Featured

ಕ್ಷೇತ್ರದಾತ್ಯಂತ ಮೊಳಗಿತು “ಕಾಪುವಿಗೆ ಈ ಬಾರಿ ಸೊರಕೆ” ಅಭಿಯಾನ:ಇದು ಸೊರಕೆಯ ಕಡೇ ಚುನಾವಣೆ- ಗೆಲುವಿಗೆ ಮತದಾರ ಹಾಕುವನೆ ಮಣೆ..??

ಕ್ಷೇತ್ರದಾತ್ಯಂತ ಮೊಳಗಿತು “ಕಾಪುವಿಗೆ ಈ ಬಾರಿ ಸೊರಕೆ” ಅಭಿಯಾನ:ಇದು ಸೊರಕೆಯ ಕಡೇ ಚುನಾವಣೆ- ಗೆಲುವಿಗೆ ಮತದಾರ ಹಾಕುವನೆ ಮಣೆ..??

ಪೊಲಿಟಿಕಲ್ ವರದಿ: ವಿಶ್ವನ್ಯೂಸ್24

ಕಾಪು ಮೂರು ಭಾಗದಲ್ಲಿ ಹಂಚಿಹೋಗಿರುವ ವಿಧಾನಸಭಾ ಕ್ಷೇತ್ರ ಕರಾವಳಿ-ಮಧ್ಯಭಾಗ-ಪೂರ್ವ ಮೂರು ಕಡೆಯಲ್ಲೂ ಕೂಡ ಎರಡು ಪಕ್ಷಗಳು ತನ್ನದೆ ಆದ ಛಾಪು ಹಾಗೂ ಕ್ಯಾಪಸಿಟಿ ಹೊಂದಿರುವ ಕಾರ್ಯಕರ್ತರ ಪಡೆಯಿರುವ ಕ್ಷೇತ್ರ ಸುಲಭದಲ್ಲಿ ಜಯ ಸಿಗುವುದೆಂದು ನಂಬಿ ಕೂತವರಿಗೆ ಕೈಗೆ ಸಿಕ್ಕಿದ್ದು ಚೆಂಬು ಮಾತ್ರ ಎಂಬುದು ಸ್ಪಷ್ಟ.
ಇನ್ನು ಭಾಸ್ಕರ್ ಶೆಟ್ಟಿ, ವಸಂತ ಸಾಲಿಯಾನ್ ಬಿಟ್ಟರೆ ಉಳಿದರ‍್ಯಾರಿಗೂ ಸುಲಭವಾದ ಜಯವಾದ ಹಿನ್ನಲೆ ಕಾಪುವಿನಲ್ಲಿ ತೀರ ಕಡಿಮೆ ಹಾಗಾಗಿ ಕಾಪು ಈಸ್ ಎ ವೆರಿ ಡೇಂಜರಸ್.

ಸರಿ ಮುಂದಿನ ಸರದಿ ಈ ಸಲದ ಚುನಾವಣೆ ಕೂಡ ಎರಡು ಪಕ್ಷಗಳಿಗೆ ಸುಲಭವಿಲ್ಲ ಆದರೇ ಕಳೆದ ಐದು ವರ್ಷದಿಂದ ಬಿಜೆಪಿ ಶಾಸಕರ ದುರ್ನಡತೆಯಿಂದಾಗಿ ಮಾತ್ರ ಕರ್ಯಕರ್ತರು ಸೇರಿದಂತೆ ಬಿಜೆಪಿ ಪಾರ್ಟಿಯೊಳಗಿನ ಪದಾಧಿಕಾರಿಗಳು ಕೂಡ ಅಸಮಧಾನ ಬಹಿರಂಗವಾಗಿಯೇ ಹೊರಹಾಕಿರುವ ಪರಿಣಾಮವಾಗಿ ಸಿಟ್ಟಿಂಗ್ ಶಾಸಕ ಗೆಲ್ಲುವುದು ಕಷ್ಟ ಎಂಬುದು ಸರ್ವೆ ವರದಿಯ ಮಾಹಿತಿ.

ಇನ್ನು ವಿನಯ ಕುಮಾರ್ ಸೊರಕೆ ಕಾಪುವಿನ ಅಭಿವೃದ್ದಿಯಲ್ಲಿ ಹೊಸ ಸ್ಪರ್ಶ ನೀಡಿದ ಶಾಸಕ ಪುರಸಭೆ,ತಾಲೂಕು,ರಸ್ತೆ,ಕುಡಿಯುವ ನೀರು,ದಾರಿ ದೀಪ,ವಸತಿ ಯೋಜನೆ ಇವೆಲ್ಲವೂ ಕೂಡ ಸೊರಕೆಯ ಕೊಡುಗೆ ಈ ಬಾರಿ ಕೂಡ ಕಾಪು ಕಾಂಗ್ರೇಸ್‌ಗೆ ವಿನಯ್ ಕುಮಾರ್ ಸೊರಕೆ ಅಭ್ಯರ್ಥಿ ಕಳೆದ ಚುನಾವಣೆಯಲ್ಲಿ ಹಿಂದುತ್ವದ ಅಲೆಯಲ್ಲಿ ಕೊಚ್ಚಿ ಹೋಗಿದ್ದರೂ ಈ ಸಲ ಜನ ಮತ್ತೆ ಸೊರಕೆ ಕಾಪುವಿಗೆ ಅಗತ್ಯ ಮತ್ತು ಅನಿವಾರ್ಯವೆಂಬ ಮಾತು ಜೋರಾಗಿಯೆ ಕೇಳಿ ಬರುತ್ತಿದೆ. ಕಾರಣವಿಷ್ಟೆ ವ್ಯಕ್ತಿ ಮತ್ತು ವ್ಯಕ್ತಿತ್ವ ಸೋತ ಮರುದಿನವೇ ಕ್ಷೇತ್ರ ಬಿಡದೆ ಜನ ಸೇವೆ ನಿರಂತರ ಮಾಡಿಕೊಂಡು ಬಂದಿರುವ ಕಾರಣಕ್ಕಾಗಿ ಕಾಪುವಿನ ಜನತೆ ಸೊರಕೆಯನ್ನು ಇಷ್ಟಪಡುವಂತಾಗಿದೆ.

ಸದ್ಯ ಸೊರಕೆ ಇದು ನನ್ನ ಕಡೇ ಚುನಾವಣೆ ಎಂದು ಘೋಷಿಸಿಯಾಗಿದೆ ಅದರಲ್ಲೂ ವಿಶೇಷವಾಗಿ ನನ್ನನ್ನು ಸೋಲಿಸಿ ನನ್ನನ್ನು ರಾಜಕೀಯ ನಿವೃತ್ತಿ ಮಾಡಬೇಡಿ ಎಂದು ಕಾಪುವಿನ ಜನತೆಯಲ್ಲಿ ಅಂಗಲಾಚಿ ನೀಡಿರುವ ಹೇಳಿಕೆ ವೆರಿ ಎಮೋಷನಲ್.

ಸೊರಕೆಯನ್ನು ಸೋಲಿಸಲು ಈಗಾಗಲೆ ಕಾಪು ಬಿಜೆಪಿ ರಾಜನೀಲ್ಲದ ಆದೇಶದಂತೆ ಹೋರಾಟ ನಡೆಸುತ್ತಿದೆ ಆದರೇ ಇದ್ಯಾವುದಕ್ಕೂ ಕ್ಯಾರೇ ಅನ್ನದ ಸೊರಕೆ ತನ್ನ ಪಾಡಿಗೆ ಕ್ಷೇತ್ರದಾದ್ಯಂತ ಟೊಂಕ ಕಟ್ಟಿ ಗೆಲುವಿಗಾಗಿ ಹರಸಾಹಸ ಪಡುತ್ತಿದ್ದಾರೆ. ಅದರ ಜತೆಯಲ್ಲಿಇನ್ನೊಂದು ಕಡೆ ಕಾರ್ಯಕರ್ತರು ಮಾತ್ರವಲ್ಲದೆ ಜನ ಸಾಮಾನ್ಯರು ಕೂಡ ಕಾಪುವಿಗೆ ಇ ಬಾರಿ ಸೊರಕೆ ಎಂಬ ಅಭಿಯಾನ ಜಪ ಆರಂಭವಾಗಿದೆ.

ಕಾಪುವಿಲ್ಲಿ ಜಾತಿ ಧರ್ಮದ ರಾಜಕೀಯ ಮಾಡದ ವ್ಯಕ್ತಿತ್ವ ಇದ್ದರೆ ಅದು ವಿನಯ್ ಕುಮಾರ್ ಸೊರಕೆಯದ್ದು ಎಂದು ಜನಸಾಮಾನ್ಯರು ಹೇಳುವ ಮಾತು ಸೋಲಿಗೆ ಬೇರೆ ಕಾರಣವಿರಬಹುದೇ ಹೊರತು ಸೊರಕೆಯ ವ್ಯಕ್ತಿತ್ವ ಖಂಡಿತವಲ್ಲ ಎಂಬುದು ಸ್ಪಷ್ಟವಾದ ವಿಚಾರ ಆದರೆ ಕಾಪುವಿನ ಮತದಾರರು ಮೂರ್ಖರಲ್ಲ ನಂಬಿ ಬಂದವರನ್ನು ಕೈ ಬಿಟ್ಟ ವ್ಯಕ್ತಿತ್ವ ಖಂಡಿತವಿಲ್ಲ ಹಾಗಾಗಿ ಸೊರಕೆಯ ಗೆಲುವಿನ ಹಿಂದೆ ಈ ಸಲ ಕಾಪುವಿನ ಜನತೆ ನಿಲ್ಲುವರೆಂಬ ನಂಬಿಕೆ ದೃಡವಾಗಿಯೇ ಇದೆ. ಅದರ ಜತೆಗೆ ಕೊಟ್ಟ ಮಾತನ್ನು ಉಳಿಸಿಕೊಡುವಷ್ಟು ನಂಬಿಕೆಗೆ ಅರ್ಹವಾದ ವ್ಯಕ್ತಿ ಎಂದರೆ ಸೊರಕೆಯೆಂಬುದು ಜನಸಾಮಾನ್ಯರು ಆಡುತ್ತಿರುವ ಮಾತು.

ಅನುದಾನಕ್ಕೆ ದಾಖಲೆ ಇದೆ ಸುಳ್ಳಿಗೆ ದಾಖಲೆ ಎಲ್ಲಿಂದ ತರಲಿ..!!
ಕಾಪುವಿನಲ್ಲಿ ಶಾಸಕನಾಗಿ ಆರಿಸಿಬಂದ ಮರುದಿನವೇ ವಿನಯ್ ಕುಮಾರ್ ಸೊರಕೆಗೆ ಕಾಪುವಿನ ಹೊಸ ಸ್ಪರ್ಶ ನೀಡಲು ಮುಂದಾದರು ಆ ಪರಿಣಾಮವಾಗಿ ಹತ್ತಾರು ಯೋಜನೆಗಳು ಕ್ಷೇತ್ರದಲ್ಲಿಯೇ ಡಂಪ್ಪಿAಗ್ ಯಾರ್ಡ್ನಂತೆ ಡಂಪ್ಪಾಗಿ ಕೆಲಸ ಕಾರ್ಯಗಳು ಹರಿಯುವ ನೀರಿನಂತೆ ಹರಿದೋಯ್ತು ಆದರೇ ಅದ್ಯಾವುದೂ ಕೂಡ ಹಿಂದುತ್ವದ ಮುಂದೆ ಕೌಂಟಿಗ್ ಬಾರದೆ ಮತವಾಗಿ ಕನ್ವರ್ಟ್ ಆಗಲೇ ಇಲ್ಲ ಆದರೇ ಇಂದಿನ ಶಾಸಕ ಲಾಲಾಜಿ ನಡೆಸಿರುವ ಎಲ್ಲಾ ಕಾಮಾಗಾರಿಗೂ ಶಿಲನ್ಯಾಸ ನಡೆಸಿದ್ದು ಸೊರಕೆ ಹಾಗಂತ ಬಿಜೆಪಿಯ ಸುಳ್ಳಿಗೆ ದಾಖಲೆಯಿಲ್ಲ ಅನುದಾನ ತಂದಿರುವುದಕ್ಕೆ ದಾಖಲೆ ಇದೆ ಎಂದು ಬಹಿರಂಗವಾಗಿಯೇ ಪತ್ರಿಕಾಗೋಷ್ಟಿಯಲ್ಲಿ ಅವರು ತಿಳಿಸಿದ್ದರು.
(ಮುಂದುವರಿಯುತ್ತದೆ)

 

Vishwa News 24

Recent Posts

ಕಸದ ಚೀಲ – ವಿಭಿನ್ನ ಕಥೆಯ ಮೂಲಕ ಗಮನ ಸೆಳೆದ ಉಡುಪಿಯ ಯುವ ಬರಹಗಾರ ಸುಮಂತ್ ಗಾಣಿಗ – vishwanews24

‘ಕಸದ ಚೀಲ’ದ ಮೂಲಕ ವಿಭಿನ್ನ ಕಥನ – ಉಡುಪಿಯ ಸುಮಂತ್ ಗಾಣಿಗ ಅವರ ಬರವಣಿಗೆಗೆ ಮೆಚ್ಚುಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ…

29 minutes ago

ಎಲ್ಲಾ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹರ್ಮನ್‌ಪ್ರೀತ್ ಕೌರ್ – vishwanews24

ಎಲ್ಲಾ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹರ್ಮನ್‌ಪ್ರೀತ್ ಕೌರ್ "ರಕ್ತ, ಬೆವರು ಹರಿಸಿ ಸೇವೆ ಸಲ್ಲಿಸಿದ್ದೇನೆ" : ಸಾಮಾಜಿಕ ಜಾಲತಾಣದಲ್ಲಿ…

1 hour ago

ಉಡುಪಿ: ಅ.8 ರಂದು ನೇರ ಸಂದರ್ಶನ – vishwanews24

ಉಡುಪಿ: ಅ.8 ರಂದು ನೇರ ಸಂದರ್ಶನ      ಉಡುಪಿ: ನಗರದ ಶಾಂತ ಎಲೆಕ್ಟಿçಕಲ್ಸ್ ಪ್ರೆöÊ.ಲಿ., ಆಭರಣ ಜುವೆರ‍್ಸ್ ಹತ್ತಿರ, ಕಾರ್ಪೋರೇಶನ್ ಬ್ಯಾಂಕ್…

2 hours ago

ಹಳೆಕೋಟ–ಕಡವಾಡ ಕ್ರಾಸ್ ರಸ್ತೆ ದುರಸ್ತಿ ಆಗ್ರಹಿಸಿ ಜಿಲ್ಲಾಧಿಕಾರಿಗೆ ಕರವೇ ಮನವಿ – vishwanews24

ಹಳೆಕೋಟ–ಕಡವಾಡ ಕ್ರಾಸ್ ರಸ್ತೆ ದುರಸ್ತಿ ಆಗ್ರಹಿಸಿ ಜಿಲ್ಲಾಧಿಕಾರಿಗೆ ಕರವೇ ಮನವಿ ಕಾರವಾರ  ಇಳಕಲ್ ಕೈಗಾ ರಾಜ್ಯ ರಸ್ತೆಯ ಹಳೆಕೋಟದಿಂದ  ಕಡವಾಡ…

2 hours ago

ಪುತ್ತೂರು: ಹಿಂಸಾತ್ಮಕ ರೀತಿಯಲ್ಲಿ ಕೇರಳಕ್ಕೆ ಅಕ್ರಮವಾಗಿ ಜಾನುವಾರುಗಳ ಸಾಗಾಟ ; ಓರ್ವ ಅರೆಸ್ಟ್‌, ಇಬ್ಬರು ಪರಾರಿ – vishwanews24

ಪುತ್ತೂರು: ಹಿಂಸಾತ್ಮಕ ರೀತಿಯಲ್ಲಿ ಕೇರಳಕ್ಕೆ ಅಕ್ರಮವಾಗಿ ಜಾನುವಾರುಗಳ ಸಾಗಾಟ ; ಓರ್ವ ಅರೆಸ್ಟ್‌, ಇಬ್ಬರು ಪರಾರಿ ಪುತ್ತೂರು: ಯಾವುದೇ ಪರವಾನಿಗೆಯಿಲ್ಲದೆ…

2 hours ago

ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ -vishwanews24

ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ ಕುಂದಾಪುರ : ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ನಲ್ಲಿ ಅಗತ್ಯ ದುರಸ್ತಿ…

15 hours ago