ಕೋವಿಡ್ 19 ನಿಯಮ ಪಾಲನೆ ಮಾಡುವ ಆದೇಶದೊಂದಿಗೆ ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡಿದ ತಮಿಳುನಾಡು ಸರ್ಕಾರ -Vishwanews24
ಕೋವಿಡ್ 19 ನಿಯಮ ಪಾಲನೆ ಮಾಡುವ ಆದೇಶದೊಂದಿಗೆ ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡಿದ ತಮಿಳುನಾಡು ಸರ್ಕಾರ -Vishwanews24
ಚೆನ್ನೈ : ಜಲ್ಲಿಕಟ್ಟು ಕ್ರೀಡೆಗೆ ತಮಿಳುನಾಡು ಸರ್ಕಾರ ಅನುಮತಿ ನೀಡಿದೆಯಾದರೂ, ಕರೋನ ವೈರಸ್ ಹರಡುವುದನ್ನು ತಡೆಯಲು ವಿವಿಧ ನಿಯಮಗಳು, ಮತ್ತು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳ ಪಾಲನೆ ಮಾಡುವ ಆದೇಶದೊಂದಿಗೆ ಜಲ್ಲಿಕಟ್ಟು ಕಾರ್ಯಕ್ರಮವನ್ನು ನಡೆಸಲು ತಮಿಳುನಾಡು ಸರ್ಕಾರ ಅನುಮತಿ ನೀಡಿದೆ.
ರಾಜ್ಯ ಸರ್ಕಾರ ನೀಡಿರುವ ಮಾರ್ಗಸೂಚಿಗಳು ಇಲ್ಲಿವೆ…
ಒಂದು ಕಾರ್ಯಕ್ರಮಕ್ಕೆ 300ಕ್ಕಿಂತ ಹೆಚ್ಚು ಹೋರಿ ಟಾಮರ್ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ.
150ಕ್ಕೂ ಹೆಚ್ಚು ಮಂದಿ ಯನ್ನು ಯರೂತು ವಿದಮ್ ಕಾರ್ಯಕ್ರಮಗಳಲ್ಲಿ ಅನುಮತಿಸಬಾರದು.
ಒಂದು ಬಯಲು ಪ್ರದೇಶದ ಒಟ್ಟು ಸಾಮರ್ಥ್ಯದ ಶೇ.50ರಷ್ಟು ಮಾತ್ರ ಪ್ರೇಕ್ಷಕರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಬೇಕು. ಎಲ್ಲಾ ಪ್ರೇಕ್ಷಕರು ಥರ್ಮಲ್ ಸ್ಕ್ಯಾನಿಂಗ್ ಗೆ ಒಳಗಾಗಬೇಕು
ಹೋರಿ ಮಾಲೀಕರು ಮತ್ತು ಟ್ಯಾಮರುಗಳು Covid-19 ಪರೀಕ್ಷೆಗೆ ಒಳಪಡಬೇಕು
ಫೇಸ್ ಮಾಸ್ಕ್ ಗಳು ಪ್ರತಿಯೊಬ್ಬರಿಗೂ ಕಡ್ಡಾಯ.
