Featured

‘ರಾಮನಾಗಿ ಬದುಕುವುದೇ ರಾಮರಾಜ್ಯ , ಇದು ಸನಾತನ ಹಿಂದೂ ಧರ್ಮ : ವಿನಯ ಗುರೂಜಿ -Vishwanews24

ಉಳ್ಳಾಲ: ‘ರಾಮನಾಗಿ ಬದುಕುವುದೇ ರಾಮರಾಜ್ಯ, ರಾಮನ ಆದರ್ಶಗಳನ್ನು ಮೈಗೂಡಿಸಿ ಬದುಕುವುದೇ ಧರ್ಮ. ಅಹಂಕಾರವನ್ನು ಕಳೆದುಕೊಳ್ಳುವವನೇ ಗುರು. ಇದು ಸನಾತನ ಹಿಂದೂ ಧರ್ಮ’ ಎಂದು ಕೊಪ್ಪ ದತ್ತ ಆಶ್ರಮದ ವಿನಯ ಗುರೂಜಿ ಅಭಿಪ್ರಾಯಪಟ್ಟರು.

ಹಿಂದೂ ಜಾಗರಣ ವೇದಿಕೆ , ಓಂ ಶಕ್ತಿ ಘಟಕ ಕುಂಪಲ ಆಶ್ರಯದಲ್ಲಿ ನವೋದಯ ಮೈದಾನ ಮೂರುಕಟ್ಟೆಯಲ್ಲಿ ಜರುಗಿದ 10ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಸಭೆಯಲ್ಲಿ ಅವರು ಮಾತನಾಡಿದರು.

‘ಹಿಂದೂ ಧರ್ಮದ ದ್ವೈತ್ವವನ್ನು ಬೈಬಲ್, ಕುರಾನ್‌ನಲ್ಲಿ ಹೇಳಲಾಗಿದೆ. ಆದರೆ ಇದನ್ನು ಒಪ್ಪಲು ಸಿದ್ಧರಿಲ್ಲ.  ಶಾಸ್ತ್ರ ವನ್ನು ಮೀರಿರುವುದು ಸತ್ಯ. ಭೌತಿಕವಾಗಿ ಗಟ್ಟಿ ಇರುವ ಹಿಂದೂಗಳು ತಾತ್ವಿಕವಾಗಿ ಇಲ್ಲ. ಇತರ ಧರ್ಮಗಳಲ್ಲಿ ಗ್ರಂಥಾಧ್ಯಯನ ಇದೆ. ಆದರೆ ಹಿಂದೂಗಳು ಗ್ರಂಥಗಳನ್ನು ಷೋಕೇಸ್‌ನಲ್ಲಿ ಹೂಗಳನ್ನಿಟ್ಟು ಪೂಜೆ ಮಾಡಲು ಮಾತ್ರ ಸೀಮಿತಿವಾಗಿರಿಸಲಾಗಿದೆ. ಕೇಸರಿ ಬಟ್ಟೆ ಉಡುವುದಷ್ಟೇ ಸನ್ಯಾಸವಲ್ಲ. ಆಸೆಗಳನ್ನು ಗೆಲ್ಲುವುದು ಕೂಡ ಸನ್ಯಾಸ’ ಎಂದರು.

‘ಧರ್ಮದ ಅಳಿವಿಗೆ ಕಾರಣ. ಜಾತಿ, ಬಡವ ಶ್ರಿಮಂತ , ಮಡಿ ಮೈಲಿಗೆ ಎಲ್ಲವನ್ನೂ ದೂರವಾಗಿರಿಸಬೇಕು. ಧಾರ್ಮಿಕ, ಲೌಕಿಕ ಶಿಕ್ಷಣ ಹಾಗೂ ದೇವಸ್ಥಾನದ ಹಣವನ್ನು ಬಡವರಿಗೆ ವಿನಿಯೋಗಿಸುವುದರಿಂದ ಸಮಾಜದ ಏಳಿಗೆಯೂ ಸಾಧ್ಯ’ ಎಂದರು.

ಉಳ್ಳಾಲ್ತಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಕುತ್ತಾರ್ ಅಧ್ಯಕ್ಷತೆ  ವಹಿಸಿದ್ದರು. ಹಿಂದೂ ಜಾಗರಣ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ .ಕೆ ಶಕ್ತಿನಗರ, ಉದ್ಯಮಿಗಳಾದ ಹರೀಶ್ ಶೆಟ್ಟಿ, ಅರವಿಂದ್ ಬೆಂಗ್ರೆ, ಸುಜಿತ್ ಕಂಬ್ಳಪದವು, ಗುರುಪ್ರಸಾದ್ ಭಟ್, ತಿರುಮಲೇಶ್ವರ್ ಭಟ್, ವಕೀಲ ಮಹೇಶ್ ಜೋಗಿ, ಮುಖ್ಯ ಅತಿಥಿಗಳಾಗಿದ್ದರು.  ಸಾಮಾಜಿಕ ಕಾರ್ಯಕರ್ತೆ ಪ್ರಭಾ ವಿಠಲ್, ವೇದಿಕೆ ಪ್ರಖಂಡದ ಸಂಚಾಲಕ ಪ್ರಕಾಶ್ ಕುಂಪಲ , ಕುಂಪಲ ಮೊಸರುಕುಡಿಕೆ ಉತ್ಸವದ ಗೌರವಾಧ್ಯಕ್ಷ ಸೋಮೇಶೇಖರ್ ಕೆ. ಜಗತಾಪು , ಪ್ರವೀಣ್.ಯಸ್ ಕುಂಪಲ  ಇದ್ದರು.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago