ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ – Vishwanews24

Featured, ರಾಜ್ಯ ನ್ಯೂಸ್

ಮದುವೆಯಾದ ಬಳಿಕ ಬಯಲಾಯ್ತು ಪತಿಯ ಅಕ್ರಮ ಸಂಬಂಧ ; ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ

ಬೆಂಗಳೂರು: ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿಯೊಬ್ಬಳು ಮದುವೆಯಾದ ಒಂದೇ ವರ್ಷಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದ ರಿಚರ್ಡ್ ಗಾರ್ಡನ್‍ನಲ್ಲಿ ನಡೆದಿದೆ.

ಐಟಿ ಉದ್ಯಮಿ ಆಗಿರುವ ಶ್ವೇತಾ (27) ನ.10ರಂದು ನೇಣಿಗೆ ಶರಣಾಗಿದ್ದಾಳೆ. ಐಬಿಎಂ ಕಂಪನಿಯ ಉದ್ಯೋಗಿಯಾಗಿದ್ದ ಶ್ವೇತಾ 11 ತಿಂಗಳ ಹಿಂದಷ್ಟೇ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಎಂಬಾತನೊಂದಿಗೆ ವಿವಾಹವಾಗಿದ್ದಳು. ಆದರೆ ಮದುವೆಗೂ ಮುನ್ನ ಅಭಿಷೇಕ್‍ಗೆ ಯುವತಿಯೊಬ್ಬಳೊಂದಿಗೆ ಸಂಬಂಧವಿತ್ತು ಎನ್ನುವ ವಿಷಯವು ಶ್ವೇತಾಳಿಗೆ ಮದುವೆಯಾದ ಬಳಿಕ ತಿಳಿದಿದೆ. ಈ ವಿಚಾರ ಗೊತ್ತಾದ ಬಳಿಕ ಶ್ವೇತಾ ಹಾಗೂ ಅಭಿಷೇಕ್ ಮಧ್ಯೆ ಪ್ರತಿನಿತ್ಯ ಜಗಳವಾಗುತ್ತಿತ್ತು.

📛 ಮಂಗಳೂರು ಆಟೋ ರಿಕ್ಷಾದಲ್ಲಿ ಸ್ಫೋಟ: ಇನ್ನೆರೆಡು ದಿನಗಳಲ್ಲಿ ಪ್ರಕರಣ NIAಗೆ ಹಸ್ತಾಂತರಿಸಲು ಕ್ರಮ: ಆರಗ ಜ್ಞಾನೇಂದ್ರ – Vishwanews24

ಅದಾದ ಬಳಿಕ ಪರಸ್ಪರ ರಾಜಿ ಪಂಚಾಯತಿ ನಡೆದಿತ್ತು. ಆ ನಂತರ ಅಭಿಷೇಕ್ ಹಾಗೂ ಶ್ವೇತಾ ಇಬ್ಬರೂ ಒಟ್ಟಿಗೆ ಜೀವನ ಸಾಗಿಸುತ್ತಿದ್ದರು. ಈ ನಡುವೆ ಅಭಿಷೇಕ್ ತನ್ನ ಹಳೆಯ ಚಾಳಿಯನ್ನೇ ಪುನಃ ಮುಯಂದುವರಿಸಿದ್ದಾನೆ. ಇದರಿಂದಾಗಿ ಬೇಸತ್ತ ಶ್ವೇತಾ ನೇಣಿಗೆ ಶರಣಾಗಿದ್ದಾಳೆ ಎಂಬ ಆರೋಪಗಳು ಮೃತ ಶ್ವೇತಾಳ ಕುಟುಂಬದಿಂದ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಶ್ವೇತಾಳ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದರು. ಪತ್ನಿಯ ಅಂತ್ಯ ಸಂಸ್ಕಾರದ ಬಳಿಕ ಅಭಿಷೇಕ್ ಸತ್ಯ ಒಪ್ಪಿಕೊಂಡಿದ್ದು, ಮದುವೆಗೂ ಮುನ್ನ ಇನ್ನೋರ್ವ ಯುವತಿಯ ಜೊತೆ ಸಂಬಂಧ ಹೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

✴️ ಕುಕ್ಕೆ ಸುಬ್ರಹ್ಮಣ್ಯ: ಚಂಪಾಷಷ್ಠಿ ಸಂದರ್ಭ ಅನ್ಯಮತೀಯರ ವ್ಯಾಪಾರ ವಹಿವಾಟು ನಿಷೇಧ.. 💥 ಬ್ಯಾನರ್ ಅಳವಡಿಸಿದ ಹಿಂದೂ ಜಾಗರಣಾ ವೇದಿಕೆ – Vishwanews24

ಶ್ವೇತಾಳೊಂದಿಗೆ ಮದುವೆ ನಿಶ್ಚಯವಾದ ನಂತರವೂ ಅದೇ ಯುವತಿಯೊಂದಿಗೆ ಟೂರ್ ಹೋಗಿದ್ದ. ಅಷ್ಟೇ ಅಲ್ಲದೇ ಮದುವೆಯ ನಂತರವೂ ಅನೈತಿಕ ಸಂಬಂಧ ಮುಂದುವರಿಸಿದ್ದ. ಈ ವಿಚಾರ ತಿಳಿದು ಶ್ವೇತಾ ಗಲಾಟೆ ಮಾಡಿದ್ದಳು. ಆ ಬಳಿಕ ಪತ್ನಿಯ ಬಳಿ ಕ್ಷಮೆಯಾಚಿಸಿ ಸುಮ್ಮನಾಗಿರುವ ಬಗ್ಗೆ ತಿಳಿಸಿದ್ದಾನೆ.

Leave a Reply