ಚುನಾವಣೆ ಗೆಲುವಿಗಾಗಿ ಯಾಗಕ್ಕೆ ಮೊರೆ ಹೋದ ಮುಖ್ಯಮಂತ್ರಿ ಕುಟುಂಬ

Featured, ದಕ್ಷಿಣ ಕನ್ನಡ

ಮಂಗಳೂರು: ಸಂಕಟ ಬಂದಾಗ ವೆಂಕಟರಮಣ ಎಂಬಂತೆ ‘ಸಮಾಜವಾದಿ’ ಸಿಎಂ ಸಿದ್ದರಾಮಯ್ಯ ಚುನಾವಣೆ ಗೆಲುವಿಗಾಗಿ ಅವರ ಕುಟುಂಬ ಯಜ್ಞ, ಯಾಗದ ಮೊರೆ ಹೋಗಿದೆ. ಮೂಢನಂಬಿಕೆಗಳ ವಿರುದ್ಧ ಮೌಢ್ಯ ನಿಷೇಧ ಕಾಯ್ದೆಯ ಅಸ್ತ್ರ ಬಿಟ್ಟಿದ್ದ ಸಿದ್ದರಾಮಯ್ಯ ಚುನಾವಣೆಗೂ ಮುನ್ನ ಕೈನಲ್ಲಿ ನಿಂಬೆಹಣ್ಣು ಹಿಡಿದು ಸುದ್ದಿ ಆಗಿದ್ದರು.

ಇದೀಗ ಅವರು ಸ್ಪರ್ಧಿಸಲಿರುವ ಎರಡೂ ಕ್ಷೇತ್ರಗಳಲ್ಲಿ ಕಠಿಣ ಸವಾಲು ಎದುರಾಗಿರುವುದರಿಂದ ಕೇರಳ ಹಾಗೂ ಉಡುಪಿಯ ಜ್ಯೋತಿಷಿಗಳ ಸಲಹೆ ಪರಿಗಣಿಸಿ ದೇವರ ಮೊರೆ ಹೋಗಿದ್ದಾರೆ. ಕಳೆದ 15 ದಿನಗಳಿಂದ ಮುಖ್ಯಮಂತ್ರಿ ಗೆಲುವಿಗೆ ಹಾಗೂ ದೋಷ ನಿವಾರಣೆಗಾಗಿ ರಾಜ್ಯ ಹಾಗೂ ಕೇರಳದಲ್ಲಿ ವಿವಿಧ ಯಜ್ಞ -ಯಾಗಗಳನ್ನು ಸಿಎಂ ಕುಟುಂಬ ಸದಸ್ಯರು ನಡೆಸಿಕೊಂಡು ಬಂದಿದ್ದಾರೆ.

ಕಾಗೆ ಆತಂಕ: ಸಿಎಂ ಪತ್ನಿ ಕೇರಳ, ನಂಜನಗೂಡು ಹಾಗೂ ಬೆಂಗಳೂರಿನ ವಿವಿಧೆಡೆ ಮೂರು ನಾಲ್ಕು ದಿನದಿಂದ ವಿವಿಧ ಧಾರ್ವಿುಕ ಕಾರ್ಯಕ್ರಮದಲ್ಲಿ ನಿರತರಾಗಿದ್ದಾರೆ.ಕಾರಿನ ಮೇಲೆ ಕಾಗೆ ಕುಳಿತ ಬಳಿಕ ಸಿಎಂ ಮನೆಯವರು ಕೇರಳದ ಜ್ಯೋತಿಷ್ಯರನ್ನು ಸಂರ್ಪಸಿದ್ದು, ಅವರು ಹಲವು ದೋಷ ನಿವಾರಣಾ ಕ್ರಮಗಳನ್ನು ಸೂಚಿಸಿ ದ್ದರು. ಇದರಂತೆ ಆಗ ಕೆಲವೊಂದು ಧಾರ್ವಿುಕ ಕ್ರಮಗಳನ್ನು ಮನೆಯ ವರು ನಡೆಸಿದ್ದರು. ಅದಾದ ಬಳಿಕ ಈ ಮತ್ತೆ ಚುನಾವಣೆಯಲ್ಲಿ ಎದುರಾಗಿರುವ ಸಂಕಟ ನಿವಾರಿಸಲು ಉಡುಪಿ, ಕೇರಳ ಮೂಲದ ಜ್ಯೋತಿಷಿಗಳ ಸಲಹೆಯಂತೆ ಮತ್ತಷ್ಟು ಕ್ರಮಗಳನ್ನು ಅನುಸರಿಸಲಾಗಿದೆ. ಶುಕ್ರವಾರ ಬೆಳಗ್ಗೆ ನಂಜನಗೂಡಿನಲ್ಲಿ ಪೂರ್ಣ ನವಗ್ರಹ ಶಾಂತಿ ಹೋಮ ನಡೆಸಲಾಗಿದೆ. ಆದರೆ ಯಾವುದೇ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿಗಳು ಉಪಸ್ಥಿತರಿರಲಿಲ್ಲ. ಪತ್ನಿ ಹಾಗೂ ಕುಟುಂಬದ ಕೆಲ ಸದಸ್ಯರು ಭಾಗವಹಿಸಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ. ಮೂರು ದಿನಗಳ ಹಿಂದೆ ಬೆಂಗಳೂರಿನಲ್ಲಿ ಕೃತ್ರಿಮ ದೋಷ ನಿವಾರಣೆಗೆ ಉಡುಪಿ ಮೂಲದ ವೈದಿಕರು ಹೋಮಗಳನ್ನು ನೇರವೇರಿಸಿದ್ದರು.