ಕೋಸ್ಟಲ್‍ವುಡ್‍ನಲ್ಲಿ ಏಪ್ರೀಲ್ 19 ರಂದು ಸದ್ದು ಮಾಡಲಿದೆ ಹೈಬಜೆಟ್ ಗೋಲ್ ಮಾಲ್ ತುಳು ಸಿನಿಮಾ.
ಉಡುಪಿ: ಇದುವರೆಗೂ ನೋಡಿರುವ ಎಲ್ಲಾ ತುಳು ಸಿನಿಮಾಗಿಂತಲೂ ಹೆಚ್ಚಿನ ಕೌತುಕತೆ, ಮತ್ತು ನಕ್ಕು ನಗಿಸುವ ಹೈ ಬಜೆಟ್ ಸಿನಿಮಾ ಗೋಲ್‍ಮಾಲ್ ಏಪ್ರೀಲ್ 19 ರಂದು ತೆರೆ ಮೇಲೆ ಪ್ರದರ್ಶನ ಗೊಳ್ಳಲಿದೆ. ಈಗಾಗಲೇ ಎರಡು ಟ್ರೀಸರ್ ಬಿಡುಗಡೆಯಾಗಿದ್ದು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಮಂಜುನಾಥ್ ನಾಯಕ್ ಕಾರ್ಕಳ ಮತ್ತು ಅಕ್ಷಯ್ ಪ್ರಭು ಅಜೆಕಾರ್ ನಿರ್ಮಾಣದಲ್ಲಿ ರಮಾನಂದ ನಾಯಕ್ ನಿರ್ದೇಶನದಲ್ಲಿ ತಯಾರದ ಈ ಸಿನಿಮಾ ತುಳು ಸಿನಿ ರಸಿಕರಲ್ಲಿ ಮತ್ತಷ್ಟು ಕೂತುಹಲ ಹೆಚ್ಚಿಸಿದೆ.
ಈ ಚಿತ್ರದಲ್ಲಿ ಪೃಥ್ವಿ ಅಂಬರ್ ನಾಯಕ ನಟನಾಗಿ, ಶ್ರೇಯಾ ಅಂಚನ್ ನಾಯಕಿಯಾಗಿ ಅಭಿನಯಿಸಿದ್ದಾರೆ.ಇನ್ನುಳಿದಂತೆ ನವೀನ್ ಡಿ ಪಡೀಲ್,ಅರವಿಂದ ಬೋಳಾರ್. ಭೋಜರಾಜ್ ವಾಮಂಜೂರು, ಸತೀಶ್ ಬಂದಲೆ, ಸುನೀಲ್ ನೆಲ್ಲಿಗುಡ್ಡೆ ಸುಂದರ್ ರೈ ಮಂದಾರ ತಂಡವೆ ಇದೆ.
ಕನ್ನಡ ಖ್ಯಾತ ಚಿತ್ರನಟ ಸಾಯಿಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇದು ಮತ್ತಷ್ಟು ಸಿನಿಮಾದಲ್ಲಿ ಕೌತುಕತರ ಮೂಡಿಸಿದೆ.

