟದ ವಂಡಾರಿನ ಬೋರ್ಡ್ ಕಲ್ಲಿನಲ್ಲಿ ನಿನ್ನೆ ಸಂಭವಿಸಿದೆ.
ಮೃತ ಯುವಕನನ್ನು ಸಾಫ್ಟ್ ವೇರ್ ಇಂಜಿನಿಯರ್ ಚೇತನ್ (24) ಎಂದು ಗುರುತಿಸಲಾಗಿದ್ದು, ಮನೆಯೊಳಗಡೆ ಲ್ಯಾಪ್ಟಾಪ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ ಸಿಡಿಲು ಹೊಡೆದಿದೆ. ಸಿಡಿಲಿನ ಹೊಡೆತಕ್ಕೆ ಗಂಭೀರವಾಗಿ ಅಸ್ವಸ್ಥತಗೊಂಡಿದ್ದು ಚೇತನ್ ನ್ನು ತತ್ ಕ್ಷಣ ಬ್ರಹ್ಮಾವರದ ಖಾಸಗಿ ಆಸ್ಪತ್ರೆ ಗೆ ಕರೆದೊಯ್ಯಲಾಯಿತು. ಆದರೆ ಅಷ್ಟರೊಳಗೆ ಚೇತನ್ ಮೃತಪಟ್ಟಿದ್ದರು.
ಚೇತನ ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಯ ಉದ್ಯೋಗಿಯಾಗಿದ್ದು ಕೊರೊನಾ ಲಾಕ್ ಡೌನ್ ನಂತರ ಹಲವು ತಿಂಗಳಿಂದ ಮನೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದ. ಈತನದ್ದು ತೀರಾ ಬಡತನದ ಕುಟುಂಬವಾಗಿದ್ದು ಸಾಕಷ್ಟು ಕಷ್ಟಪಟ್ಟು ಇಂಜಿನಿಯರಿಂಗ್ ಪದವಿ ಮುಗಿಸಿದ್ದ ಹಾಗೂ ಮನೆಗೆ ಆಧಾರವಾಗಿದ್ದ. ಮೃತನು ತಂದೆ,ತಾಯಿ, ಸಹೋದರಿಯನ್ನು ಅಗಲಿದ್ದಾನೆ.
