Featured

ಗೃಹಲಕ್ಷ್ಮೀ ಫಲಾನುಭವಿಗಳೇ ಎಚ್ಚರ: ಮರುಪರಿಶೀಲನೆ ನೆಪದಲ್ಲಿ OTP, ಬ್ಯಾಂಕ್ ವಿವರ ಕೇಳುವ ಸೈಬರ್ ವಂಚಕರ ಜಾಲ – vishwanews24

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳೇ ಎಚ್ಚರವಾಗಿರಿ..

ಗೃಹಲಕ್ಷ್ಮಿ ಯೋಜನೆಯ ಹೆಸರಲ್ಲಿ ಸಕ್ರಿಯವಾಗಿವೆ ಸೈಬರ್‌ ವಂಚನೆ ಜಾಲ

ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆ ನೆಪದಲ್ಲಿ ಒಟಿಪಿ, ಬ್ಯಾಂಕ್ ವಿವರಕ್ಕೆ ಬೇಡಿಕೆಯಿಟ್ಟು ಸೈಬರ್‌ ವಂಚನೆ

ಕುಂದಾಪುರ: ಗೃಹಲಕ್ಷ್ಮೀ ಯೋಜನೆಯ ಮರುಪರಿಶೀಲನೆ ಹೆಸರಿನಲ್ಲಿ ಒಟಿಪಿ ಹಾಗೂ ಬ್ಯಾಂಕ್ ಖಾತೆ ವಿವರ ಕೇಳುವ ನಕಲಿ ಜಾಲದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಚ್ಚರಿಕೆ ನೀಡಿದೆ. ಸದ್ಯಕ್ಕೆ ಯಾವುದೇ ಮರುಪರಿಶೀಲನೆ ಅಥವಾ ಸರ್ವೇ ಆರಂಭವಾಗಿಲ್ಲ. ಫಲಾನುಭವಿಗಳು ತಮ್ಮ ವೈಯಕ್ತಿಕ ಮಾಹಿತಿ, ಒಟಿಪಿ ಅಥವಾ ಬ್ಯಾಂಕ್ ವಿವರಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು. ಇಂತಹ ವಂಚಕರಿಂದ ಎಚ್ಚರದಿಂದಿರುವಂತೆ ಇಲಾಖೆ ಮನವಿ ಮಾಡಿದೆ.

ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ,’ಗೃಹಲಕ್ಷ್ಮೀ’ ಯೋಜನೆಯಡಿ ಸುಮಾರು 1.22 ಕೋಟಿ ಅರ್ಹ ಮಹಿಳಾ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಯೋಜನೆಯು ಪ್ರಾರಂಭವಾದಾಗಿನಿಂದ ರಾಜ್ಯ ಸರ್ಕಾರ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ 79,404ರೂ. ಕೋಟಿಗೂ ಹೆಚ್ಚು ಮೊತ್ತವನ್ನು ಜಮೆ ಮಾಡಿದೆ. ಆರಂಭದಲ್ಲಿ ಸುಮಾರು 1.30 ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆಯಲು ನೋಂದಾಯಿಸಿಕೊಂಡಿದ್ದರು.

ಆದರೆ, ನಿರಂತರ ಪರಿಶೀಲನೆ ಮತ್ತು ದತ್ತಾಂಶ ಶುದ್ದೀಕರಣ ಪ್ರಕ್ರಿಯೆಗಳ (ಉದಾಹರಣೆಗೆ: ಮೃತಪಟ್ಟ ಫಲಾನುಭವಿಗಳನ್ನು ಪಟ್ಟಿಯಿಂದ ತೆಗೆದುಹಾಕುವುದು ಅಥವಾ ಒಂದೇ ವ್ಯಕ್ತಿಯ ಹೆಸರಿನಲ್ಲಿರುವ ಹೆಚ್ಚುವರಿ ಬ್ಯಾಂಕ್ ಖಾತೆಗಳನ್ನು ಸರಿಪಡಿಸುವುದು) ಮೂಲಕ ಸಕ್ರಿಯ ಫಲಾನುಭವಿಗಳ ಪಟ್ಟಿಯನ್ನು ಸುಮಾರು 1.22 ಕೋಟಿ ಅರ್ಹ ಕುಟುಂಬ ಯಜಮಾನಿಯರಿಗೆ ಸೀಮಿತಗೊಳಿಸಲಾಗಿದೆ. ತಿಂಗಳಿಗೆ 2,000ರೂ. ಭತ್ಯೆಯು ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಮನೆ ಮನೆಗೆ ತೆರಳಿ ನಡೆಸುವ ವಿಶೇಷ ಸಮೀಕ್ಷೆಗಳ ಮೂಲಕ ದತ್ತಾಂಶವನ್ನು ನಿರಂತರವಾಗಿ ನವೀಕರಿಸುತ್ತಿದೆ ಮತ್ತು ಮರುಪರಿಶೀಲನೆಗೆ ಮುಂದಾಗಿದೆ.

ಗೃಹಲಕ್ಷ್ಮಿ ವಂಚಕರ ಜಾಲ
ಯೋಜನೆಯ ಮರುಪರಿಶೀಲನೆ ಪ್ರಕ್ರಿಯೆ ಆರಂಭಕ್ಕೆ ಮೊದಲೇ ಏನೂ ಅರಿಯದ ನಾಗರಿಕರನ್ನು ಗುರಿಯಾಗಿಸಿಕೊಂಡು ಹಲವಾರು ವಂಚನೆಗಳು ಮತ್ತು ಹಗರಣಗಳು ವರದಿಯಾಗಿವೆ. ಸೈಬರ್ ಅಪರಾಧಿಗಳು ಮತ್ತು ಸ್ಥಳೀಯ ವಂಚಕರು, ಈ ಯೋಜನೆಗೆ ನೋಂದಾಯಿಸಿಕೊಳ್ಳಲು ಸಾರ್ವಜನಿಕರಲ್ಲಿ ಇದ್ದ ಭಾರಿ ಬೇಡಿಕೆಯನ್ನು ದುರುಪಯೋಗ ಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಸರ್ಕಾರ ಅಧಿಕೃತ ಡಿಜಿಟಲ್ ವೇದಿಕೆಯನ್ನು ಬಿಡುಗಡೆ ಮಾಡುವ ಅಥವಾ ಯೋಜನೆಯ ಅನುಷ್ಠಾನವನ್ನು ಪೂರ್ಣಗೊಳಿಸುವ ಮೊದಲೇ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ‘ಗೃಹಲಕ್ಷ್ಮೀ’ ಹೆಸರಿನ ಅರ್ಧ ಡಜನ್‌ಗೂ ಹೆಚ್ಚು ನಕಲಿ ಆ್ಯಪ್ ಕಾಣಿಸಿಕೊಂಡಿವೆ. ಈ ಆ್ಯಪ್‌ಗಳು ಸರ್ಕಾರಿ ಪೋರ್ಟಲ್‌ಗಳಂತೆಯೇ ಕಾಣುವಂತೆ ವಿನ್ಯಾಸಗೊಳಿಸಲಾಗಿದೆ. ಇವುಗಳನ್ನು ಡೌನ್‌ಲೋಡ್ ಮಾಡಿದ ನಂತರ, ಬಳಕೆದಾರರು ತಮ್ಮ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ವಿವರಗಳಂತಹ ಅತ್ಯಂತ ಸೂಕ್ಷ್ಮ ಮಾಹಿತಿಯನ್ನು ನಮೂದಿಸುವಂತೆ ಪ್ರೇರೇಪಿಸಲಾಗುತ್ತಿದೆ. ಸೈಬರ್ ಅಪರಾಧಿಗಳು ಈ ಮಾಹಿತಿಯನ್ನು ಬಳಸಿ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ, ಹಣ ದೋಚುತ್ತಿದ್ದಾರೆ. ಅಷ್ಟೇ ಅಲ್ಲ ವಾಟ್ಸ್‌ಆ್ಯಪ್, ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಸರ್ಕಾರ 30,000 ರೂ.ನಿಂದ 3 ಲಕ್ಷದವರೆಗೆ ಸಾಲ ನೀಡುತ್ತಿದೆ ಸಂದೇಶ ಹಬ್ಬಿಸಿ ದಿಕ್ಕು ತಪ್ಪಿಸುತ್ತಿರುವುದು ಬೆಳಕಿಗೆ ಬಂದಿದೆ.

ವಂಚಕರು ಈ ಸಾಲದ ವದಂತಿಗಳನ್ನು ಬಳಸಿಕೊಂಡು, ಜನರ ಬಳಿ ‘ಪ್ರೊಸೆಸಿಂಗ್ ಶುಲ್ಕ’ (ಸಂಸ್ಕರಣಾ ಶುಲ್ಕ) ಪಾವತಿಸುವಂತೆ ಕೇಳಿ ಅಥವಾ ಅವರ ಬ್ಯಾಂಕಿಂಗ್ ಒಟಿಪಿಗಳನ್ನು ಪಡೆದುಕೊಂಡು ವಂಚಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

“ಗೃಹಲಕ್ಷ್ಮೀ ಯೋಜನೆ ಕೇವಲ ಮಾಸಿಕ ಆರ್ಥಿಕ ನೆರವು ನೀಡುವ ಯೋಜನೆಯಾಗಿದೆ. ಇದೊಂದು ಸಾಲ ಯೋಜನೆಯಲ್ಲ. ಪ್ರಸ್ತುತ ನಡೆಯುತ್ತಿರುವ ವಂಚನೆಯ ಬಗ್ಗೆ ಫಲಾನುಭವಿಗಳು ಎಚ್ಚರ ವಹಿಸಬೇಕು. ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಲು ಅಥವಾ ನಿಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಲು ‘ಸೇವಾ ಸಿಂಧು’ ಪೋರ್ಟಲ್ ಮಾತ್ರ ಅಧಿಕೃತ ಮತ್ತು ಕಾನೂನುಬದ್ದ ಮಾರ್ಗವಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಬರುವ ಅಪರಿಚಿತ ಲಿಂಕ್ ಡೌನ್‌ಲೋಡ್ ಮಾಡಕೂಡದು. ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಮರು ಪರಿಶೀಲನೆ ಅಥವಾ ಸರ್ವೇ ಕಾರ್ಯವನ್ನು ಸದ್ಯ ಇನ್ನೂ ಆರಂಭಗೊಂಡಿಲ್ಲ.”
-ಸುಜಯ, ಮೇಲ್ವಿಚಾರಕಿ, ಸಿಡಿಪಿಓ ಇಲಾಖೆ, ಕುಂದಾಪುರ

“ಇಲಾಖೆಯಿಂದ ಯಾವುದೇ ಸರ್ವೇ ಆರಂಭವಾಗದಿರುವುದರಿಂದ, ಯೋಜನೆ ಹೆಸರಿನಲ್ಲಿ ಬರುವ ಅನಧಿಕೃತ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಒಟಿಪಿ ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಇತರ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಬಾರದು. ಈಗಾಗಲೇ ಸೈಬ‌ರ್ ವಂಚಕರು ಯೋಜನೆಯ ಹೆಸರಿನಲ್ಲಿ ಜನರ ದಿಕ್ಕು ತಪ್ಪಿಸುತ್ತಿರುವ ದೂರುಗಳು ಬಂದಿವೆ. ಯಾವುದೇ ಕಾರಣಕ್ಕೂ ಇಂತಹ ಜಾಲದಲ್ಲಿ ಮಹಿಳೆಯರು ಬಲಿ ಬೀಳಬಾರದು. ಎಚ್ಚರಿಕೆ ವಹಿಸಬೇಕು.”
-ಹರಿಪ್ರಸಾದ್ ಶೆಟ್ಟಿ ಕಾನಕಿ, ಅಧ್ಯಕ್ಷ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ

Vishwa News 24

Recent Posts

ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಶಾಕ್ ; ಇಂದು ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿ – vishwanews24

ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಶಾಕ್ ; ಇಂದು ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿ ಬೆಂಗಳೂರು : ರಾಜ್ಯದಲ್ಲಿ ಬಸ್ ಪ್ರಯಾಣ…

3 minutes ago

ನ. 13ಕ್ಕೆ ಬೆಂಗಳೂರಿಗೆ ಪ್ರಧಾನಿ ಮೋದಿ: ನಮ್ಮ ಮೆಟ್ರೋ ಪಿಂಕ್ ಲೈನ್‌ನ ಎಲಿವೇಟೆಡ್ ಮಾರ್ಗ ಉದ್ಘಾಟನೆ – vishwanews24

ನ. 13ಕ್ಕೆ ಬೆಂಗಳೂರಿಗೆ ಪ್ರಧಾನಿ ಮೋದಿ: ನಮ್ಮ ಮೆಟ್ರೋ ಪಿಂಕ್ ಲೈನ್‌ನ ಎಲಿವೇಟೆಡ್ ಮಾರ್ಗ ಉದ್ಘಾಟನೆ ಬೆಂಗಳೂರು: ಪ್ರಧಾನಿ ನರೇಂದ್ರ…

46 minutes ago

ನಾನು ಸ್ಪರ್ಧಿಸಿದ್ದರೆ ಭರ್ಜರಿ ಭರ್ಜರಿ ಬಹುಮತದಿಂದ ಗೆಲ್ಲುತ್ತಿದ್ದೆ: ಟ್ರಂಪ್ – vishwanews24

ನಾನು ಸ್ಪರ್ಧಿಸಿದ್ದರೆ ಭರ್ಜರಿ ಭರ್ಜರಿ ಬಹುಮತದಿಂದ ಗೆಲ್ಲುತ್ತಿದ್ದೆ: ಟ್ರಂಪ್ ವಾಷಿಂಗ್ಟನ್:  ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಮುನ್ನಡೆ ಸಾಧಿಸುತ್ತಿದೆ ಎಂಬ ಆರಂಭಿಕ…

3 hours ago

ಮೀನು ಸಾಗಾಟ ವಾಹನಗಳ ವಿರುದ್ಧ ಪೊಲೀಸರ ಕಾರ್ಯಾಚರಣೆ: 604 ಪ್ರಕರಣ ದಾಖಲು, ₹3.02 ಲಕ್ಷ ದಂಡ ವಸೂಲಿ – vishwanews24

ಮೀನು ಸಾಗಾಟ ವಾಹನಗಳ ವಿರುದ್ಧ ಪೊಲೀಸರ ಕಾರ್ಯಾಚರಣೆ: 604 ಪ್ರಕರಣ ದಾಖಲು, ₹3.02 ಲಕ್ಷ ದಂಡ ವಸೂಲಿ ಮಂಗಳೂರು :…

3 hours ago

ಕರ್ನಾಟಕದಲ್ಲಿ ಎರಡು ದಿನ ಮಳೆ ಸಾಧ್ಯತೆ : ಕರಾವಳಿಯಲ್ಲಿ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ – vishwanews24

ಕರ್ನಾಟಕದಲ್ಲಿ ಎರಡು ದಿನ ಭಾರಿ ಮಳೆ ಸಾಧ್ಯತೆ : 4 ಜಿಲ್ಲೆಗಳಿಗೆ ಗುಡುಗು ಸಹಿತ ಮಳೆ ಅಲರ್ಟ್ ಬೆಂಗಳೂರು: ರಾಜ್ಯದಲ್ಲಿ…

3 hours ago

ದೀಪಾವಳಿಗೆ ಮಂಗಳೂರು-ಬೆಂಗಳೂರು ಹೆಚ್ಚುವರಿ ವಿಶೇಷ ರೈಲು : ಕ್ಯಾ. ಬ್ರಿಜೇಶ್ ಚೌಟ ಮನವಿ – vishwanews24

ದೀಪಾವಳಿಗೆ ಮಂಗಳೂರು-ಬೆಂಗಳೂರು ಹೆಚ್ಚುವರಿ ವಿಶೇಷ ರೈಲು : ಕ್ಯಾ. ಬ್ರಿಜೇಶ್ ಚೌಟ ಮನವಿ ಮಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಮಂಗಳೂರು…

3 hours ago