ಕಾಪು: ಉಡುಪಿ ಜಿಲ್ಲಾ ಜೆಡಿಎಸ್ ನ ಜಿಲ್ಲಾಧ್ಯಕ್ಷರಾದ ಯೋಗಿಶ್ ಶೆಟ್ಟಿಯವರಿಗೆ ಪಲಿಮಾರು ಹಿರಿಯ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಗಳು ಲಾಕ್-ಡೌನ್ ಸಂತ್ರಸ್ತರಿಗೆ ವಿತರಿಸಲು ಕಿಟ್ ಹಸ್ತಾಂತರ ಕಾರ್ಯಕ್ರಮ ಪಲಿಮಾರು ಮಠದಲ್ಲಿ ನಡೆಯಿತು.
ಈ ಸಂಧರ್ಭದಲ್ಲಿ ಶ್ರೀಗಳು ಮಾತಾಡಿ ” ಕೊರೋನಾ ಎಂಬ ಮಹಮಾರಿಯನ್ನು ಸರ್ಕಾರದ ಆದೇಶ ಪಾಲಿಸುವ ಮೂಲಕ ಹತೋಟಿಗೆ ತರಲು ಪ್ರಯತ್ನಿಸಬೇಕು,ಒಂದು ಹೊತ್ತು ಊಟ ನೀಡುವುದರಿಂದ ಒಪ್ಪೊತ್ತಿನ ಹಸಿವು ನೀಗಿಸಬಹುದು ಆದರೆ ಈ ತರಹ ಕಿಟ್ ವಿತರಣೆ ಮಾಡಿದರೆ ಅದು ಕೆಲ ದಿನಗಳ ಊಟಕ್ಕೆ ವ್ಯವಸ್ಥೆ ಆಗುತ್ತದೆ ಮತ್ತು ಯೋಗಿಶ್ ಶೆಟ್ಟಿಯವರಿಗೆ ಕಿಟ್ ವಿತರಿಸಿರುವುದರಿಂದ ಅದು ಅರ್ಹರಿಗೆ ತಲುಪುತ್ತೆ ಎಂದರು.”
ಯೋಗಿಶ್ ಶೆಟ್ಟಿ ಬಾಲಾಜಿ ಮಾತಾಡಿ” ಪಲಿಮಾರು ಶ್ರೀಗಳ ಸಾಮಾಜಿಕ ಸೇವೆಯು ಸಮಾಜದಲ್ಲಿ ಆದರ್ಶಪ್ರಾಯವಾಗಿದೆ ಮತ್ತು ಆಪತ್ಕಾಲದಲ್ಲಿ ಸಮಾಜಕ್ಕೆ ಸ್ಪಂದಿಸುವ ಶ್ರೀಗಳ ಸೇವೆ ಶ್ಲಾಘನೀಯ ಎಂದರು.
ಈ ಹಿಂದೆ ಯೋಗಿಶ್ ಶೆಟ್ಟಿಯವರು ಸುಮಾರು 600 ಕುಟುಂಬಗಳಿಗೆ ವೈಯಕ್ತಿಕ ಕಿಟ್ ವಿತರಣೆ ಮಾಡಿದ್ದರು.
ಈ ಸಂಧರ್ಭದಲ್ಲಿ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಉದಯ ಹೆಗ್ಡೆ,ರಾಜ್ಯ ಅಲ್ಪಸಂಖ್ಯಾತ ಕಾರ್ಯದರ್ಶಿ ಇಸ್ಮಾಯಿಲ್ ಪಲಿಮಾರು, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ್ ಆಚಾರ್ಯ, ಶ್ರೀಕಾಂತ್ ಹೆಬ್ರಿ,ಸಮಾಜ ಸೇವಕ ರಘರಾಮ್ ಶೆಟ್ಟಿ ಕೊಪ್ಪಲಂಗಡಿ ಉಪಸ್ಥಿತರಿದ್ದರು
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…