ಕ್ವಾರಂಟೈನ್ ಕಠಿಣಗೊಳಿಸಿದ ರಾಜ್ಯ ಸರಕಾರ : ಕೈಯಲ್ಲಿ ಮುದ್ರೆಯಿದ್ರೆ ದೇವಸ್ಥಾನಕ್ಕಿಲ್ಲ ಪ್ರವೇಶ : vishwanews24

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದೆ. ಅದ್ರಲ್ಲೂ ಹೊರ ರಾಜ್ಯಗಳಿಂದ ಬರುವವರಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕಠಿಣ ಕ್ವಾರಂಟೈನ್ ಆದೇಶ ಹೊರಡಿಸಿದ್ದು, ಕೈಯಲ್ಲಿ ಕ್ವಾರಂಟೈನ್ ಸೀಲ್ ಹೊಂದಿದ್ದರೇ ಅಂತವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧ ಹೇರಿದೆ.

ಹೊರ ರಾಜ್ಯದವರಿಂದಲೇ ಕೊರೋನಾ ಸೋಂಕು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಕ್ವಾರಂಟೈನ್ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದೆ. ಅದ್ರಲ್ಲೂ ಅತೀ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರದಿಂದ ಬರುವವರಿಗೆ 7 ದಿನ ಸಾಂಸ್ಥಿಕ ಹಾಗೂ 7 ದಿನ ಹೋಮ್ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿತ್ತು.

ಇದೀಗ ಕ್ವಾರಂಟೈನ್ ಅವಧಿ ಮುಗಿಯುತ್ತಲೇ ಕೊರೊನಾ ಸೋಂಕು ವ್ಯಾಪಿಸುತ್ತಿರೋ ಹಿನ್ನೆಲೆಯ ಕ್ವಾರಂಟೈನ್ ಅವಧಿಯನ್ನು 21 ದಿನಗಳಿಗೆ ವಿಸ್ತರಿಸಲಾಗಿದೆ. ಹೀಗಾಗಿ 7 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ 14 ದಿನ ಹೋಮ್ ಕ್ವಾರಂಟೈನ್ ಒಳಪಡಿಸಲು ಸರಕಾರ ಆದೇಶಿಸಿದೆ, ವಸತಿ ಸಂಕೀರ್ಣಗಳ ವಸತಿ ಕಲ್ಯಾಣ ಸಮಿತಿ ಸದಸ್ಯರು ಸಹ ಈ ರೀತಿಯ ಉಲ್ಲಂಘನೆಗಳು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ಕ್ವಾರಂಟೈನ್ ಅವಧಿಯಲ್ಲಿ ಹೊರ ರಾಜ್ಯದವರು ಮನೆಗಳಲ್ಲಿಯೇ ಇರಬೇಕು ಎಂದು ಸೂಚಿಸಲಾಗಿದೆ.

ಇನ್ನು ಹೊರ ರಾಜ್ಯಗಳಿಂದ ಬರುವವರಿಗೆ ಮುಂಬೈಗೆ ಕ್ವಾರಂಟೈನ್ ಮುದ್ರೆಯನ್ನು ಕಡ್ಡಾಯವಾಗಿ ಜಿಲ್ಲಾಡಳಿತಗಳು ಹಾಕಲೇ ಬೇಕು. ಕ್ವಾರಂಟೈನ್ ಸೀಲ್ ಹಾಕಿಸಿಕೊಂಡವರು ಕಡ್ಡಾಯವಾಗಿ ಕ್ವಾರಂಟೈನ್ ಆದೇಶವನ್ನು ಪಾಲನೆ ಮಾಡಲೇಬೇಕು. ವಾಣಿಜ್ಯ ಮಹಿಳೆ, ಮಾಲ್, ಕಚೇರಿ, ಅಂಗಡಿ, ಹೋಟೆಲ್ ಹಾಗೂ ದೇವಸ್ಥಾನಗಳನ್ನು ಪ್ರವೇಶಿಸುವುದಕ್ಕೆ ನಿಷೇಧ ಹೇರಲಾಗಿದೆ. ಅಲ್ಲದೇ ಪ್ರವೇಶ ದ್ವಾರದಲ್ಲಿಯೇ ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ ತಪಾಸಣೆ ನಡೆಸಬೇಕು. ಕೈಯಲ್ಲಿ ಕ್ವಾರಂಟೈನ್ ಸೀಲ್ ಇದ್ದೂ ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಕೂಡಲೇ ಪೊಲೀಸ್ ಠಾಣೆಯ ಸಹಾಯವಾಣಿ 100 ಕರೆ ಮಾಡುವಂತೆ ಸೂಚನೆಯನ್ನು ನೀಡಲಾಗಿದೆ.

Vishwa News 24

Recent Posts

ಮೃತ ಮಹಿಳೆಯರ ಬೆತ್ತಲೆ ಫೋಟೋ ತೆಗೆದು ವಿಕೃತಿ : ವರದಿ ಕೇಳಿದ ರಾಜ್ಯ ಮಹಿಳಾ ಆಯೋಗ – vishwanews24

ಮೃತ ಮಹಿಳೆಯರ ಬೆತ್ತಲೆ ಫೋಟೋ ತೆಗೆದು ವಿಕೃತಿ : ವರದಿ ಕೇಳಿದ ರಾಜ್ಯ ಮಹಿಳಾ ಆಯೋಗ ಬೆಂಗಳೂರು: ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ…

1 day ago

ಉಡುಪಿ: ಕೇಂದ್ರ ಸರಕಾರದ ಜನವಿರೋಧಿ ನೀತಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ – vishwanews24

ಉಡುಪಿ: ಕೇಂದ್ರ ಸರಕಾರದ ಜನವಿರೋಧಿ ನೀತಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ ಉಡುಪಿ: ಕೇಂದ್ರ ಸರಕಾರದ ಜನವಿರೋಧಿ…

1 day ago

ಮಂಗಳೂರು: ಗಾಯಗೊಂಡ ತಾಯಿ, ಮಗುವನ್ನು ಆಸ್ಪತ್ರೆಗೆ ಸಾಗಿಸಿದ ಬಸ್ ಸಿಬ್ಬಂದಿ; ಮಾನವೀಯತೆಗೆ ಶ್ಲಾಘನೆ – vishwanews24

ಮಂಗಳೂರು: ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದ ತಾಯಿ-ಮಗುವಿನ ರಕ್ಷಣೆಗೆ ಧಾವಿಸಿದ ಸಿಟಿ ಬಸ್ ಸಿಬ್ಬಂದಿ.. ಪ್ರಯಾಣಿಕರನ್ನು ಬಸ್ಸಿನಿಂದ ಇಳಿಸಿ ಗಾಯಗೊಂಡ ತಾಯಿ,…

1 day ago

ಮಂಗಳೂರು – ಸೂರತ್ ವಿಶೇಷ ರೈಲು ಇನ್ನು ಮುಂದೆ ವಾರಕ್ಕೆ ಎರಡು ದಿನ ನಿರಂತರ ಸಂಚಾರ – vishwanews24

ಮಂಗಳೂರು- ಸೂರತ್ ವಿಶೇಷ ರೈಲು ಇನ್ನು ಮುಂದೆ ವಾರಕ್ಕೆ ಎರಡು ದಿನ ನಿರಂತರ ಸಂಚಾರ ಉಡುಪಿ: ಮಂಗಳೂರು- ಸೂರತ್ ನಡುವೆ…

1 day ago

ಕೊಂಕಣ ರೈಲ್ವೇ: ಟಿಕೆಟ್ ತಪಾಸಣೆ ಕಾರ್ಯಾಚರಣೆ; 2025-26ರಲ್ಲಿ 27.68 ಕೋ.ರೂ. ದಂಡ ವಸೂಲಿ – vishwanews24

ಕೊಂಕಣ ರೈಲ್ವೇ: ಟಿಕೆಟ್ ತಪಾಸಣೆ ಕಾರ್ಯಾಚರಣೆ; 2025-26ರಲ್ಲಿ 27.68 ಕೋ.ರೂ. ದಂಡ ವಸೂಲಿ ಉಡುಪಿ: ಟಿಕೆಟ್ ಇಲ್ಲದೆ ಹಾಗೂ ಅನಧಿಕೃತವಾಗಿ…

2 days ago

ಯುವಕ ನಾಪತ್ತೆ : ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು – vishwanews24

ಯುವಕ ನಾಪತ್ತೆ; ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಂಗಳೂರು: 23 ವರ್ಷದ ಯುವಕನೊಬ್ಬ ನಾಪತ್ತೆಯಾಗಿರುವ ಕುರಿತು ಕೊಣಾಜೆ ಪೊಲೀಸ್…

2 days ago