Featured

ಕೋಲಾರ: ಇಬ್ಬರನ್ನೂ ಯಾರೋ ಹೊಡೆದಿರುವ ಅನುಮಾನ ; ನವಜೋಡಿ ಸಾವಿನ ಬಗ್ಗೆ ಕುಟುಂಬಸ್ಥರ ಸಂಶಯ – vishwanews24

ಪ್ರೀತಿಸಿ ಮದುವೆಯಾಗಿದ್ದ ನವಜೋಡಿ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡು ಸಾವು ಪ್ರಕರಣ..

ಇದರಲ್ಲಿ ಮೂರನೇ ವ್ಯಕ್ತಿ ಇದ್ದಾರೆ ,ಇಬ್ಬರನ್ನೂ ಯಾರೋ ಹೊಡೆದಿರುವ ಅನುಮಾನ..

ನವಜೋಡಿ ಸಾವಿನ ಬಗ್ಗೆ ಕುಟುಂಬಸ್ಥರ ಸಂಶಯ

ಕೋಲಾರ: ಪರಸ್ಪರ ಪ್ರೀತಿಸಿ ಬುಧವಾರ (ಆ.7) ಬೆಳಗ್ಗೆ ಮದುವೆಯಾದ ನವಜೋಡಿ, ಅದೇ ದಿನ ಮಧ್ಯಾಹ್ನ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ ಪರಿಣಾಮ ನವವಧು ಸಾವನ್ನಪ್ಪಿದ್ದಳು. ಗುರುವಾರ (ಇಂದು) ಚಿಕಿತ್ಸೆ ಫಲಕಾರಿಯಾಗದೇ ವರನೂ ಸಾವನ್ನಪ್ಪಿರುವ ಘಟನೆ ನಡೆದಿದೆ.

ಆಂಧ್ರದ ಬೈನಪಲ್ಲಿ ಗ್ರಾಮದ ಲಿಖಿತಾಶ್ರೀ (20) ಬುಧವಾರ ಕೋಲಾರದಲ್ಲಿ  ಮೃತಪಟ್ಟಿದ್ದಳು. ಚಂಬರಸನಹಳ್ಳಿಯ ನವೀನ್ (28) ಗುರುವಾರ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಬುಧವಾರ ದಾಖಲಾಗಿದ್ದ ನವೀನ್‌ ನನ್ನ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರಾತ್ರಿ ರವಾನಿಸಲಾಗಿತ್ತು. ಗುರುವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ನವೀನ್ ಮತ್ತು ಲಿಖಿತಾಶ್ರೀ ಜೋಡಿ ಪರಸ್ಪರ ಒಪ್ಪಿ ಮದುವೆಯಾಗಿದ್ದರು. ಬುಧವಾರ ಮುಂಜಾನೆ ಹಿರಿಯರ ಸಮ್ಮುಖದಲ್ಲಿ ಚಂಬರಸನಹಳ್ಳಿಯಲ್ಲಿ ಮದುವೆಯಾದರು. ಮದುವೆ ಕೆಲಗಂಟೆಗಳ ನಂತರ ನವಜೋಡಿ ರೂಮಿಗೆ ಹೋಗಿದ್ದಾರೆ. ಬಳಿಕ ಮಚ್ಚಿನಿಂದ ಪರಸ್ಪರರ ಮೇಲೆ ಹಲ್ಲೆ ನಡೆಸಿಕೊಂಡಿದ್ದಾರೆ. ಮಾರಾಮಾರಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಕೆಜಿಎಫ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಲಿಖಿತಾಶ್ರೀ ಸಾವನ್ನಪ್ಪಿದ್ದಳು. ನವೀನ್ ಸ್ಥಿತಿ ಚಿಂತಾಜನಕವಾಗಿದ್ದರಿಂದ ಆತನನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ವರನೂ ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಬುಧವಾರ ಅಂಡರ್‌ಸನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇಬ್ಬರೂ ಪ್ರೀತಿಸಿ ಎರಡೂ ಕುಟುಂಬದವರನ್ನು ಒಪ್ಪಿಸಿ ಮದುವೆಯಾಗಿದ್ದರು. ಬೆಳಗಿನ ಜಾವ ಇಬ್ಬರಿಗೂ ಮದುವೆಯಾಗಿತ್ತು. ಮದುವೆ ನಂತರ ಇಬ್ಬರೂ ಮನೆಯ ಕೊಠಡಿಗೆ ಹೋಗಿದ್ದರು. ಕೆಲ ಹೊತ್ತಿನಲ್ಲೇ ಕೊಠಡಿಯಲ್ಲಿದ್ದ ನವಜೋಡಿ ಮಚ್ಚಿನಿಂದ ಹೊಡೆದಾಡಿಕೊಂಡಿದ್ದಾರೆ. ಇಬ್ಬರ ಗಲಾಟೆಗೆ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದರು.

ಮೂರನೇ ವ್ಯಕ್ತಿ ಇದರಲ್ಲಿ ಇದ್ದಾರೆ:
ಇಬ್ಬರ ಸಾವಿನ ಕುರಿತು ಪ್ರತಿಕ್ರಿಯೆ ನೀಡಿರುವ ಮೃತ ಲಿಖಿತಶ್ರೀ ಕುಟುಂಬಸ್ಥರು, ನವಜೋಡಿಗಳು ಇಬ್ಬರೂ ಅನ್ಯೂನ್ಯವಾಗಿದ್ದವರು, ಪ್ರೀತಿಸಿ ಮದುವೆಯಾಗಿದ್ದವರು. ಇಬ್ಬರು ಹೊಡರದಾಡಿಕೊಂಡಿರುವುದೇ ಅನುಮಾನ. ಯಾರೋ ಮೂರನೇ ವ್ಯಕ್ತಿ ಇದರಲ್ಲಿ ಇದ್ದಾರೆ. ನಾವೂ ಮದುವೆಗೆ ಹೋಗಿದ್ದೆವು, ಇಬ್ಬರೂ ತುಂಬಾ ಖುಷಿಯಿಂದಲೇ ಇದ್ದರು. ಇಬ್ಬರನ್ನೂ ಯಾರೋ ಹೊಡೆದಿರುವ ಅನುಮಾನ ಇದೆ ಅಂತಾ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.

Vishwa News 24

Recent Posts

ಎಸ್‌ಟಿಪಿಯನ್ನು ಮೂಳೂರಿನಿಂದ ಬೆಳಪು ಪ್ರದೇಶಕ್ಕೆ ಸ್ಥಳಾಂತರ ಮಾಡಿದರೆ ಕಾಪು ಪುರಸಭೆಗೆ ಸಂಪೂರ್ಣ ಸ್ವಾಗತ : ದೇವಿಪ್ರಸಾದ್ ಶೆಟ್ಟಿ – vishwanews24

ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…

18 hours ago

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ – vishwanews24

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…

20 hours ago

ಬಿಜೆಪಿ ನಡೆಸಿರುವ ಅಪವಿತ್ರ ಮೈತ್ರಿ ಇತಿಹಾಸವನ್ನು ದೇಶ ಮರೆತಿಲ್ಲ : ಬಿ.ಕೆ.ಹರಿಪ್ರಸಾದ್ – vishwanews24

ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…

20 hours ago

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ – vishwanews24

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…

21 hours ago

ವಿವಾಹಿತ ಮಹಿಳೆ  ಜತೆ ಲಿವ್ ಇನ್ ರಿಲೇಶನ್‌ ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  – vishwanews24

ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…

21 hours ago

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ – vishwanews24

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…

21 hours ago