ಚಂದ್ರು ಕೊಲೆ ಪ್ರಕರಣ : ಬೈಕ್ ಗಲಾಟೆಯೇ ಕಾರಣ, ನನ್ನ ಹೇಳಿಕೆ ತಪ್ಪಾಗಿದೆ’ : ಗೃಹ ಸಚಿವರ ಸ್ಪಷ್ಟನೆ – Vishwanews24
ಚಂದ್ರು ಕೊಲೆ ಪ್ರಕರಣ : ಬೈಕ್ ಗಲಾಟೆಯೇ ಕಾರಣ, ನನ್ನ ಹೇಳಿಕೆ ತಪ್ಪಾಗಿದೆ’ : ಗೃಹ ಸಚಿವರ ಸ್ಪಷ್ಟನೆ
ಬೆಂಗಳೂರು: ಬೆಂಗಳೂರಿನಲ್ಲಿ ಯುವಕನನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅರಗಜ್ಞಾನೇಂದ್ರ ಮಾಹಿತಿಯೊಂದನ್ನು ನೀಡಿದ್ದರು. ಆದರೆ ನಾನು ಹೇಳಿದಂತ ಹೇಳಿಕೆಯೇ ತಪ್ಪಾಗಿದೆ. ಚಂದ್ರು ಕೊಲೆಗೆ ಬೈಕ್ ಗಲಾಟೆಯೇ ಕಾರಣ ಎಂಬುದಾಗಿ ಇದೇಗ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಯುವಕ ಚಂದ್ರುವನ್ನು ಕೊಲೆ ಮಾಡಿದ್ದು, ಚಂದ್ರು ಉರ್ದು ಮಾತನಾಡಿಲ್ಲ ಎಂದು ಕೊಲೆ ಮಾಡಲಾಗಿದೆ. ಕೊಲೆ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬುದಾಗಿ ಹೇಳಿದ್ದರು.
ಆದರೆ ಇದೀಗ ಕೊಲೆ ಬಗ್ಗೆ ಕಮೀಷನರಿಂದ ಮಾಹಿತಿ ಪಡೆದಿರುವೆ. ಚಂದ್ರು ಕೊಲೆಗೆ ಬೈಕ್ ಗಲಾಟೆಯೇ ಕಾರಣ. ನನ್ನ ಹೇಳಿಕೆ ತಪ್ಪಾಗಿ, ತಕ್ಷಣದ ಮಾಹಿತಿ ಆಧಾರದ ಮೇಲೆ ಹೇಳಿದ್ದೇನೆ ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನದಿಂದ ರಹೀಂ ಉಚ್ಚಿಲ್ ಪದಚ್ಯುತಿ – Vishwanews24
