ಚಂದ್ರಬಾಬು ನಾಯ್ಡು ಅಕ್ರಮವಾಗಿ ಕಟ್ಟಲಾಗದ ಕಟ್ಟಡವನ್ನು ಕೆಡವಿ ಹಾಕಲು ಆಂಧ್ರದ ನೂತನ ಸಿಎಂ ಜಗನ್ ಮೋಹನ್ ರೆಡ್ಡಿ ಆದೇಶ -Vishwanews24
ನವದೆಹಲಿ: ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿ ಆಗಿದ್ದಾಗ ನಿರ್ಮಿಸಿದ್ದ ಸರ್ಕಾರಿ ಕಟ್ಟದ ಧ್ವಂಸಕ್ಕೆ ಸಿಎಂ ಜಗನ್ ಆದೇಶ ಹೊರಡಿಸಿದ್ಧಾರೆ. ಕೃಷ್ಣಾ ನದಿ ತೀರ ಸಮೀಪದ “ಪ್ರಜಾ ವೇದಿಕೆ” ಸರ್ಕಾರಿ ಕಟ್ಟಡವನ್ನು ಒಡೆದು ಹಾಕುವಂತೆ ಸೂಚಿಸಿದ್ದಾರೆ.
ಸಾರ್ವಜನಿಕರ ಸಭೆ ನಡೆಸುವ ಉದ್ದೇಶದಿಂದಾಗಿ ಪ್ರಜಾ ವೇದಿಕೆ ಕಟ್ಟಡ ನಿರ್ಮಿಸಲಾಗಿತ್ತು. ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರೇ ತಮ್ಮ ಮನೆಯ ಸಮೀಪ ಇದನ್ನು ನಿರ್ಮಿಸಿದ್ದರು. 2017ರಲ್ಲಿ ಟಿಡಿಪಿ ಸರ್ಕಾರ ಎಂಟು ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಟ್ಟಡ ನಿರ್ಮಿಸಿತ್ತು.
ಪ್ರಜಾ ವೇದಿಕಾ ಹೆಸರಿನ ಈ ಕಟ್ಟಡವು ನಾಯ್ಡು ಅವರ ನಿವಾಸದ ಸಮೀಪವೇ ಇದೆ. 2017ರಲ್ಲಿ ತೆಲುಗು ದೇಶಂ ಪಕ್ಷ(ಟಿಡಿಪಿ)ಸರಕಾರ ಕಟ್ಟಿರುವ ಈ ಕಟ್ಟಡ ಅಕ್ರಮವಾಗಿದೆ ಎಂದು ರೆಡ್ಡಿ ಆರೋಪಿಸಿದ್ದಾರೆ. 5 ಕೋ.ರೂ. ಯೋಜನೆಯು ಅಂತಿಮವಾಗಿ 8 ಕೋ.ರೂ.ಗೆ ಏರಿಕೆಯಾಗಿತ್ತು.
ರೆಡ್ಡಿ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪ್ರಜಾ ವೇದಿಕಾ ಕಟ್ಟಡವನ್ನು ಧ್ವಂಸಗೊಳಿಸುವುದಾಗಿ ಘೋಷಿಸಿದ್ದರು.
ಪ್ರಜಾ ವೇದಿಕಾ ಕಟ್ಟಡವನು ಧ್ವಂಸಗೊಳಿಸದಂತೆ ಸಿಎಂ ರೆಡ್ಡಿಗೆ ಈ ಮೊದಲೇ ವಿನಂತಿಸಿರುವ ಟಿಡಿಪಿ ಮುಖ್ಯಸ್ಥ ನಾಯ್ಡು, ರಾಜ್ಯ ಅಸೆಂಬ್ಲಿಯ ವಿರೋಧ ಪಕ್ಷದ ನಾಯಕನಾಗಿ ಈ ಕಟ್ಟಡದಲ್ಲೇ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕೆಂದು ವಿನಂತಿಸಿದ್ದರು.
