ಉತ್ತರಾಖಂಡ ವಿಧಾನಸಭೆಯಲ್ಲಿ ಪಶು ಸಂಗೋಪನಾ ಸಚಿವೆ ರೇಖಾ ಆರ್ಯ ಅವರು ರಾಷ್ಟ್ರಮಾತೆ ಗೋವು ಎಂದು ಪರಿಗಣಿಸುವ ನಿರ್ಣಯವನ್ನು ಮಂಡನೆ ಮಾಡಿದರು. ಗೋವುಗಳ ಪ್ರಾಮುಖ್ಯತೆ ಏನು ಎಂಬುದನ್ನು ಅರಿತುಕೊಳ್ಳಬೇಕು. ಗೋವುಗಳ ಮೂತ್ರವನ್ನು ಔಷಧಿಯಾಗಿ ಉಪಯೋಗಿಸಲಾಗುತ್ತೆ. ಹಸುವಿನ ಹಾಲು ತಾಯಿಯ ಬಳಿಕ ನವಜಾತ ಶಿಶುವಿಗೆ ಉತ್ತಮ ಎಂದು ವೈಜ್ಞಾನಿಕವಾಗಿ ಪರಿಗಣಿಸಲಾಗಿದೆ ಎಂದು ಆರ್ಯ ವಿವರಿಸಿದರು.
ಹಸುವಿಗೆ ರಾಷ್ಟ್ರಮಾತಾ ಸ್ಥಾನಮಾನವನ್ನು ನೀಡುವ ಮೂಲಕ ದೇಶದಾದ್ಯಂತ ಹಸು ಸಂರಕ್ಷಣೆಯ ಪ್ರಯತ್ನಗಳು ಮತ್ತಷ್ಟು ಬಲಗೊಳ್ಳುತ್ತೆ ಎಂದು ರೇಖಾ ಆರ್ಯಾ ತಿಳಿಸಿದರು.