ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನವೆಂಬರ್ 13ರಂದು ಬೆಂಗಳೂರಿನಲ್ಲಿ ನಮ್ಮ ಮೆಟ್ರೋದ ಪಿಂಕ್ ಲೈನ್ ಹಾಗೂ ಮೈಸೂರಿನಲ್ಲಿ ವಿಶ್ವದ ಮೊದಲ ಓರೆಯಾದ ಎಲ್‌ಇಡಿ ಡೋಮ್ ತಾರಾಲಯವನ್ನು ಉದ್ಘಾಟಿಸಲಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಪ್ರಧಾನಿ ಮೋದಿ ಅವರು ತಾವರೆಕೆರೆ ನಿಲ್ದಾಣದಿಂದ ಐಐಎಂಬಿ-ಬಿಳೇಕಹಳ್ಳಿ ನಿಲ್ದಾಣದವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿ, ಪಿಂಕ್ ಲೈನ್ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಉದ್ದದ ಎಲಿವೇಟೆಡ್ ಮಾರ್ಗ ಸೇರ್ಪಡೆಯೊಂದಿಗೆ, ಬೆಂಗಳೂರಿನ ಮೆಟ್ರೋ ಜಾಲವು ಈಗಿನ 96.1 ಕಿ.ಮೀ.ನಿಂದ 103.6 ಕಿ.ಮೀ.ಗೆ ವಿಸ್ತರಣೆಯಾಗಲಿದೆ. ಈ ಮೂಲಕ ಬೆಂಗಳೂರಿನ ಕಾರ್ಯಾಚರಣೆಯಲ್ಲಿರುವ ಮೆಟ್ರೋ ಜಾಲವು 100 ಕಿ.ಮೀ. ಗಡಿ ದಾಟಲಿದ್ದು, ದೆಹಲಿ ಬಳಿಕ ದೇಶದ ಎರಡನೇ ಅತಿದೊಡ್ಡ ಮೆಟ್ರೋ ಜಾಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಸೂರ್ಯ ಹೇಳಿದರು.
ನಾಲ್ಕು ತಿಂಗಳ ಅವಧಿಯಲ್ಲಿ ಮೋದಿ ಅವರು ಎರಡನೇ ಬಾರಿಗೆ ಮೈಸೂರಿಗೆ ಭೇಟಿ ನೀಡಲಿದ್ದಾರೆ. ಇದಕ್ಕೂ ಮೊದಲು ಆಗಸ್ಟ್ 1ರಂದು ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರವಾದ ವಿವೇಕ ಸ್ಮಾರಕವನ್ನು ಉದ್ಘಾಟಿಸಲು ಮೈಸೂರಿಗೆ ಭೇಟಿ ನೀಡಿದ್ದರು. ಅಕ್ಟೋಬರ್ 24ರಂದು ನಿಗದಿಯಾಗಿದ್ದ ಅವರ ಮೈಸೂರು ಭೇಟಿ ಮುಂದೂಡಿಕೆಯಾಗಿತ್ತು.
ವೀರಯೋಧ ಎ.ಪಿ. ಪ್ರಶಾಂತ್ ಪಾರ್ಕ್ ಸಮೀಪದ ಕೆಂಪು ಚೆಲುವಜಮ್ಮಣ್ಣಿ ನಗರದಲ್ಲಿ ಸ್ವಚ್ಛ ಭಾರತ್ ಮಿಷನ್‌ನ ಲಾಂಛನದ ಆಕಾರದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಮಿಯಾವಾಕಿ ಕಿರು ಅರಣ್ಯವನ್ನೂ ಮೋದಿ ಉದ್ಘಾಟಿಸುವ ನಿರೀಕ್ಷೆಯಿದೆ.
ಅಸ್ಸಾಂನಲ್ಲಿ ಬಹುಪತ್ನಿತ್ವಕ್ಕೆ ಕಡಿವಾಣ : ಒಂದಕ್ಕಿಂತ ಹೆಚ್ಚು ಮದುವೆಯಾದರೆ ಸರ್ಕಾರಿ ಉದ್ಯೋಗದಿಂದ ವಜಾ ದಿಸ್ಪುರ್ : ಅಸ್ಸಾಂ ಸರ್ಕಾರವು ಬಹುಪತ್ನಿತ್ವಕ್ಕೆ…
ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಶಾಕ್ ; ಇಂದು ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿ ಬೆಂಗಳೂರು : ರಾಜ್ಯದಲ್ಲಿ ಬಸ್ ಪ್ರಯಾಣ…
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳೇ ಎಚ್ಚರವಾಗಿರಿ.. ಗೃಹಲಕ್ಷ್ಮಿ ಯೋಜನೆಯ ಹೆಸರಲ್ಲಿ ಸಕ್ರಿಯವಾಗಿವೆ ಸೈಬರ್ ವಂಚನೆ ಜಾಲ ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆ ನೆಪದಲ್ಲಿ…
ನಾನು ಸ್ಪರ್ಧಿಸಿದ್ದರೆ ಭರ್ಜರಿ ಭರ್ಜರಿ ಬಹುಮತದಿಂದ ಗೆಲ್ಲುತ್ತಿದ್ದೆ: ಟ್ರಂಪ್ ವಾಷಿಂಗ್ಟನ್: ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಮುನ್ನಡೆ ಸಾಧಿಸುತ್ತಿದೆ ಎಂಬ ಆರಂಭಿಕ…
ಮೀನು ಸಾಗಾಟ ವಾಹನಗಳ ವಿರುದ್ಧ ಪೊಲೀಸರ ಕಾರ್ಯಾಚರಣೆ: 604 ಪ್ರಕರಣ ದಾಖಲು, ₹3.02 ಲಕ್ಷ ದಂಡ ವಸೂಲಿ ಮಂಗಳೂರು :…
ಕರ್ನಾಟಕದಲ್ಲಿ ಎರಡು ದಿನ ಭಾರಿ ಮಳೆ ಸಾಧ್ಯತೆ : 4 ಜಿಲ್ಲೆಗಳಿಗೆ ಗುಡುಗು ಸಹಿತ ಮಳೆ ಅಲರ್ಟ್ ಬೆಂಗಳೂರು: ರಾಜ್ಯದಲ್ಲಿ…