ಗಿಫ್ಟ್ಸ್ ಕೊಟ್ಟು ಸ್ವಾಗತಿಸುತ್ತೇವೆ ಆದರೆ ಒಂದೇ ಒಂದು ಮತ ಬಿಜೆಪಿಗೆ ನೀಡುವುದಿಲ್ಲ : ಮಮತಾ ಬ್ಯಾನರ್ಜಿ – Vishwanews24

Featured, ರಾಷ್ಟ್ರ ನ್ಯೂಸ್

ಕೋಲ್ಕತ್ತಾ, : ನಾವು ಅತಿಥಿಗಳನ್ನು ರಸಗುಲ್ಲಾ, ಉಡುಗೊರೆ ಕೊಟ್ಟು ಸ್ವಾಗತಿಸುತ್ತೇವೆ. ಆದರೆ ಒಂದೇ ಒಂದು ಮತ ಬಿಜೆಪಿಗೆ ನೀಡುವುದಿಲ್ಲ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ನಡೆಸಿದ ರಾಜಕಿಯೇತರ ಸಂದರ್ಶನದ ವೇಳೆ ಮೋದಿ ಅವರು ತಮ್ಮ ಬಗ್ಗೆ ನೀಡಿದ್ದ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ, ನಾವು ಅತಿಥಿಗಳಿಗೆ ರಸಗುಲ್ಲಾ, ಉಡುಗೊರೆಗಳನ್ನು ನೀಡಿ ಸ್ವಾಗತಿಸುತ್ತೇವೆ. ಆದ್ರೆ ಮತ ಮಾತ್ರ ನೀಡಲ್ಲ ಎಂದು ಪರೋಕ್ಷವಾಗಿ ಮೋದಿ ಅವರಿಗೆ ಟಾಂಗ್ ಕೊಟ್ಟರು.

ಈ ಮಾತಿಗೆ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, ನಾವು ಅತಿಥಿಗಳನ್ನು ರಸಗುಲ್ಲಾ, ಉಡುಗೊರೆ ಕೊಟ್ಟು ಸ್ವಾಗತಿಸುತ್ತೇವೆ. ಆದರೆ ಒಂದೇ ಒಂದು ಮತ ಬಿಜೆಪಿಗೆ ನೀಡುವುದಿಲ್ಲ ಎಂದು ಪ್ರಧಾನಿಯವರ ಹೆಸರು ಉಲ್ಲೇಖಿಸದೆ ಹೇಳಿದ್ದಾರೆ.

ವಿಶೇಷ ಸಂದರ್ಭಗಳಲ್ಲಿ ಅತಿಥಿಗಳನ್ನು ವಿಶೇಷ ಉಡುಗೊರೆ ಕೊಟ್ಟು ಸ್ವಾಗತಿಸುವುದು ಬಂಗಾಳೀಯರ ಸಂಸ್ಕೃತಿ. ಆದರೆ ಬಿಜೆಪಿಗೆ ನಾವು ಮತ ಹಾಕುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಬುಧವಾರ ಅಕ್ಷಯ್ ಕುಮಾರ್ ಮೋದಿ ಸಂದರ್ಶನದಲ್ಲಿ ನಾನು ಈ ಮಾತು ಹೇಳಿದರೆ ಜನರಿಗೆ ಆಶ್ಚರ್ಯವಾಗಬಹುದು, ಚುನಾವಣೆಯ ಈ ಸಂದರ್ಭದಲ್ಲಿ ಹೀಗೆ ಹೇಳಬಾರದು, ಆದರೆ ಮಮತಾ ದೀದಿ ಪ್ರತಿವರ್ಷ ಅವರೇ ಆಯ್ಕೆ ಮಾಡಿದ ಒಂದೊ, ಎರಡೊ ಕುರ್ತಾವನ್ನು ಕಳುಹಿಸುತ್ತಾರೆ. ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಪ್ರತಿವರ್ಷ ಸ್ವೀಟ್ ಕಳುಹಿಸುವುದನ್ನು ನೋಡಿ ಮಮತಾ ದೀದಿ ಕಳುಹಿಸುತ್ತಾರೆ ಎಂದು ಪ್ರಧಾನಿ ಹೇಳಿದ್ದರು.