ಜೆಡಿಎಸ್ ಪಕ್ಷದ ದುರಹಂಕಾರದಿಂದಲೇ ಸೋಲಾಗಿದೆ : ಎಚ್.ವಿಶ್ವನಾಥ್ -Vishwanews24

Featured, ರಾಜ್ಯ ನ್ಯೂಸ್

ಮೈಸೂರು, : ಕಾಂಗ್ರೆಸ್‌ ಪಕ್ಷದಲ್ಲಿ ಭುಗಿಲೆದ್ದಿರುವ ಅಸಮಾಧಾನ ಮಿತ್ರ ಪಕ್ಷ ಜೆಡಿಎಸ್‌ಗೂ ವ್ಯಾಪಿಸಿದೆ. ಪಕ್ಷವನ್ನು ಕಾಯಬೇಕಾದ ರಾಜ್ಯಾಧ್ಯಕ್ಷರ ಕಟು ಮಾತಿನಿಂದ ಜೆಡಿಎಸ್‌ ಅನ್ನು ಟೀಕಿಸಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಸ್ವಂತ ಪಕ್ಷದ ಮೇಲೆಯೇ ಮುಗಿಬಿದ್ದಿದ್ದು, ಜೆಡಿಎಸ್ ಪಕ್ಷದ ದುರಹಂಕಾರದಿಂದಲೇ ಅದಕ್ಕೆ ಸೋಲಾಗಿದೆ ಎಂದು ಹೇಳಿದ್ದಾರೆ.

ಕೆ.ಆರ್. ನಗರದಲ್ಲಿ ವಿಶ್ವನಾಥ್ ಅವರು ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ನಾನು ಹೇಳಿದವರಿಗೆ ಪಕ್ಷ ಟಿಕೆಟ್ ನೀಡಲಿಲ್ಲ ಎಂದಿರುವ ವಿಶ್ವನಾಥ್, ಜೆಡಿಎಸ್ ಪಕ್ಷದಲ್ಲಿ ಕರುಬರಿಗೆ ಆದ್ಯತೆಯೇ ಇಲ್ಲ ಎಂದು ಹೇಳಿದ್ದಾರೆ.

ಪಕ್ಷದ ರಾಜ್ಯಾದ್ಯಕ್ಷನಾಗಿ ನಾನು ಹೇಳಿದ ಒಬ್ಬರಿಗೂ ಚುನಾವಣೆಯಲ್ಲಿ ಟಿಕೆಟ್ ನೀಡದೆ ದುರಾಂಕರದಿಂದ ವರ್ತಿಸಿದ್ದಾರೆ. ಹಣ ಬಲವೇ ಮುಖ್ಯ ಎನ್ನುವ ಮನೋಭಾವವನ್ನು ಇನ್ನಾದರೂ ಬಿಡದಿದ್ದಲ್ಲಿ ಒಳಿತಾಗದು ಎಂದು ಪರೋಕ್ಷವಾಗಿ ಸಚಿವ ಸಾ.ರಾ.ಮಹೇಶ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಈ ಮೂಲಕ ಪರೋಕ್ಷವಾಗಿ ಜೆಡಿಎಸ್ ನಾಯಕರಿಗೂ ಕೂಡ ಸಂದೇಶ ರವಾನಿಸಿದ್ದಾರೆ.