ಚಿಕ್ಕಮಗಳೂರು: ಹೆಬ್ಬೆ ಜಲಪಾತದಲ್ಲಿ ಈಜಲು ಹೋಗಿ ಯುವಕ ನೀರುಪಾಲು – vishwanews24
ಚಿಕ್ಕಮಗಳೂರು: ಹೆಬ್ಬೆ ಜಲಪಾತದಲ್ಲಿ ಈಜಲು ಹೋಗಿ ಯುವಕ ನೀರುಪಾಲು
ಚಿಕ್ಕಮಗಳೂರು: ದೀಪಾವಳಿ ಹಿನ್ನೆಲೆ ಸಾಲು ಸಾಲು ರಜೆ ಇದ್ದ ಕಾರಣ ತನ್ನ ಸ್ನೇಹಿತರ ಜೊತೆಗೂಡಿ ಹೆಬ್ಬೆ ಜಲಪಾತಕ್ಕೆ ಬಂದಿದ್ದ ಪ್ರವಾಸಿಗನೋರ್ವ ಜಲಪಾತದಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹೆಬ್ಬೆ ಜಲಪಾತದಲ್ಲಿ ಭಾನುವಾರ(ನ.3) ಸಂಭವಿಸಿದೆ.
ಛತ್ತಿಸಘಡದ ಮೂಲದ ಪ್ರವಾಸಿಗ ಅಮೀತ್ ಕುಮಾರ್(30)ಮೃತ ದುರ್ದೈವಿಯಾಗಿದ್ದಾನೆ.
ಕುಂದಾಪುರ: ಮನೆಯಲ್ಲಿ ಗಾಂಜಾ ಮಾರಾಟ; ದಂಪತಿ ಪೊಲೀಸರ ವಶಕ್ಕೆ – vishwanews24
ಈತ ಮೂಲತಃ ಛತ್ತಿಸ್ ಘಡದವನಾಗಿದ್ದು ಬೆಂಗಳೂರಿನಲ್ಲಿ ವಾಸವಾಗಿದ್ದಾನೆ ಎನ್ನಲಾಗಿದೆ ಅದರಂತೆ ಭಾನುವಾರ ಸ್ನೇಹಿತರ ಜತೆ ಕೆಮ್ಮಣ್ಣು ಗುಂಡಿ ಸಮೀಪದ ಹೆಬ್ಬೆ ಜಲಪಾತಕ್ಕೆ ತೆರಳಿದ ವೇಳೆ ಈಜಲು ಹೋಗಿ ನಿರುಪಾಲಾಗಿರುವ ಘಟನೆ ನಡೆದಿದೆ.
ಘಟನೆ ಸಂಬಂಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
