Featured

ಕ್ರೈಸ್ತ ಗ್ರೊಟ್ಟೋ ದ್ವಂಸ ಮಾಡಿ ಕೇಸರಿ ದ್ವಜ ಹಾರಿಸಿದ ಪ್ರಕರಣ : ಸ್ಥಳೀಯರಿಗೆ ಖಡಕ್ ಎಚ್ಚರಿಕೆ ನೀಡಿದ ಬಂಟ್ವಾಳ ಪೊಲೀಸ್‌ ಸರ್ಕಲ್‌ ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್ (ವಿಡಿಯೊ)

ವಿಟ್ಲ: ಕೊಳ್ನಾಡು ಗ್ರಾಮದ ಕುಂಟ್ರಕಳ ಎಂಬಲ್ಲಿ ಕ್ರೈಸ್ತ ಗ್ರೊಟ್ಟೋ ದ್ವಂಸ ಮಾಡಿ ಕಟ್ಟೆ ನಿರ್ಮಿಸಿ ಕೇಸರಿ ದ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯರಿಗೆ ಬಂಟ್ವಾಳ ಪೊಲೀಸ್‌ ಸರ್ಕಲ್‌ ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್ ಖಡಕ್ ಎಚ್ಚರಿಕೆ ನೀಡಿದ ವಿಡಿಯೊ ತುಣುಕುಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎರಡು ಸಮುದಾಯದ ಸ್ಥಳೀಯರಿಗೆ ಸೌಹಾರ್ದದ ಪಾಠ ಹೇಳಿದ ಇನ್‌ಸ್ಪೆಕ್ಟರ್, ‘ನಿಮ್ಮ ಎರಡೂ ಸಮುದಾಯದ ಕಡೆಯಲ್ಲಿಯೂ ಇರೋದು ಧಾರ್ಮಿಕತೆ ಅಲ್ಲ, ಧಾರ್ಮಿಕ ವೈಷಮ್ಯ. ನೀವು ನಂಬುವ ಕೊರಗಜ್ಜನಿಗೆ ಎಷ್ಟು ಗೌರವ ಇದೆಯೋ, ಅಷ್ಟೇ ಗೌರವ ಕ್ರೈಸ್ತರ ಗ್ರೊಟ್ಟೋಗೂ ಇದೆ, ಮುಸ್ಲಿಮರ ಮಸೀದಿಗೂ ಇದೆ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ನಾವು ಖಾಕಿ ಧರಿಸಿದವರು. ನಮ್ಮ ಕಣ್ಣಿಗೆ ಎಲ್ಲರೂ ಸಮಾನ. ನಮಗೆ ಎಲ್ಲವೂ ಒಂದೇ. ಸಮಾಜದಲ್ಲಿ ಎಲ್ಲದಕ್ಕೂ ಒಂದು ರೀತಿ ನೀತಿ ಇದೆ. ಕಾನೂನಿನ ಪ್ರಕಾರ ನಡೆದುಕೊಳ್ಳುವುದನ್ನು ಮೊದಲು ಕಲಿಯಿರಿ. ಅತಿಕ್ರಮವಾಗಿ ಸರ್ಕಾರಿ ಜಾಗದಲ್ಲಿ ಕಟ್ಟುವುದು ಮತ್ತು ಕೆಡಹುವುದು ಎರಡು ಕೂಡಾ ತಪ್ಪೇ. ಈ ಬಗ್ಗೆ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು. ಎರಡು ಕಡೆಯವರೂ ಅನವಶ್ಯಕವಾಗಿ ಗೊಂದಲಗಳನ್ನು ಹುಟ್ಟುಹಾಕುತ್ತಿದ್ದೀರಿ’ ಎಂದು ತಿಳಿ ಹೇಳಿದರು.

ಬಳಿಕ ಎರಡು ಗುಂಪುಗಳಿಗೂ ಎಚ್ಚರಿಕೆ ನೀಡಿದ ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್, ‘ಯಾರು ಕೂಡಾ ವಿಷಬೀಜ ಬಿತ್ತುವ ಕೆಲಸ ಮಾಡಬೇಡಿ. ಎರಡೂ ಕಡೆಯ ಅಹವಾಲು ಸ್ವೀಕರಿಸಿದ್ದೇವೆ. ಕಾನೂನನ್ನು ಗೌರವಿಸಿ, ಪಾಲಿಸಿ. ಇಲ್ಲಿನ ಸಮಸ್ಯೆಯನ್ನು ಸರ್ಕಾರ ಬಗೆಹರಿಸುತ್ತದೆ’ ಎಂದು ಭರವಸೆ ನೀಡಿದ್ದಾರೆ. ‘ಇವೆಲ್ಲವನ್ನೂ ಮೀರಿ ಇಲ್ಲಿ ಸಮಸ್ಯೆ, ಗೊಂದಲ ಮಾಡ್ತೀವಿ ಅನ್ನೋದಾದ್ರೆ ನಿಮ್ಮ ತಾಕತ್ತು ಎಷ್ಟಿದೆ ನೋಡ್ವಾ. ನಮ್ಮ ತಾಕತ್ತೂ ನೋಡುವ!’ ಎಂಬ ಎಚ್ಚರಿಕೆಯ ಮಾತುಗಳನ್ನು ರವಾನಿಸಿದರು.

‘ಕಾನೂನಿಗೆ ಒಂದು ಮಾನ್ಯತೆ ಇದೆ. ಅದನ್ನು ಕಾಪಾಡಿಕೊಳ್ಳುವುದು ಕರ್ತವ್ಯ. ಸುಮ್ ಸುಮ್ನೆ ಪ್ರಕರಣವನ್ನು ಎಳೆದು ಹಾಕುವುದು ಎಂದರೆ ಇದು. ಪ್ರಮಾಣಿಕತೆಯಿಂದ ಕಷ್ಟಪಟ್ಟು ದುಡಿದುಕೊಂಡು ಇರುತ್ತಿದ್ದರೆ ಇದೆಲ್ಲ ಬರುತ್ತಿರಲಿಲ್ಲ’ ಎಂದು ಬುದ್ಧಿವಾದ ಹೇಳಿದ ಅವರು ‘ಇದು ಸರ್ಕಾರದ ಜಾಗ , ಇಲ್ಲಿ ಪೊಲೀಸರನ್ನು ಹಾಗೂ ಸರ್ಕಾರಿ ಅಧಿಕಾರಿಗಳನ್ನು ನೇಮಿಸಲಾಗಿದೆ . ಇದನ್ನು ಮೀರಿ ಸ್ಥಳದಲ್ಲಿ ಅಥವಾ ಊರಿನಲ್ಲಿ ಯಾರಾದರೂ ಕಿತಾಪತಿ ಮಾಡಿದರೆ ಜೋಕೆ. ನಮ್ಮ ಪೊಲೀಸ್ ಪವರ್ ತೋರಿಸಬೇಕಾಗುತ್ತದೆ ’ ಎಂದು ಕಟು ಎಚ್ಚರಿಕೆ ನೀಡಿದ್ದಾರೆ.

ನಾಗರಾಜ್ ಅವರ ಕಾರ್ಯವೈಖರಿಗೆ ಇದೀಗ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

 

 

 

 

 

 

Vishwa News 24

Recent Posts

ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನ ನಮ್ಮ ಸರಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ – vishwanews24

ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಗಳೂರು: ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಪ್ರಾಮಾಣಿಕವಾಗಿ…

4 hours ago

ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು – vishwanews24

ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು ಮೈಸೂರು: ಒಣಗಿದ ದಾಸವಾಳ ಹೂನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ…

4 hours ago

ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ – vishwanews24

ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉಡುಪಿ : ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ…

4 hours ago

ಅಡುಗೆ ಅನಿಲದ ಅಭಾವ – ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ – vishwanews24

ಅಡುಗೆ ಅನಿಲದ ಅಭಾವ - ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಬೆಂಗಳೂರು : ಗಲ್ಫ್…

5 hours ago

ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ – ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ : ಪೊಲೀಸ್ ಆಯುಕ್ತ – vishwanews24

ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…

5 hours ago

ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ – vishwanews24

ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…

5 hours ago