ಭಾರತೀಯ ಸಿನಿಮಾ ರಂಗದ ಖ್ಯಾತ ಕಲಾನಿರ್ದೇಶಕ ಸುನಿಲ್ ಬಾಬು ಹೃದಯಾಘಾತದಿಂದ ನಿಧನರಾಗಿದ್ದಾರೆ ಮಲಯಾಳಂ, ತೆಲುಗು, ಹಿಂದಿ, ತಮಿಳು ಸೇರಿದಂತೆ ನಾನಾ ಭಾಷೆಯ ಸಿನಿಮಾಗಳಿಗೆ ಕೆಲಸ ಮಾಡಿದ್ದ ಹೆಗ್ಗಳಿಕೆ ಇವರದ್ದು. 50ರ ವಯಸ್ಸಿನ ಸುನಿಲ್ ಬಾಬು ಕೇರಳದ ಎರ್ನಾಕುಳಂನಲ್ಲಿ ವಾಸಿಸುತ್ತಿದ್ದರು. ಮನೆಯಲ್ಲೇ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ.
ಈಗಷ್ಟೇ ಅವರು ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನ ವಾರಿಸು ಸಿನಿಮಾದ ಶೂಟಿಂಗ್ ಮುಗಿಸಿದ್ದರು. ಮೂರ್ನಾಲ್ಕು ಸಿನಿಮಾಗಳಿಗೆ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಗಜನಿ, ಉರುಮಿ ಸೇರಿದಂತೆ ನೂರಾರು ಚಿತ್ರಗಳಿಗೆ ಕೆಲಸ ಮಾಡಿದ ಹೆಗ್ಗಳಿಕೆ ಇವರದ್ದು. ವಿಭಿನ್ನವಾಗಿ, ಬೃಹತ್ ಸೆಟ್ ಹಾಕುವುದರಲ್ಲಿ ಪರಿಣಿತಿ ಪಡೆದಿದ್ದ ಸುನಿಲ್ ಬಾಬು ಅವರಿಗೆ 2005ರಲ್ಲಿ ಅನಂತ ಭದ್ರ ಸಿನಿಮಾಗಾಗಿ ಅತ್ಯುತ್ತಮ ಕಲಾ ನಿರ್ದೇಶಕ ರಾಜ್ಯ ಪ್ರಶಸ್ತಿ ಕೂಡ ದೊರೆತಿದೆ.
ಸುನಿಲ್ ಅವರ ಸಾವಿನ ಸುದ್ದಿಗೆ ಚಿತ್ರರಂಗ ಕಂಬಿನಿ ಮಿಡಿದಿದ್ದು, ದುಲ್ಕರ್ ಸಲ್ಮಾನ್ ಭಾವುಕರಾಗಿಯೇ ಇವರ ಬಗ್ಗೆ ಸುದೀರ್ವಾಗಿ ನೆನಪುಗಳನ್ನು ಬರೆದಿಕೊಂಡಿದ್ದಾರೆ. ನಿಮ್ಮ ಪ್ರತಿಭೆಗೆ ನೀವು ಸಾಟಿ, ನಿಮ್ಮ ಕುಟುಂಬಕ್ಕೆ ಈ ನೋವು ಭರಿಸುವಂತಹ ಶಕ್ತಿ ಸಿಗಲಿ ಎಂದು ಅವರು ಬರೆದಿದ್ದಾರೆ.
ಮಂಗಳೂರು : ಜೈಲಿನೊಳಗೆ ಗಾಂಜಾ ಎಸೆತ ಪ್ರಕರಣ ; ಓರ್ವನ ಬಂಧನ ಮಂಗಳೂರು: ನಗರದ ಜಿಲ್ಲಾ ಕಾರಾಗೃಹದ ಆವರಣದೊಳಗೆ ಗಾಂಜಾ…
ಮುಂಬಯಿ : ಮುಂಗಾರು ಮಳೆ ಅಬ್ಬರ; ಜನಜೀವನ ಅಸ್ತವ್ಯಸ್ತ: ಆರೆಂಜ್ ಅಲರ್ಟ್ ಘೋಷಣೆ ಮುಂಬಯಿ: ಮುಂಬಯಿಯಲ್ಲಿ ಮುಂಗಾರು ಮಳೆಯ ಅಬ್ಬರ…
ಉಡುಪಿ: ಐವನ್ ಡಿಸೋಜರಿಗೆ ಸಚಿವ ಸ್ಥಾನ ನೀಡುವಂತೆ ಕೆಥೋಲಿಕ್ ಸಭಾದಿಂದ ಸಿಎಂಗೆ ಮನವಿ ಉಡುಪಿ: ಕಥೊಲಿಕ್ ಸಭಾ ಉಡುಪಿ ಹಾಗೂ…
ಬ್ರಹ್ಮಾವರ : ಅಪ್ರಾಪ್ತ ಬಾಲಕನ ಅಪಹರಣ, ಹಲ್ಲೆ ಹಾಗೂ ಜೀವ ಬೆದರಿಕೆ ಪ್ರಕರಣ ; ಇಬ್ಬರು ಆರೋಪಿಗಳ ಬಂಧನ ಉಡುಪಿ:…
ಬೆಳ್ತಂಗಡಿ: ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ ಮಂಗಳೂರು: ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಮನೆ…
ಉಡುಪಿ : ಕೃಷಿ ಯಂತ್ರೋಪಕರಣಗಳಿಗೆ ಅರ್ಜಿ ಆಹ್ವಾನ ಉಡುಪಿ : ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೃಷಿ ಯಾಂತ್ರೀಕರಣ…