ಚಂದ್ರಗ್ರಹಣ ಹಿನ್ನಲೆ: ಧರ್ಮಸ್ಥಳದಲ್ಲಿ ದರ್ಶನ, ಸೇವೆಯಲ್ಲಿ ವ್ಯತ್ಯಯ – Vishwanews24

Featured, ದಕ್ಷಿಣ ಕನ್ನಡ

ಚಂದ್ರಗ್ರಹಣ ಹಿನ್ನಲೆ: ಧರ್ಮಸ್ಥಳದಲ್ಲಿ ದರ್ಶನ, ಸೇವೆಯಲ್ಲಿ ವ್ಯತ್ಯಯ

ಬೆಳ್ತಂಗಡಿ: ಗ್ರಸ್ತೋದಯ ಖಗ್ರಾಸ ಚಂದ್ರಗ್ರಹಣ ನ.8 ರಂದು ಮಂಗಳವಾರ ಸಂಭವಿಸಲಿರುವ ಹಿನ್ನಲೆಯಲ್ಲಿ ಅಂದು ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಮಧ್ಯಾಹ್ನ 01.30 ರಿಂದ ರಾತ್ರಿ 7 ಗಂಟೆಯವರೆಗೆ ಭಕ್ತಾದಿಗಳಿಗೆ ದೇವರ ದರ್ಶನ ಮತ್ತು ಯಾವುದೇ ಪೂಜೆಗೆ ಅವಕಾಶ ಇರುವುದಿಲ್ಲ. ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

ಮಧ್ಯಾಹ್ನ 1.30 ರವರೆಗೆ ಭೋಜನಾ ವ್ಯವಸ್ಥೆ ಇರಲಿದ್ದು ಬಳಿಕ ಸಂಜೆ 7 ರ ಬಳಿಕ ಅನ್ನಪೂರ್ಣ ಅನ್ನಛತ್ರದಲ್ಲಿ ಭೋಜನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ದೇವಳದ ಪ್ರಕಟನೆ ತಿಳಿಸಿದೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ.. ಆರೋಪಿಗಳ ಸುಳಿವು ನೀಡಿದವರಿಗೆ ಭಾರೀ ಬಹುಮಾನ – Vishwanews24

Leave a Reply