ಜಿಲ್ಲಾಧಿಕಾರಿಗಳ ಕ್ರಮವನ್ನು ಬೆಂಬಲಿಸಬೇಕು : DC ಸಿಂಧೂರಿ ಪರ ಪ್ರತಾಪ್ ಸಿಂಹ  -Vishwanews24

Featured, ರಾಜ್ಯ ನ್ಯೂಸ್

ಜಿಲ್ಲಾಧಿಕಾರಿಗಳ ಕ್ರಮವನ್ನು ಬೆಂಬಲಿಸಬೇಕು : DC ಸಿಂಧೂರಿ ಪರ ಪ್ರತಾಪ್ ಸಿಂಹ  -Vishwanews24

ಮೈಸೂರು: ಮೈಸೂರು ಡಿಸಿ ರೋಹಿಣಿ ಸಿಂಧೂರಿ ಮತ್ತು ಶಾಸಕರ ನಡುವಿನ ಜಟಾಪಟಿ ವಿಚಾರಕ್ಕೆ ಸಂಸದ ಪ್ರತಾಪ್ ಸಿಂಹ ಪ್ರತಿಕಿಯಿಸಿದ್ದಾರೆ. ಜಿಲ್ಲಾಧಿಕಾರಿ ಪರವಾಗಿ ಪ್ರತಾಪ್ ಸಿಂಹ ಭರ್ಜರಿಯಾಗಿ ಮಾತನಾಡಿದ್ದಾರೆ.

ಕ್ಷೇತ್ರದ ಜನರ ಸಮಸ್ಯೆ ಕೇಳಲು ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ. ಕ್ಷೇತ್ರವನ್ನು ಯಾವ ಶಾಸಕರು ಹಾಗೂ ಎಂಪಿಗೂ ಬರೆದುಕೊಟ್ಟಿರುವುದಿಲ್ಲ ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಗ್ರಾಮ ಪಂಚಾಯತಿ ಚುನಾವಣೆ ಮುಗಿದ ಮೇಲೆ ನಾನು ಕೂಡ ಜನರ ಬಳಿ ಹೋಗುತ್ತೇನೆ. ಯಾರು ತಡೆಯುತ್ತಾರೆ ನೋಡೋಣ ಎಂದು ಗುಡುಗಿದ್ದಾರೆ.

ನಾಲ್ಕು ಜನ ಶಾಸಕರು ಒಟ್ಟಾಗಿ ಡಿಸಿ ವಿರುದ್ಧ ಸುದ್ದಿಗೋಷ್ಠಿ ನಡೆಸಿ‌ ಹೆದರಿಸುತ್ತಿದ್ದೀರಾ? ನೀವೂ ಹೆದರಿಸಿದರೆ ನಾವು ಹೆದರಬೇಕಾ? ನೀವು ಜನರ ಸಮಸ್ಯೆ ಬಗೆಹರಿಸಿದ್ದರೆ, ಜನ ಯಾಕೆ ಡಿಸಿ ಬಳಿ ಕಷ್ಟ ಹೇಳಿಕೊಂಡು ಹೋಗುತ್ತಿದ್ದರು? ಎಂದು ಶಾಸಕರನ್ನು ಪ್ರಶ್ನಿಸಿದ್ದಾರೆ.

ಶಾಸಕರು, ಸಂಸದರು ಎಂಬುದು ಜನರ ಕೆಲಸ ಮಾಡಲು ಇರುವ ಹುದ್ದೆ ಅಷ್ಟೇ. ಡಿಸಿ ಜನರ ಬಳಿಗೆ ಹೋಗಿ ಅವರ ಸಮಸ್ಯೆ ಕೇಳುತ್ತಿದ್ದಾರೆ. ಇದನ್ನು ಎಲ್ಲರೂ ಬೆಂಬಲಿಸಬೇಕು. ನೀವು ಮಾಡಲು ಆಗದ ಕೆಲಸವನ್ನ ಡಿಸಿ‌ ಮಾಡುತ್ತಿದ್ದಾರೆ, ಮಾಡಲು ಬಿಡಿ ಎಂದು ಕಟುವಾಗಿ ಹೇಳಿದ್ದಾರೆ.