ಗುಜರಾತ್ ವಿಧಾನಸಭಾ ಚುನಾವಣೆ : ಟೀಂ ಇಂಡಿಯಾ ಆಲ್‍ರೌಂಡರ್  ರವೀಂದ್ರ ಜಡೇಜಾ ಪತ್ನಿಗೆ ಬಿಜೆಯಿಂದ  ಟಿಕೆಟ್ – Vishwanews24

Featured, ರಾಷ್ಟ್ರ ನ್ಯೂಸ್

ಗುಜರಾತ್ ವಿಧಾನಸಭಾ ಚುನಾವಣೆ : ಟೀಂ ಇಂಡಿಯಾ ಆಲ್‍ರೌಂಡರ್  ರವೀಂದ್ರ ಜಡೇಜಾ ಪತ್ನಿಗೆ ಬಿಜೆಯಿಂದ  ಟಿಕೆಟ್

ಗಾಂಧೀನಗರ: ಟೀಂ ಇಂಡಿಯಾದ ಸ್ಟಾರ್ ಆಲ್‍ರೌಂಡರ್ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಅವರಿಗೆ ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಯಿಂದ  ಟಿಕೆಟ್ ಸಿಕ್ಕಿದೆ. ಗುಜರಾತ್‍ನ ಜಮ್ನಗರ ಉತ್ತರದಿಂದ  ರಿವಾಬಾ ಜಡೇಜಾ ಸ್ಪರ್ಧಿಸಲಿದ್ದಾರೆ.

ನಿನ್ನೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಿತ್ತು. ಸಭೆಯಲ್ಲಿ ಪಕ್ಷದ ಮುಖ್ಯಸ್ಥ ಜೆ.ಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ  ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಪಾಲ್ಗೊಳ್ಳಂಡಿದ್ದರು. ಸಭೆಯಲ್ಲಿ ಒಟ್ಟು 100ಕ್ಕೂ ಅಧಿಕ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಗುಜರಾತ್‍ನ ಜಮ್ನಗರ ಉತ್ತರದಿಂದ ರಿವಾಬಾ ಜಡೇಜಾ ಬಿಜೆಪಿ ಟಿಕೆಟ್ ನೀಡಿದೆ. ಇದನ್ನೂ ಓದಿ:  ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ವಿರೋಧ : ಪ್ರಮೋದ್ ಮುತಾಲಿಕ್ ಸೇರಿ ಹಲವು ಕಾರ್ಯಕರ್ತರು ಪೊಲೀಸ್ ವಶಕ್ಕೆ – Vishwanews24

2016ರಲ್ಲಿ ಜಡೇಜಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ರಿವಾಬಾ ಜಡೇಜಾ ಮೆಕ್ಯಾನಿಕಲ್ ಎಂಜಿನಿಯರ್ ಪದವೀಧರೆ. ಅಲ್ಲದೇ ಕಾಂಗ್ರೆಸ್ ಹಿರಿಯ ಆಯಕ ಹರಿಸಿಂಗ್ ಸೋಲಂಕಿ ಅವರ ಸಂಬಂಧಿಯಾಗಿದ್ದಾರೆ. ರಿವಾಬಾ ಜಡೇಜಾರನ್ನು ಬಿಜೆಪಿ ನಾಯಕರಾದ ಹಾರ್ದಿಕ್ ಪಟೇಲ್ ಮತ್ತು ಅಲ್ಪೇಶ್ ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿದ್ದರು. ಇದೀಗ ಬಿಜೆಪಿ ಟಿಕೆಟ್ ನೀಡಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ.

ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಪಕ್ಷದ ಹಿರಿಯ ನಾಯಕ ಭೂಪೇಂದ್ರ ಸಿನ್ಹ್ ಚುಡಾಸಮಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಅವರನ್ನು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಿಂದ ಕೈಬಿಟ್ಟಿದೆ. ಗುಜರಾತ್‍ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.ಇದನ್ನೂ ಓದಿ: ಕಾಸರಗೋಡು: ಬದಿಯಡ್ಕದ ಖ್ಯಾತ ದಂತ ವೈದ್ಯ ಡಾ.ಕೃಷ್ಣಮೂರ್ತಿ ನಾಪತ್ತೆ – Vishwanews24

 

Leave a Reply