ಚಂದ್ರಗ್ರಹಣ ಹಿನ್ನಲೆ : ಮಾರ್ಚ್ 2 ಮತ್ತು 3ರಂದು ಸುಬ್ರಹ್ಮಣ್ಯ ದೇವಸ್ಥಾನದ ದರ್ಶನ ಸೇವೆಗಳಲ್ಲಿ ವ್ಯತ್ಯಯ – vishwanews24
ಚಂದ್ರಗ್ರಹಣ ಹಿನ್ನಲೆ : ಮಾರ್ಚ್ 2 ಮತ್ತು 3ರಂದು ಸುಬ್ರಹ್ಮಣ್ಯ ದೇವಸ್ಥಾನದ ದರ್ಶನ ಸೇವೆಗಳಲ್ಲಿ ವ್ಯತ್ಯಯ
ಸುಬ್ರಹ್ಮಣ್ಯ : ಚಂದ್ರಗ್ರಹಣ ಹಿನ್ನಲೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾರ್ಚ್ 2 ಮತ್ತು 3ರಂದು ದೇವರ ದರ್ಶನ ಹಾಗೂ ಸೇವೆಗಳಲ್ಲಿ ವ್ಯತ್ಯಯವಾಗಲಿದೆ ಎಂದು ದೇವಳದ ಆಡಳಿತ ತಿಳಿಸಿದೆ.
ಮಾರ್ಚ್ 2 ಮತ್ತು 3ರಂದು ಸರ್ಪಸಂಸ್ಕಾರ ಪೂಜೆ ನಡೆಯುವುದಿಲ್ಲ. 3ರಂದು ಯಾವುದೇ ಸೇವೆಗಳು ಇರುವುದಿಲ್ಲ. ಅಂದು ಮಧ್ಯಾಹ್ನದ ಮಹಾಪೂಜೆ ಬೆಳಿಗ್ಗೆ 8ಕ್ಕೆ ನಡೆಯಲಿದೆ. 9 ಗಂಟೆಯ ಬಳಿಕ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಬೆಳಿಗ್ಗೆಯ ಉಪಾಹಾರ 9 ಗಂಟೆವರೆಗೆ ಸಿಗಲಿದೆ. ಮಧ್ಯಾಹ್ನ ಭೋಜನ ವ್ಯವಸ್ಥೆ ಇರುವುದಿಲ್ಲ. ಸಂಜೆ 7ರ ನಂತರ ದೇವರ ಮಹಾಪೂಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ :
ಮಂಗಳೂರು : ಗಾಂಜಾ ಸೇವನೆ ಮಾಡಿದ ಆರೋಪ ; ಯುವಕನ ಬಂಧನ – vishwanews24
