ಗೋವು ರಾಷ್ಟ್ರಮಾತೆ ಎಂದು ಮಸೂದೆ ಹೊರಡಿಸಿದ ಉತ್ತರಾಖಂಡ ಸರಕಾರ

Featured, ದೇಶ

ಡೆಹ್ರಾಡೂನ್:ರಾಷ್ಟ್ರ ಮಾತೆ ಗೋವು ಎಂಬ ಮಸೂದೆ ಹೊರಡಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾಗಿದೆ.

ಸಚಿವ ಸಂಪುಟದಲ್ಲಿ ರಾಷ್ಟ್ರ ಮಾತೆ ಗೋವು ಎಂಬ ನಿರ್ಣಯ ಹೊರಡಿಸಲಾಗಿದ್ದು, ಸಮ್ಮತಿಗಾಗಿ ಕೇಂದ್ರಕ್ಕೆ ಮನವಿ ಮಾಡಿದೆ. ಪಶು ಸಂಗೋಪನಾ ಸಚಿವೆ ರೇಖಾ ಆರ್ಯಾ ನಿರ್ಣಯ ಮಂಡಿಸಿ ಒಪ್ಪಿಗೆ ಪಡೆದಿದ್ದಾರೆ.

ಗೋವಿನ ದೇಹದಲ್ಲಿ 33 ಕೋಟಿ ದೇವರು ನೆಲೆಸಿದ್ದಾರೆ ಎಂಬ ನಂಬಿಕೆ ಹೊಂದಿರುವ ಬಗ್ಗೆಯೂ ಸಂಪುಟದಲ್ಲಿ ವಿವರಿಸಿದರು.

ಉತ್ತರಾಖಂಡ ವಿಧಾನಸಭೆಯಲ್ಲಿ ಪಶು ಸಂಗೋಪನಾ ಸಚಿವೆ ರೇಖಾ ಆರ್ಯ ಅವರು ರಾಷ್ಟ್ರಮಾತೆ ಗೋವು ಎಂದು ಪರಿಗಣಿಸುವ ನಿರ್ಣಯವನ್ನು ಮಂಡನೆ ಮಾಡಿದರು. ಗೋವುಗಳ ಪ್ರಾಮುಖ್ಯತೆ ಏನು ಎಂಬುದನ್ನು ಅರಿತುಕೊಳ್ಳಬೇಕು. ಗೋವುಗಳ ಮೂತ್ರವನ್ನು ಔಷಧಿಯಾಗಿ ಉಪಯೋಗಿಸಲಾಗುತ್ತೆ. ಹಸುವಿನ ಹಾಲು ತಾಯಿಯ ಬಳಿಕ ನವಜಾತ ಶಿಶುವಿಗೆ ಉತ್ತಮ ಎಂದು ವೈಜ್ಞಾನಿಕವಾಗಿ ಪರಿಗಣಿಸಲಾಗಿದೆ ಎಂದು ಆರ್ಯ ವಿವರಿಸಿದರು.

ಹಸುವಿಗೆ ರಾಷ್ಟ್ರಮಾತಾ ಸ್ಥಾನಮಾನವನ್ನು ನೀಡುವ ಮೂಲಕ ದೇಶದಾದ್ಯಂತ ಹಸು ಸಂರಕ್ಷಣೆಯ ಪ್ರಯತ್ನಗಳು ಮತ್ತಷ್ಟು ಬಲಗೊಳ್ಳುತ್ತೆ ಎಂದು ರೇಖಾ ಆರ್ಯಾ ತಿಳಿಸಿದರು.