ಚುನಾವಣೆ ಸೋಲುವ ಆತಂಕದಿಂದ ಈ ರೀತಿ ಹೇಳಿಕೆ , ರಾಜ್ಯದ ಜನರೇ ಇವರಿಗೆ ಉತ್ತರವನ್ನೂ ಕೊಡ್ತಾರೆ  : ಅಶ್ವತ್ಥನಾರಾಯಣ ವಿರುದ್ಧ ಯು. ಟಿ ಖಾದರ್ ವಾಗ್ದಾಳಿ – Vishwanews2

Featured, ರಾಜ್ಯ ನ್ಯೂಸ್

ಸಿದ್ದರಾಮಯ್ಯ ಅವರ ವಿರುದ್ಧದ ಹೇಳಿಕೆಗೆ ಅಶ್ವತ್ಥನಾರಾಯಣ ವಿರುದ್ಧ ಯು.ಟಿ.ಖಾದರ್‌ ಕಿಡಿ

ಅಶ್ವತ್ಥ ನಾರಾಯಣ ಬಿಜೆಪಿಯದ್ದು ಮೀರ್ ಸಾದಿಕ್, ಗೋಡ್ಸೆ ವಂಶ..

ಗಾಂಧೀಜಿಯನ್ನು ಕೊಂದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ..

ಬೆಂಗಳೂರು:ಅಶ್ವತ್ಥ ನಾರಾಯಣ, ಬಿಜೆಪಿಯದ್ದು ಮೀರ್ ಸಾದಿಕ್ ವಂಶ ಎಂದು ಪ್ರತಿಪಕ್ಷದ ಉಪನಾಯಕ ಯು. ಟಿ ಖಾದರ್ ವಾಗ್ದಾಳಿ ನಡೆಸಿದರು.

ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, ಟಿಪ್ಪು ರೀತಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಹೊಡೆಯಬೇಕು ಎಂಬ ಸಚಿವ ಅಶ್ವತ್ಥ ನಾರಾಯಣ ಹೇಳಿಕೆಗೆ ತಿರುಗೇಟು ನೀಡಿದರು.

ನೇರಾ ನೇರವಾಗಿ ಹೋರಾಟ ಮಾಡುವ ಹಾಗೂ ಚರ್ಚೆ ಮಾಡುವ ಧೈರ್ಯ ಇವರಿಗೆ ಇಲ್ಲ. ಗಾಂಧೀಜಿಯನ್ನು ಕೊಂದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಗೋಡ್ಸೆ ವಂಶಸ್ಥರು ಅಶ್ವತ್ಥ ನಾರಾಯಣ. ಇವರು ಹೊಡೆದುಹಾಕಲು ನೋಡಿದರೆ ಕಾಂಗ್ರೆಸ್ ನಾಯಕರನ್ನು ಜನರೇ ಮೂರನೇ ಮಹಡಿಗೆ ತಂದು ಕೂರಿಸ್ತಾರೆ. ರಾಜ್ಯದ ಜನರೇ ಇವರಿಗೆ ಉತ್ತರವನ್ನೂ ಕೊಡ್ತಾರೆ ಎಂದರು.

ಕಾರ್ಕಳ:  ಬಹುಮಹಡಿ ಕಟ್ಟಡವೇರಿ ಸಾಹಸ ಪ್ರದರ್ಶಿಸಿದ ಜ್ಯೋತಿರಾಜ್‌ – Vishwanews24

ಅಶ್ವಥ್ ನಾರಾಯಣ್ ನಳಿನ್ ಕುಮಾರ್ ಕಟೀಲು ಹಾಗೂ ಅವರ ಕಂಪನಿಗೆ ಆತಂಕ ಇದೆ. ರಾಜ್ಯದಲ್ಲಿ ಬಿಜೆಪಿ ಎದುರಿಸುತ್ತಿರುವ ಆತಂಕ ಈ ರೀತಿ ಅವರ ಬಾಯಲ್ಲಿ ಹೊರಬಂದಿದೆ. ನಾಯಕರ ಮಾತುಗಳಲ್ಲಿ ಆತಂಕ ಮೂಡಿಬರುತ್ತಿದೆ. ಮುಂದಿನ 50 ರಿಂದ 60 ದಿನಗಳಲ್ಲಿ ಎದುರಾಗುವ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಆತಂಕ ಇದೆ ಎಂದರು.

ಈ ಹಿನ್ನೆಲೆಯಲ್ಲಿ ಇಂತಹ ಪದಗಳನ್ನು ಬಳಸಿ ಮಾತನಾಡುತ್ತಿದ್ದಾರೆ. ಇದು ಅವರ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ. ರಾಜ್ಯದ ಜನರ ಗಮನವನ್ನು ಬೇರೆ ಸೆಳೆಯುವ ಪ್ರಯತ್ನವಾಗಿದೆ. ರಾಜ್ಯ ಸರ್ಕಾರ ಯಾವುದೇ ರೀತಿಯಲ್ಲೂ ಜನಪರ ಆಡಳಿತ ನೀಡಿಲ್ಲ. ಕಾಂಗ್ರೆಸ್ ಪಕ್ಷ 200 ಯೂನಿಟ್ ಫ್ರೀ ವಿದ್ಯುತ್ ನೀಡಿಕೆ,‌ ಮಹಿಳೆಯರಿಗೆ ಎರಡು ಸಾವಿರ ರೂಪಾಯಿ ಗೌರವ ಧನ ನೀಡುವ ಪ್ರಸ್ತಾಪವನ್ನು ಮಾಡಿರುವುದು ಸಹ ಬಿಜೆಪಿಯವರಿಗೆ ಆತಂಕ ತರಿಸಿದೆ ಎಂದು ಆರೋಪಿಸಿದರು‌.

ಸುದೀಪ್ ರಾಜಕೀಯಕ್ಕೆ ಎಂಟ್ರಿ : ನನಗೆ ರಾಜಕೀಯಕ್ಕಿಂತ ಜನರೇ ಮುಖ್ಯ – ಸದ್ಯಕ್ಕೆ ರಾಜಕೀಯಕ್ಕೆ ಎಂಟ್ರಿ ಕೊಡಲ್ಲ : ಸುದೀಪ್ ಸ್ಪಷ್ಟನೆ – Vishwanews24

ನಾವು ಅಶ್ವಥ್ ನಾರಾಯಣ್ ನಳೀನ್ ಕುಮಾರ್ ಕಟೀಲ್, ಬಸವರಾಜ್ ಬೊಮ್ಮಾಯಿ ಹಾಗೂ ಇತರೆ ಬಿಜೆಪಿ ನಾಯಕರನ್ನು ಪ್ರೀತಿಸುತ್ತೇವೆ ಮತ್ತು ಗೌರವಿಸುತ್ತೇವೆ. ಅವರು ಇದೇ ರೀತಿ ಮಾತನಾಡಿಕೊಂಡು ಹೋಗಲಿ ಬಿಡಿ ಎಂದರು.

ಮಂಡ್ಯದಲ್ಲಿ ನಡೆದ ಕಾರ್ಯಕ್ರದಲ್ಲಿ ಟಿಪ್ಪು ರೀತಿ ಸಿದ್ದರಾಮಯ್ಯ ಹತ್ಯೆ ಮಾಡಬೇಕು ಎಂದು ಸಚಿವ ಅಶ್ವತ್ಥನಾರಾಯಣ ಅವರು ಹೇಳಿಕೆ ನೀಡಿದ್ದರು. ಇದರು ಕಾಂಗ್ರೆಸ್‌f ನಾಯಕರ ಮತ್ತು ಸಿದ್ದರಾಮಯ್ಯ ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಸಚಿವ ಅಶ್ವತ್ಥನಾರಾಯಣ ವಿರುದ್ಧ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಈ ಬೆನ್ನೆಲೆ ಸಚಿವರು ಕೂಡಾ ಸಿದ್ದರಾಮಯ್ಯ ಅವರ ಕ್ಷಮೆ ಕೇಳಿದ್ದರು.

‘ಅಡಿಕೆ’ ಬೆಳೆಗಾರರಿಗೆ ಗುಡ್ ನ್ಯೂಸ್ : ಆಮದು ದರ 100 ರೂ.ಹೆಚ್ಚಿಸಿದ ಕೇಂದ್ರ ಸರ್ಕಾರ – Vishwanews24

Leave a Reply