ಮಂಗಳೂರು : ಶಾಲಾ ಪಠ್ಯ ಪುಸ್ತಕದಲ್ಲಿ ಕ್ರಿಶ್ಚಿಯನ್ ಮತ್ತು ಇಸ್ಲಾಂ ಪಠ್ಯ ಸೇರಿಸಿಕೊಳ್ಳುವ ಔಚಿತ್ಯವೇನಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.
ಪುರಭವನದಲ್ಲಿ ವಿಹಿಂಪ ಮತ್ತು ಬಜರಂಗ ದಳ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಪುಸ್ತಕ, ವಿದ್ಯಾರ್ಥಿವೇತನ ಮತ್ತು ಗಾಲಿಕುರ್ಚಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಳಿನ್, “ಭಾರತ ಶ್ರೀಮಂತ ಪರಂಪರೆಯ ದೇಶ. ಇಲ್ಲಿನ ಮಕ್ಕಳು ರಾಮಾಯಣ ಮತ್ತು ಮಹಾಭಾರತದಂತಹ ಮಹಾಗ್ರಂಥಗಳಲ್ಲಿರುವ ನೈತಿಕತೆ ಅಳವಡಿಸಿಕೊಂಡವರು. ಆದರೆ ಈಗ ಈ ಗ್ರಂಥಗಳಿಗೂ ಕೋಮುಬಣ್ಣ ಹಚ್ಚಲಾಗಿದೆ. ಬಜರಂಗ ದಳ ಮತ್ತು ಇತರ ಹಿಂದೂ ಸಂಘಟನೆಗಳನ್ನು ಟೀಕಿಸುವ ಮುಂಚೆ ಈ ಸಂಘಟನೆಗಳ ಸದಸ್ಯರ ಬಲಿದಾನ ನೆನಪಿಸಿಕೊಳ್ಳಬೇಕು” ಎಂದರು.
“ಕ್ರಿಶ್ಚಿಯನ್ ಮತ್ತು ಇಸ್ಲಾಂ ವಿಷಯ ಶಾಲಾ ಪಠ್ಯಗಳಲ್ಲಿ ಸೇರ್ಪಡೆಗೊಂಡಿರುವಾಗಲೂ ಇಲ್ಲಿ ಯಾವುದೇ ಪ್ರತಿಭಟನೆ ನಡೆಯುವುದಿಲ್ಲ. ಅನುದಾನರಹಿತ ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸಿದರೆ ಶಿಕ್ಷಣ ಇಲಾಖೆ ತಡ ಮಾಡದೆ ಅಂತಹ ಶಾಲೆಗಳಿಗೆ ನೊಟೀಸು ಜಾರಿ ಮಾಡುತ್ತದೆ. ಇತರ ಸಮುದಾಯದ ಪಠ್ಯ ಸೇರಿಸುವುದಿದ್ದರೆ ಈಗ ಯಾವುದು ಕೋಮುವಾದ ಎಂದು ಇಲಾಖೆಯೇ ಹೇಳಬೇಕು” ಎಂದು ವಿಹಿಂಪ ಪ್ರಾಂತೀಯ ಅಧ್ಯಕ್ಷ ಎಂ ಬಿ ಪುರಾಣಿಕ್ ಹೇಳಿದರು.
ಮಕ್ಕಳು ಎಲ್ಲ ಧರ್ಮಗಳ ಮೂಲತತ್ವ ತಿಳಿದುಕೊಳ್ಳಬೇಕು. ಆದರೆ, ಮಕ್ಕಳು ಚರ್ಚುಗಳಿಗೆ ಅಥವಾ ಮಸೀದಿಗಳಿಗೆ ಹೋಗಬೇಕೆನ್ನುವ ನಿರ್ದೇಶನ ಮಾತ್ರ ಅಸಂಗತ ಎಂದವರು ಹೇಳಿದರು.
ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…
ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…
ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…
ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…
ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…
180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…