ಮೈಸೂರು, : ಜೆಡಿಎಸ್ ಎಂಎಲ್‌ಸಿ ಸಂದೇಶ್ ನಾಗರಾಜ್ ಜೆಡಿಎಸ್ ತೊರೆಯುತ್ತಿದ್ದು, ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಸಂದೇಶ್, “ಬಿಜೆಪಿ ಸೇರಿದ ಬಳಿಕ ಜೆಡಿಎಸ್ ತೊರೆಯಲು ಕಾರಣವೇನು ಎಂಬುದನ್ನು ತಿಳಿಸುತ್ತೇನೆ. ಹೆಚ್.ಡಿ.ಕುಮಾರಸ್ವಾಮಿಯವರಿಗೆ ಪಕ್ಷದಲ್ಲಿ ನನ್ನ ಅಗತ್ಯವಿಲ್ಲ ಅನಿಸುತ್ತಿದ್ದು, ನನ್ನ ಅಗತ್ಯವಿಲ್ಲದಿದ್ದಾಗ ಆ ಜಾಗದಲ್ಲಿ ನಾನು ಯಾಕೆ ಇರಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಕಳೆದ ಮೂರು ವರ್ಷಗಳಿಂದ ಕೇವಲ ದೈಹಿಕವಾಗಿ ನಾನು ಜೆಡಿಎಸ್ ನಲ್ಲಿದ್ದೇನೆ. ಜೆಡಿಎಸ್ ನಾಯಕರ ಸಂಪರ್ಕದಲ್ಲಿಯೂ ಇಲ್ಲ. ವಿಧಾನಪರಿಷತ್ ಒಳಗೂ ನಾನು ಬಿಜೆಪಿ ಪರವಾಗಿಯೇ ಬಿಲ್ ಗಳಿಗೆ ಕೈ ಎತ್ತಿದ್ದೇನೆ” ಎಂದರು.
ನನಗೆ ಬಿಜೆಪಿಯಿಂದ ವಿಧಾನಪರಿಷತ್ ಟಿಕೆಟ್ ಸಿಗುವ ವಿಶ್ವಾಸ ಕೂಡ ಇದ್ದು, ನಾನು ಬಿಜೆಪಿ ಸೇರ್ಪಡೆಗೆ ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ಶಿರ್ವ: ಆತ್ಮಹತ್ಯೆಗೆ ಪ್ರಚೋದನೆ ; ಮೂವರ ವಿರುದ್ಧ ದೂರು ದಾಖಲು ಶಿರ್ವ: ಪತ್ನಿ, ಆಕೆಯ ಸಹೋದರಿ ಮತ್ತು ಪತ್ನಿಗೆ ಇನ್‌ಸ್ಟಾಗ್ರಾಮ್…
ಹಳೆಯಂಗಡಿ: ನಿಂತಿದ್ದ ಬಸ್ಸಿಗೆ ಟಿಪ್ಪರ್ ಢಿಕ್ಕಿ; ನಾಲ್ವರು ವಿದ್ಯಾರ್ಥಿಗಳಿಗೆ ಗಾಯ ಹಳೆಯಂಗಡಿ: ಕಿನ್ನಿಗೋಳಿಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಸರ್ವಿಸ್ ಬಸ್ಸಿಗೆ…
ಉಡುಪಿ: ಸ್ಪೀಡ್ ರಾಡಾರ್ ಕೆಮರಾ ಕಣ್ಣು ; ಒಂದು ವಾರದಲ್ಲಿ 47,709 ವಾಹನಗಳು ಸಂಚಾರ ನಿಯಮ ಉಲ್ಲಂಘನೆ ಉಡುಪಿ :…
CMRL ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ಈಡಿ ದಾಳಿ ತಿರುವನಂತಪುರಂ: ಕೊಚ್ಚಿನ್…
ಮೇ 30-31 ರಂದು ದ.ಕ. ಜಿಲ್ಲೆಗೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಭೇಟಿ ಮಂಗಳೂರು: ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು…
ಬೇಕರಿ ತಿನಿಸು, ಚಿಪ್ಸ್‌ಗಳಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕ ಬಣ್ಣಗಳ ಬಳಕೆ: ಆಹಾರ ಸುರಕ್ಷತಾ ಇಲಾಖೆ ವರದಿ ಪ್ರಕಟ ಬೆಂಗಳೂರು: ಬೇಕರಿಯ…