Featured

ಜನರೇಕೆ ಬಿಜೆಪಿಗೆ ಮತ ಹಾಕುತ್ತಾರೆ ಎಂದು ಗೊತ್ತಾಗುತ್ತಿಲ್ಲ : ಸಿದ್ದರಾಮಯ್ಯ -Vishwanews24

ಹುಣಸೂರು: ಸಿಎಂ ಯಡಿಯೂರಪ್ಪನವರಿಗೆ ಮುಸಲ್ಮಾನರನ್ನು ಕಂಡರೆ ಆಗುವುದಿಲ್ಲ. ಮುಸ್ಲಿಮರ ವಿರುದ್ಧ ದ್ವೇಷದ ಭಾವನೆ ಹೊಂದಿದ್ದಾರೆ. ಮುಸ್ಲಿಂ ಧರ್ಮೀಯರನ್ನು ಅವರು ಅಷ್ಟೊಂದು ಏಕೆ ದ್ವೇಷಿಸುತ್ತಾರೆ ಎಂದು ಗೊತ್ತಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹುಣಸೂರಿನಲ್ಲಿ ನಿನ್ನೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ಕನಕದಾಸ ಜಯಂತಿ ಮತ್ತು ಕೆಂಪೇಗೌಡ ಜಯಂತಿ ಆಚರಣೆ ಆರಂಭಿಸಿದಂತೆ ಟಿಪ್ಪು ಜಯಂತಿಯನ್ನು ಕೂಡ ಪ್ರಾರಂಭಿಸಿದೆ. ಟಿಪ್ಪು ಒಬ್ಬ ರಾಜ. ಅವರು ಬ್ರಿಟಿಷರ ವಿರುದ್ಧ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಅವರ ತಂದೆ ಹೈದರಾಲಿ ಕೂಡ ದೊರೆ, ಹೀಗಿರುವಾಗ ಟಿಪ್ಪು ಜಯಂತಿ ಆಚರಿಸುವುದರಲ್ಲಿ ತಪ್ಪೇನಿದೆ ಎಂದು ಕೇಳಿದರು.

ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ನಿರ್ದಿಷ್ಟವಾಗಿ ಒಂದು ಸಮುದಾಯವನ್ನೇಕೆ ದ್ವೇಷಿಸುತ್ತಿದ್ದಾರೆ? ಇದರಿಂದಲೇ ಅವರ ಕೋಮು ಭಾವನೆ ಗೊತ್ತಾಗುತ್ತದೆ. ನಾನು ಸಿಎಂ ಆಗಿದ್ದಾಗ ಹಲವು ಯೋಜನೆಗಳನ್ನು ತಂದೆ. ಅವರು ಏನು ಮಾಡಿದರು. ಜನರು ಬುದ್ಧಿವಂತರಾಗಬೇಕು. ಜನರೇಕೆ ಬಿಜೆಪಿಗೆ ಮತ ಹಾಕುತ್ತಾರೆ ಎಂದು ಗೊತ್ತಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
Vishwa News 24

Recent Posts

ನಟ ಪ್ರಕಾಶ್ ರಾಜ್ ಮತದಾರರ ಪಟ್ಟಿ ಹೆಸರು ಕೈಬಿಟ್ಟ ಆರೋಪ ಸುಳ್ಳು: ಬಿಬಿಎಂಪಿ ಸ್ಪಷ್ಟನೆ – vishwanews24

ವೋಟರ್ ಲಿಸ್ಟ್​ನಿಂದ ತಮ್ಮ ಹೆಸರು ಕೈಬಿಡಲಾಗಿದೆ : ನಟ ಪ್ರಕಾಶ್​ ರಾಜ್ ಆರೋಪಕ್ಕೆ ಚುನಾವಣಾಧಿಕಾರಿ ಸ್ಪಷ್ಟನೆ ಬೆಂಗಳೂರು: ಮತದಾರರ ಪಟ್ಟಿಯಿಂದ…

7 minutes ago

ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ. ಕೆ. ಶಿವಕುಮಾರ್ – vishwanews24

ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟಕ್ಕೆ…

25 minutes ago

ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್ ಚಂದ್ರಶೇಖರನ್ ರಾಜೀನಾಮೆ – vishwanews24

ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್ ಚಂದ್ರಶೇಖರನ್ ರಾಜೀನಾಮೆ ಹೊಸದಿಲ್ಲಿ: ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ಅವರು…

30 minutes ago

ಉಡುಪಿ:  ಆ.14 ರಂದು ನೇರ ಸಂದರ್ಶನ – vishwanews24

ಉಡುಪಿ:  ಆ.14 ರಂದು ನೇರ ಸಂದರ್ಶನ ಉಡುಪಿ: ನಗರದ ನಿಟ್ಟೂರು ರಾ.ಹೆ 66 ರ ಆಭರಣ ಮೋಟಾರ್ಸ್ ಪ್ರೆöÊವೇಟ್ ಲಿ.ನಲ್ಲಿ…

37 minutes ago

ಮೀನುಗಾರರಿಗೆ ಸಬ್ಸಿಡಿ ರಹಿತ ಸೀಮೆಎಣ್ಣೆ ಒದಗಿಸಲು ಸಂಸದರಿಂದ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಮನವಿ – vishwanews24

ಮೀನುಗಾರರಿಗೆ ಸೀಮೆಎಣ್ಣೆ ಒದಗಿಸಲು ಸಂಸದರಿಂದ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಮನವಿ ಕುಂದಾಪುರ: ರಾಜ್ಯದ ಸಾಂಪ್ರದಾಯಿಕ ನಾಡ ದೋಣಿ…

1 hour ago

ಕಡಬ : ಜಲಪಾತಕ್ಕೆ ತೆರಳಿದ್ದ ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಹಲ್ಲೆ ; ಪ್ರಕರಣ ದಾಖಲು – vishwanews24

ಕಡಬ : ಜಲಪಾತಕ್ಕೆ ತೆರಳಿದ್ದ ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಹಲ್ಲೆ ; ಪ್ರಕರಣ ದಾಖಲು ಕಡಬ : ಜಲಪಾತಕ್ಕೆ ತೆರಳಿದ್ದ…

1 hour ago