ಕೋರ್ಟ್ ಆವರಣದಲ್ಲೇ ಸಾಹಿತಿ ಪ್ರೊ.ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ -Vishwanews24
ಸಾಹಿತಿ ಪ್ರೊ.ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ -Vishwanews24
ಬೆಂಗಳೂರು : ಹಿಂದೂ ಧರ್ಮದ ಬಗ್ಗೆ ಮಾತನಾಡ್ತೀಯಾ.? ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡ್ತೀಯಾ ಎಂಬುದಾಗಿ ಸಾಹಿತಿ ಪ್ರೊ.ಭಗವಾನ್ ಮುಖಕ್ಕೆ ಇಂದು ಕೋರ್ಟ್ ಆವರಣದಲ್ಲೇ ವಕೀಲೆ ಮೀರಾ ರಾಘವೇಂದ್ರ ಮಸಿ ಬಳಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹಿಂದೂ ಧರ್ಮವೆಂಬುದೇ ಇಲ್ಲ. ಹಿಂದೂ ಧರ್ಮ ಅವಮಾನಕರ. ಮಾನ, ಮರ್ಯಾದೆ ಇರೋರು ಹಿಂದೂ ಶಬ್ದ ಬಳಸಬಾರದು ಎಂಬುದಾಗಿ ಹೇಳಿಕೆ ನೀಡಿದ್ದಂತ ಸಾಹಿತಿ ಪ್ರೊ.ಭಗವಾನ್ ವಿರುದ್ಧ ವಕೀಲೆ ಮೀರಾ ರಾಘವೇಂದ್ರ ಎಂಬುವರು ಕ್ರಿಮಿನಲ್ ಕೇಸ್ ದಾಖಲಿಸಿದ್ದರು. ಈ ಸಂಬಂಧ ಕೋರ್ಟ್ ಪ್ರೊ.ಭಗವಾನ್ ಗೆ ವಿಚಾರಣೆಗೆ ಹಾಜರಾಗಲು ಸಮನ್ಸ್ ಕೂಡ ನೀಡಿತ್ತು.
ಏರೋ ಇಂಡಿಯಾ-2021: ಯುದ್ಧ ವಿಮಾನ ತೇಜಸ್ ನಲ್ಲಿ ಸಂಸದ ತೇಜಸ್ವಿ ಸೂರ್ಯ ಹಾರಾಟ -Vishwanews24
ಇಂದು ಬೆಂಗಳೂರಿನ ಎಸಿಎಂಎಂ ನ್ಯಾಯಾಲಯಕ್ಕೆ ಸಾಹಿತಿ ಪ್ರೊ.ಭಗವಾನ್ ಆಗಮಿಸಿದಂತ ಸಂದರ್ಭದಲ್ಲಿ, ವಕೀಲೆ ಮೀರಾ ರಾಘವೇಂದ್ರ ಆಕ್ರೋಶ ಭರಿತರಾಗಿ ಸಾಹಿತಿ ಪ್ರೊ.ಭಗವಾನ್ ಮುಖಕ್ಕೆ ಮಸಿ ಬಳಿದಿದ್ದಾರೆ. ಈ ಮೂಲಕ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತ ಪಡಿಸಿರುವಂತ ಘಟನೆ ನಡೆದಿದೆ,.
https://twitter.com/MeeraRaghavendr/status/1357233534646112259?ref_src=twsrc%5Etfw%7Ctwcamp%5Etweetembed%7Ctwterm%5E1357233534646112259%7Ctwgr%5E%7Ctwcon%5Es1_&ref_url=https%3A%2F%2Fpublictv.in%2Fbhagwan-attacked-with-ink-at-a-court-complex-meera-raghavendra-hindu-religion%2F
