ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಅಚ್ಚಾಗುವಂತೆ ಮಾಡಿದ ಉಡುಪಿಯ ಗಂಗಾಧರ್ ಕಡೆಕಾರು – Vishwanews24
ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಅಚ್ಚಾಗುವಂತೆ ಮಾಡಿದ ಉಡುಪಿಯ ಗಂಗಾಧರ್ ಕಡೆಕಾರು – Vishwanews24
ಉಡುಪಿ: ಉಡುಪಿಯ ಗಂಗಾಧರ್ ಕಡೆಕಾರು ಕೈಗೆ ಕೋಳ ಕಾಲಿಗೆ ಸರಪಳಿ ಬಿಗಿದು ಸಮುದ್ರದಲ್ಲಿ 5 ವರೆ ಗಂಟೆ ಈಜಿದ್ದಾರೆ. 3550 ಮೀಟರಿಗೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಅಚ್ಚಾಗುವಂತೆ ಮಾಡಿದ್ದಾರೆ.
ಅರಬ್ಬಿ ಸಮುದ್ರದಲ್ಲಿ ಉಡುಪಿಯ ಕಡೆಕಾರು ನಿವಾಸಿ ಗಂಗಾಧರ್ ಅವರು ನಿರಂತರ 5:30 ಗಂಟೆಗಳ ಕಾಲ ಈಜಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರು ದಾಖಲು ಮಾಡಿದ್ದಾರೆ.
ಕೈಯನ್ನು ಹಿಂದಕ್ಕೆ ಕಟ್ಟಿ ಧರಿಸಿ ಕಾಲುಗಳನ್ನು ಸರಪಳಿಯಿಂದ ಬಿಗಿದು ಕೊಂಡು ನೀರಿಗೆ ಧುಮುಕಿದ್ದಾರೆ. ಬರೋಬ್ಬರಿ ಐದೂವರೆ ಗಂಟೆಗಳ ಕಾಲ ಈಜಿ ಗಂಗಾಧರ್ ದಾಖಲೆ ಮಾಡುವ ಮೂಲಕ ಪಡುಕೆರೆ ಗ್ರಾಮದವರಿಗೆ ಮತ್ತು ಅಪಾರ ಶಿಷ್ಯವರ್ಗದವರಿಗೆ ಉತ್ತೇಜನ ನೀಡಿದ್ದಾರೆ.ಇನ್ನು 65ನೇ ಇಳಿವಯಸ್ಸಲ್ಲೂ ಈ ಸಾಧನೆ ಮಾಡಿದ ಗಂಗಾಧರ್ ಈ ಬಾರಿ ಸಮುದ್ರದಲ್ಲಿ ಕಠಿಣ ಸವಾಲು ಎದುರಾಗಿತ್ತು.
ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಮುಖ್ಯಸ್ಥರು ಸಮುದ್ರದಲ್ಲೇ ನಿಗಾ ಇಟ್ಟಿದ್ದರು. ಇಂತದ್ದೊಂದು ದಾಖಲೆ ಬಗ್ಗೆ ಗಿನ್ನಿಸ್ ಬುಕ್ ಅಧಿಕಾರಿಗಳು ಥ್ರಿಲ್ ಆಗಿದ್ದಾರೆ. ಸ್ಥಳದಲ್ಲೇ ಪ್ರಾವಿಜನ್ ಸರ್ಟಿಫಿಕೇಟ್ ವಿತರಣೆ ಮಾಡಿದ್ದಾರೆ. ಅಲ್ಲದೆ ಗಂಗಾಧರ್ ಅವರನ್ನ ಶ್ಲಾಘಿಸಿದ ಮನೀಷ್ ವಿಷ್ಣೋಯ್, ಗಂಗಾಧರ್ ಅವ್ರು ಇವತ್ತು ಉಡುಪಿಯಲ್ಲಿ ಮಹತ್ವಪೂರ್ಣವಾದ ಒಂದು ದಾಖಲೆಯನ್ನು ಮಾಡಿದ್ದಾರೆ.
ಚಿಕ್ಕಮಗಳೂರು : ನಗರದ ವಿವಿದೆಡೆ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ – Vishwanews24
